ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ವಸೂಲಿ; ಬಿಲ್ ಕಟ್ಟಿಲ್ಲವೆಂದು ರೋಗಿಯನ್ನು ಡಿಸ್ಚಾರ್ಜ್ ಮಾಡದ ಸಪ್ತಗಿರಿ ಆಸ್ಪತ್ರೆ

ಸೋಂಕಿತರೊಬ್ಬರು ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. 18 ದಿನಕ್ಕೆ 12 ಲಕ್ಷದ 13 ಸಾವಿರ ಬಿಲ್ ಆಗಿದೆ. ಬಿಲ್ ಕಟ್ಟಿಲ್ಲವೆಂದು ರೋಗಿಯನ್ನು ಸಪ್ತಗಿರಿ ಆಸ್ಪತ್ರೆ ಡಿಸ್ಚಾರ್ಜ್ ಮಾಡಿಲ್ಲ. ಬಿಬಿಎಂಪಿಯಿಂದ ಬೆಡ್ ಸಿಗದ ಕಾರಣ ನೇರವಾಗಿ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚು ಹಣ ವಸೂಲಿ; ಬಿಲ್ ಕಟ್ಟಿಲ್ಲವೆಂದು ರೋಗಿಯನ್ನು ಡಿಸ್ಚಾರ್ಜ್ ಮಾಡದ ಸಪ್ತಗಿರಿ ಆಸ್ಪತ್ರೆ
ಪ್ರಾತಿನಿಧಿಕ ಚಿತ್ರ
Follow us
sandhya thejappa
|

Updated on:May 15, 2021 | 11:02 AM

ಬೆಂಗಳೂರು: ಚಿಕಿತ್ಸೆ ಫಲಕಾರಿಯಾಗದೆ ಹಲವರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರೆ, ಆಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಬೆಡ್ ಸಿಗದೆ ಹಲವಾರು ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಕೊರೊನಾ ಆರ್ಭಟ ನಡುವೆ ರಾಜ್ಯದ ಹಲವು ಖಾಸಗಿ ಆಸ್ಪತ್ರೆಗಳು ಅಮಾನವೀಯತೆ ಮೆರೆಯುತ್ತಿವೆ. ಅಷ್ಟು ದುಡ್ಡು ಕಟ್ಟಿ.. ಇಷ್ಟು ದುಡ್ಡು ಕಟ್ಟಿ ಅಂತ ಒತ್ತಡ ಹೇರುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಈ ಸಾಲಿಗೆ ಸಪ್ತಗಿರಿ ಆಸ್ಪತ್ರೆ ಕೂಡಾ ಸೇರಿದೆ ಎಂಬ ಮಾಹಿತಿ ತಿಳಿದುಬಂದಿದೆ.

ಸೋಂಕಿತರೊಬ್ಬರು ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. 18 ದಿನಕ್ಕೆ 12 ಲಕ್ಷದ 13 ಸಾವಿರ ಬಿಲ್ ಆಗಿದೆ. ಬಿಲ್ ಕಟ್ಟಿಲ್ಲವೆಂದು ರೋಗಿಯನ್ನು ಸಪ್ತಗಿರಿ ಆಸ್ಪತ್ರೆ ಡಿಸ್ಚಾರ್ಜ್ ಮಾಡಿಲ್ಲ. ಬಿಬಿಎಂಪಿಯಿಂದ ಬೆಡ್ ಸಿಗದ ಕಾರಣ ನೇರವಾಗಿ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸರ್ಕಾರ ದರ ನಿಗದಿ ಮಾಡಿದೆ ಎಂದು ಧೈರ್ಯದಿಂದ ಆಸ್ಪತ್ರೆಗೆ ದಾಖಲು ಆಗುತ್ತಾರೆ. ಆದರೆ ಇದೀಗ ಸರ್ಕಾರದ ದರಕ್ಕಿಂತ ಹತ್ತು ಪಟ್ಟು ಹೆಚ್ಚು ಹಣವನ್ನು ಸಪ್ತಗಿರಿ ಆಸ್ಪತ್ರೆ ವಸೂಲಿ ಮಾಡುತ್ತಿದ್ದು, ಬಿಲ್ ಕಟ್ಟಿಲ್ಲವೆಂದು ಮೂರು ದಿನದಿಂದ ರೋಗಿಯನ್ನು ಡಿಸ್ಚಾರ್ಜ್ ಮಾಡುತ್ತಿಲ್ಲ.

ಸುಲಿಗೆಗೆ ಇಳಿದ ಸಪ್ತಗಿರಿ ಆಸ್ಪತ್ರೆ ಸರ್ಕಾರದಿಂದ ಸೋಂಕಿತರಿಗೆ ಬೆಡ್ ಸಿಗದ ಕಾರಣ ಖಾಸಗಿ ಆಸ್ಪತ್ರೆಗಳಲ್ಲಿ ಸುಲಿಗೆ ಶುರುವಾಗಿದೆ. ಸಪ್ತಗಿರಿ ಆಸ್ಪತ್ರೆ ಸರ್ಕಾರ ದರ ನಿಗದಿ ಮಾಡಿದ್ದರೂ ರೋಗಿಗಳಿಂದ ಹೆಚ್ಚು ಹಣ ವಸೂಲಿಗೆ ಮುಂದಾಗಿದೆ. 5 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ ಸಪ್ತಗಿರಿ ಆಸ್ಪತ್ರೆ 5 ಲಕ್ಷದ 81 ಸಾವಿರ ರೂ. ಬಿಲ್ ಮಾಡಿದೆ. ಪೇಶೆಂಟ್ ಜನರಲ್ ಬೆಡ್​ಲ್ಲಿ ಇದ್ದರು, ಹೆಚ್​ಡಿಯು ಬೆಡ್ ಎಂದು ನಮೂದು ಮಾಡುತ್ತಿದೆ. ಗೂಗಲ್ ಪೇ, ಚೆಕ್ ಮುಖಾಂತರ ಬಿಲ್ ಕಟ್ಟದಂತೆ ತಾಕೀತು ಮಾಡಿ ನಗದು ಹಣ ಕಟ್ಟುವಂತೆ ಪಟ್ಟು ಬಿದ್ದಿದೆ.

ಬಿಲ್

ಸರ್ಕಾರ ನಿಗದಿ ಮಾಡಿರುವ ದರ ಜನರಲ್ ವಾರ್ಡ್​ಗೆ 5,200 ರೂ. ಆಕ್ಸಿಜನ್ ವ್ಯವಸ್ಥೆಯುಳ್ಳ ವಾರ್ಡ್​ಗೆ ನಿತ್ಯ 7 ಸಾವಿರ ರೂ. ಐಸಿಯು ವಾರ್ಡ್​ಗೆ 8,500 ರೂ. ಐಸಿಯು ಜೊತೆಗೆ ವೆಂಟಿಲೇಟರ್ ಉಳ್ಳ ವಾರ್ಡ್​ಗೆ 10 ಸಾವಿರ ನಿಗದಿ ಮಾಡಲಾಗಿದೆ. ಉಳಿದಂತೆ ನಗದು ಹಾಗೂ ವಿಮಾ ಯೋಜನೆ ಹೊಂದಿರುವವರಿಗೆ ಜನರಲ್ ವಾರ್ಡ್​ಗೆ ದಿನಕ್ಕೆ 10 ಸಾವಿರ ರೂ. ಆಕ್ಸಿಜನ್ ವ್ಯವಸ್ಥೆಯುಳ್ಳ ವಾರ್ಡ್​ಗೆ 12 ಸಾವಿರ ರೂ. ಐಸಿಯು ವಾರ್ಡ್15,000 ರೂ. ಐಸಿಯು ಮತ್ತು ವೆಂಟಿಲೇಟರ್ ಹೊಂದಿರುವ ವಾರ್ಡ್​ಗೆ 25,000 ರೂ. ನಿಗದಿ ಮಾಡಲಾಗಿದೆ.

ಇದನ್ನೂ ಓದಿ

ಬೆಡ್​ಗಾಗಿ 5 ಆಸ್ಪತ್ರೆಗಳಿಗೆ ಅಲೆದು ಪ್ರಾಣ ಬಿಟ್ಟ ಮಹಿಳೆ; ಮೇಡಿ ಅಗ್ರಹಾರ ಚಿತಾಗಾರದ ಮುಂದೆ ಕಣ್ಣೀರಿಟ್ಟ ಪತಿ

ಕರ್ನಾಟಕದ ಹಳ್ಳಿಗರ ಅಭಿಮಾನಕ್ಕೆ ಸನ್ನಿ ಲಿಯೋನ್​ ಫಿದಾ; ಅನಾಥ ಮಕ್ಕಳ ತಾಯಿ ಎಂದ ಫ್ಯಾನ್ಸ್​

(Saptagiri Hospital is making more money than the government has set)

Published On - 9:22 am, Sat, 15 May 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?