ಕೊರೋನಾ ಸೋಂಕಿಗೆ ಸ್ಯಾಂಡಲ್​ವುಡ್​ ನಿರ್ದೇಶಕ ಭರತ್ ಬಲಿ

| Updated By: Lakshmi Hegde

Updated on: Dec 25, 2020 | 2:54 PM

ಇಂದು ಬೆಳಗ್ಗೆ ಬಂದ ಭರತ್ ಇನ್ನಿಲ್ಲ ಎಂಬ ಸುದ್ದಿ ತೀರಾ ವಿಷಾದ ಹುಟ್ಟಿಸಿತು. ಕೋವಿಡ್ ಜೊತೆಗೆ ಇತರೇ ಆರೋಗ್ಯ ಸಮಸ್ಯೆಗಳು ಸೇರಿ ಅವರ ಬಲಿಪಡೆದಿವೆ ಎಂದು ಭರತ್​ ಸಾವಿನ ಬಗ್ಗೆ ಗೀತರಚನಕಾರ ಕವಿರಾಜ್ ದುಃಖ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸೋಂಕಿಗೆ ಸ್ಯಾಂಡಲ್​ವುಡ್​ ನಿರ್ದೇಶಕ ಭರತ್ ಬಲಿ
ನಿರ್ದೇಶಕ ಭರತ್
Follow us on

ಬೆಂಗಳೂರು: ‘ಸಾಹೇಬ’ ಮತ್ತು ‘ಕಂಠಿ’ ಸಿನೆಮಾ ಖ್ಯಾತಿಯ ನಿರ್ದೇಶಕ ಭರತ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದ ನಿನ್ನೆ ಸಾವಿಗೀಡಾಗಿದ್ದಾರೆ. ಇವರು ಪತ್ನಿ-ಪುತ್ರಿಯನ್ನು ಅಗಲಿದ್ದು, ಅಂತ್ಯಸಂಸ್ಕಾರ ನಿನ್ನೆ ಕೆಂಗೇರಿಯಲ್ಲಿ ನಡೆದಿದೆ.

45 ವರ್ಷದ ಭರತ್ ಚಾಮರಾಜನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ರೀಮುರಳಿ, ರಮ್ಯಾ ಅಭಿನಯದ ಕಂಠಿ ಸಿನೆಮಾ ಮತ್ತು ಮನೋರಂಜನ್ ರವಿಚಂದ್ರನ್ ನಟನೆಯ  ಸಾಹೇಬ  ಸಿನೆಮಾ ನಿರ್ದೇಶನದ ಮಾಡುವುದರ ಮೂಲಕ ಜನಮನ್ನಣೆ ಗಳಿಸಿದ್ದರು.

ಗೀತರಚನಕಾರ ಕವಿರಾಜ್ ಫೇಸ್​ಬುಕ್​ ಪೋಸ್ಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.  ‘ಸಿನೆಮಾ ಪಯಣದ ಆರಂಭದ ದಿನಗಳಲ್ಲಿ ಗೀತರಚನೆಕಾರನಾಗಿ ಮನ್ನಣೆ ಗಳಿಸಲು ‘ಕಂಠಿ’ ಸಿನೆಮಾಕ್ಕೆ ಬರೆದ ‘ಜಿನುಜಿನುಗೋ ಜೇನಹನಿ’ ಮತ್ತು ‘ಬಾನಿನಿಂದ ಬಾ ಚಂದಿರ ಹಾಡುಗಳು ನೆರವಾಗಿದ್ದವು. ‘ಸಾಹೇಬ್’ ಸಿನೆಮಾಕ್ಕೂ ಶೀರ್ಷಿಕೆ ಗೀತೆ ಬರೆಯುವ ಅವಕಾಶ ಸಿಕ್ಕಿತ್ತು. ಸುಮಾರು ಹದಿನಾರು ವರ್ಷಗಳ ಹಿಂದೆ ಆ ಕಾಲಕ್ಕೆ ಕಂಠಿ ನಿಜವಾದ ವಿಭಿನ್ನ ಸಿನಿಮಾ ಅಗಿ ಗೆದ್ದಿತ್ತು.’

‘ಬೆಳಗಾವಿಯ ಕನ್ನಡ ಮರಾಠಿ ಭಾಷಾ ಸಂಘರ್ಷದ ಹಿನ್ನೆಲೆಯಲ್ಲಿ ಲವ್ ಸ್ಟೋರಿಯೊಂದನ್ನು ಸೊಗಸಾಗಿ ಹೆಣೆದು ‘ಭರತ್’ ಎಲ್ಲರ ಗಮನ ಸೆಳೆದಿದ್ದರು. ಇಂತಹ ಅದ್ಭುತ ಸಿನಿಮಾವನ್ನು ಮೊದಲ ಯತ್ನದಲ್ಲೇ ಕೊಟ್ಟ ಭರತ್ ಅವರಿಗೆ ಮುಂದೆ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಲು ಆಗಲೇ ಇಲ್ಲ. ಎಷ್ಟೇ ಪ್ರತಿಭಾವಂತನಾದರೂ ತೀರಾ ನೇರ ನಡೆವಳಿಕೆ, ಹೊಂದಾಣಿಕೆ ಮಾಡಿಕೊಳ್ಳದ ಸ್ವಭಾವವೇ ಅವರಿಗೆ ಮುಳುವಾಯಿತೇನೋ.’

‘ಇಂದು ಬೆಳಗ್ಗೆ ಬಂದ ಭರತ್ ಇನ್ನಿಲ್ಲ ಎಂಬ ಸುದ್ದಿ ತೀರಾ ವಿಷಾದ ಹುಟ್ಟಿಸಿತು. ಕೋವಿಡ್ ಜೊತೆಗೆ ಇತರೇ ಆರೋಗ್ಯ ಸಮಸ್ಯೆಗಳು ಸೇರಿ ಅವರ ಬಲಿಪಡೆದಿವೆ. ಇತ್ತೀಚೆಗೆ ಸಾವಿನ ಸುದ್ದಿ ಕೇಳಿ ಕೇಳಿ ಒಂದು ರೀತಿ ಬದುಕಿನ ಬಗ್ಗೆ ವೈರಾಗ್ಯ ಮೂಡುವಂತಾಗಿದೆ. ಕೊರೊನಾ ಸಂಕಷ್ಟದ ಬೇಸರದ ನಡುವೆ ಇತ್ತೀಚಿನ ದಿನಗಳಲ್ಲಿ ನಮ್ಮ ಸಿನಿಮಾ ರಂಗದ ಹಲವರು ಕೊನೆಯುಸಿರೆಳೆದರು. 2020 ಅದೇಕೆ ಇಷ್ಟು ಅಹಿತಕರ ವರ್ಷವಾಗುತ್ತಿದೇಯೋ?’ ಎಂದು ಭರತ್​ ಸಾವಿನ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ.