ವಿಮಾನದ ಮೂಲಕ ಬೆಂಗಳೂರಿನಲ್ಲಿ ಸ್ಯಾನಿಟೈಸರ್ ಸ್ಪ್ರೇ; ನಾಳೆ ಕಾರ್ಯಾಚರಣೆ ಆರಂಭ

| Updated By: ganapathi bhat

Updated on: Aug 14, 2021 | 1:11 PM

ನಾಳೆ ಸಂಜೆ 4 ಗಂಟೆಗೆ ಸ್ಯಾನಿಟೈಸೇಷನ್ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಗಂಟೆಗೆ 300 ಲೀಟರ್​ನಂತೆ 300 ಹೆಕ್ಟೇರ್ ಪ್ರದೇಶಕ್ಕೆ ಸ್ಯಾನಿಟೈಸ್ ಮಾಡಲಾಗುವ ಬಗ್ಗೆ ತೀರ್ಮಾನಿಸಲಾಗಿದೆ.

ವಿಮಾನದ ಮೂಲಕ ಬೆಂಗಳೂರಿನಲ್ಲಿ ಸ್ಯಾನಿಟೈಸರ್ ಸ್ಪ್ರೇ; ನಾಳೆ ಕಾರ್ಯಾಚರಣೆ ಆರಂಭ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಶನಿವಾರದಿಂದ (ಮೇ 29) ಬೆಂಗಳೂರಿನಲ್ಲಿ ವಿಮಾನದ ಮೂಲಕ ಸ್ಯಾನಿಟೈಸೇಷನ್ ಮಾಡಲು ನಿರ್ಧರಿಸಲಾಗಿದೆ. ಜಕ್ಕೂರು ಏರೋಡ್ರೋಮ್​ನಿಂದ ಸ್ಯಾನಿಟೈಸೇಷನ್​ ಕಾರ್ಯ ಆರಂಭವಾಗಲಿದೆ. ನಾಳೆ ಪ್ರಾಯೋಗಿಕವಾಗಿ ವಿಮಾನದ ಮೂಲಕ ಸ್ಯಾನಿಟೈಸರ್ ಸ್ಪ್ರೇ ಮಾಡಲಾಗುವುದು ಎಂದು ತಿಳಿದುಬಂದಿದೆ. ನಾಳೆ ಸಂಜೆ 4 ಗಂಟೆಗೆ ಸ್ಯಾನಿಟೈಸೇಷನ್ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಗಂಟೆಗೆ 300 ಲೀಟರ್​ನಂತೆ 300 ಹೆಕ್ಟೇರ್ ಪ್ರದೇಶಕ್ಕೆ ಸ್ಯಾನಿಟೈಸ್ ಮಾಡಲಾಗುವ ಬಗ್ಗೆ ತೀರ್ಮಾನಿಸಲಾಗಿದೆ.

ಅದರಂತೆ ನಾಳೆಯಿಂದ ಆಕಾಶದಿಂದ ಸ್ಯಾನಿಟೈಸರ್ ಸ್ಪ್ರೇ ಕಾರ್ಯ ಆರಂಭವಾಗಲಿದೆ. ಪ್ರಾಯೋಗಿಕವಾಗಿ ವಿಮಾನದ ಮೂಲಕ ಸ್ಯಾನಿಟೈಸರ್ ಸ್ಪ್ರೇ ನಡೆಯಲಿದೆ. ಕೊರೊನಾ ಸೋಂಕು ಎರಡನೇ ಅಲೆ ವ್ಯಾಪಕವಾಗಿ ಹಬ್ಬಿತ್ತು. ಕರ್ನಾಟಕ ರಾಜ್ಯದಲ್ಲಿ ಬಹಳಷ್ಟು ಸಾವು, ನೋವು ಕೂಡ ಸಂಭವಿಸಿತ್ತು. ಇದೀಗ ಸ್ವಲ್ಪ ಸ್ವಲ್ಪ ಕೊವಿಡ್-19 ಹೊಸ ಪ್ರಕರಣಗಳ ಸಂಖ್ಯೆ ಇಳಿಕೆಯತ್ತ ಮುಖಮಾಡಿದೆ. ದಿನೇದಿನೇ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ, ಸೋಂಕಿನ ವಿರುದ್ಧ ಎಚ್ಚರಿಕೆಯಿಂದ ಇರುವುದು ಅತೀ ಅಗತ್ಯವಾಗಿದೆ. ಕೊವಿಡ್ ವಿರುದ್ಧ ಹೋರಾಡಲು ರಾಜ್ಯದಲ್ಲಿ ಈ ನೂತನ ಕ್ರಮವನ್ನು ಕೂಡ ಕೈಗೊಳ್ಳಲಾಗಿದೆ.

ಕರ್ನಾಟಕದಲ್ಲಿ ಇಂದು ಒಂದೇ ದಿನ 22,823 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 52,253 ಜನರು ಕೊವಿಡ್​ನಿಂದ ಗುಣಮುಖರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 5736 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇಂದು ಒಂದೇ ದಿನ 31,237 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ರಾಜ್ಯದಲ್ಲಿ ಇಂದು ಒಂದೇ ದಿನ  1,38,983 ಜನರಿಗೆ ಕೊವಿಡ್ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.16.42ರಷ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷ ಒಳಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿಂದು ಒಂದೇ ದಿನ ಕೊರೊನಾಗೆ 401 ಜನರ ನಿಧನರಾಗಿದ್ದಾರೆ.  ಬಾಗಲಕೋಟೆ 252, ಬಳ್ಳಾರಿ 782, ಬೆಳಗಾವಿ 1,319, ಬೆಂಗಳೂರು ಗ್ರಾಮಾಂತರ 514, ಬೆಂಗಳೂರು ನಗರ 5,736, ಬೀದರ್ 64, ಚಾಮರಾಜನಗರ 318, ಚಿಕ್ಕಬಳ್ಳಾಪುರ 337, ಚಿಕ್ಕಮಗಳೂರು 559, ಚಿತ್ರದುರ್ಗ 489, ದಕ್ಷಿಣ ಕನ್ನಡ 799, ದಾವಣಗೆರೆ 522, ಧಾರವಾಡ 700, ಗದಗ 302,​  ಹಾಸನ 1170, ಹಾವೇರಿ 137, ಕಲಬುರಗಿ 91, ಕೊಡಗು 245, ಕೋಲಾರ 656, ಕೊಪ್ಪಳ 339,  ಮಂಡ್ಯ 825, ಮೈಸೂರು 1,677, ರಾಯಚೂರು 365, ರಾಮನಗರ 339, ಶಿವಮೊಗ್ಗ 1135, ತುಮಕೂರು 1,326, ಉಡುಪಿ 766, ಉತ್ತರ ಕನ್ನಡ 692, ವಿಜಯಪುರ 183, ಯಾದಗಿರಿ ಜಿಲ್ಲೆಯಲ್ಲಿ ಇಂದು 184 ಕೊರೊನಾ ಪ್ರಕರಣ ಪತ್ತೆಯಾಗಿದೆ.

ಇದನ್ನೂ ಓದಿ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿರುವ ಗ್ರಾಮಕ್ಕೆ ತೆರಳಿ ಸ್ಯಾನಿಟೈಸರ್ ಸಿಂಪಡಿಸಿದ ರೇಣುಕಾಚಾರ್ಯ

ATM ನಲ್ಲಿರುವ ಸ್ಯಾನಿಟೈಜರ್ ಬಾಟಲ್ ಕದ್ದವನ ವಿಡಿಯೋ ವೈರಲ್

Published On - 9:30 pm, Fri, 28 May 21