ನಗರದಲ್ಲಿ 3 ಲಕ್ಷ ಬೀದಿನಾಯಿ, ಲಾಕ್ಡೌನ್ ವೇಳೆ ಊಟ ಸಿಗದೇ ಮನುಷ್ಯರ ಮೇಲೆ ದಾಳಿ, ವೃದ್ಧೆ ಸಾವು: ಬಿಬಿಎಂಪಿ ಎಚ್ಚೆತ್ತುಕೊಳ್ಳುತ್ತಾ?
ನಾಯಿಗಳ ಹಾವಳಿ ಜಾಸ್ತಿಯಾಗಿದೆ ಎಂದು ನಾಗರಿಕರು ದೂರುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಕೊರೊನಾ ಬ್ಯುಸಿ ಅಂತಾ ಹೇಳಿ ಕೈಕಟ್ಟಿಕೊಂಡು ಕುಳಿತಿದ್ದಾರೆ. ಇನ್ನು, ಮನುಷ್ಯರಿಗೆ ಏನಾದರಾಗಲಿ ಬೀದಿಯಲ್ಲಿ ಬಿದ್ದಿರುವ ಲಕ್ಷಾಂತರ ನಾಯಿಗಳಿಗೆ ಅನ್ನ-ನೀರು ಕೊಡಿ ಅಂತಾ ಸೋ ಕಾಲ್ಡ್ ಪ್ರಾಣಿಪ್ರಿಯರು ಮೊರೆಯಿಟ್ಟಿದ್ದಾರೆ. ಆದರೆ ರಾಜಧಾನಿಯಲ್ಲಿ ನಿನ್ನೆ ತಡರಾತ್ರಿ ಆಗಿರುವ ಅನಾಹುತವನ್ನು ಕಂಡು ಬಿಬಿಎಂಪಿ ಮತ್ತು ಪ್ರಾಣಿಪ್ರಿಯರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
ಬೆಂಗಳೂರು: ರಾಜಧಾನಿ ನಿವಾಸಿಗಳ ನಾಗರಿಕ ಸಮಸ್ಯೆಗಳ ಕೊರೊನಾ ಸಮ್ಮುಖದಲ್ಲಿ ದಿನೇದಿನೆ ಕಾಡುತ್ತಲೇ ಇವೆ. ಒಂದೆಡೆ ಕೊರೊನಾದಿಂದ ಇಡೀ ಬೆಂಗಳೂರು ಬೀಗ ಹಾಕಿಕೊಂಡು ಮಲಗಿರುವಾಗ ಬೀದಿ ನಾಯಿಗಳು ಎಚ್ಚೆತ್ತು ಕುಳಿತಿವೆ. ಖಾಲಿ ಬೀದಿಗಳಲ್ಲಿ ಅವುಗಳದ್ದೇ ಅಧಿಪತ್ಯವಾಗಿದೆ. ಬೀದಿಗೆ ನಾಲ್ಕು ನಾಯಿಗಳ ಲೆಕ್ಕದಲ್ಲಿ ಲಕ್ಷಾಂತರ ಬೀದಿನಾಯಿಗಳು ವಾಸಿಸುತ್ತಿವೆ. ಅಂದಾಜು 3 ಲಕ್ಷಕ್ಕೂಹೆಚ್ಚು ಬೀದಿ ನಾಯಿಗಳು ಬೆಂಗಳೂರಿನಲ್ಲಿ ಇವೆ.
ಈ ಮಧ್ಯೆ ನಾಯಿಗಳ ಹಾವಳಿ ಜಾಸ್ತಿಯಾಗಿದೆ ಎಂದು ನಾಗರಿಕರು ದೂರುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಕೊರೊನಾ ಬ್ಯುಸಿ ಅಂತಾ ಹೇಳಿ ಕೈಕಟ್ಟಿಕೊಂಡು ಕುಳಿತಿದ್ದಾರೆ. ಇನ್ನು, ಮನುಷ್ಯರಿಗೆ ಏನಾದರಾಗಲಿ ಬೀದಿಯಲ್ಲಿ ಬಿದ್ದಿರುವ ಲಕ್ಷಾಂತರ ನಾಯಿಗಳಿಗೆ ಅನ್ನ-ನೀರು ಕೊಡಿ ಅಂತಾ ಸೋ ಕಾಲ್ಡ್ ಪ್ರಾಣಿಪ್ರಿಯರು ಮೊರೆಯಿಟ್ಟಿದ್ದಾರೆ. ಆದರೆ ರಾಜಧಾನಿಯಲ್ಲಿ ನಿನ್ನೆ ತಡರಾತ್ರಿ ಆಗಿರುವ ಅನಾಹುತವನ್ನು ಕಂಡು ಬಿಬಿಎಂಪಿ ಮತ್ತು ಪ್ರಾಣಿಪ್ರಿಯರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
ನಿನ್ನೆ ತಡರಾತ್ರಿ ನರಭಕ್ಷಕ ನಾಯಿಗಳ ದಾಳಿಗೆ ನಿರ್ಗತಿಕ ವೃದ್ಧೆಯೊಬ್ಬರು ಬಲಿಯಾಗಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಊಟ ಸಿಗದೇ ನಾಯಿಗಳು ಮನುಷ್ಯರ ಮೇಲೆ ದಾಳಿಗಿಳಿಯುತ್ತಿವೆ ಎನ್ನಲಾಗಿದೆ. ಶುಕ್ರವಾರ ರಾತ್ರಿ 11.30 ರ ಸುಮಾರಿಗೆ ಶಶಿಧರ್ ಲೇಔಟ್ ನ ದ್ವಾರಕಾ ನಗರದಲ್ಲಿ 60 ವರ್ಷದ ವೃದ್ಧೆಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ಮೊದಲು ರಾತ್ರಿ 9.30ರಲ್ಲಿ ಇವೇ ನಾಯಿಗಳು ಅಟ್ಯಾಕ್ ಮಾಡಿವೆ. ಈ ವೇಳೆ ಅಲ್ಲಿದ್ದವರು ನಾಯಿಗಳನ್ನು ಓಡಿಸಿದ್ದರು. ಆದರೆ ಬಳಿಕ 11.30ರ ಸುಮಾರಿಗೆ ಮತ್ತೆ ಆ ನಾಯಿಗಳು ದಾಳಿ ನಡೆಸಿವೆ. ದಾಳಿಯಿಂದ ವೃದ್ಧೆ ತೀವ್ರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ. ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
(dog bite in rajarajeshwari nagar bengaluru during coronavirus lockdown older woman died)
ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಾಕು ನಾಯಿ ವೈಟ್ ಹೌಸ್ ಕೆಲಸಗಾರನಿಗೆ ಕಚ್ಚಿದ್ದು ಈಗ ಅಂತರಾಷ್ಟ್ರೀಯ ಸುದ್ದಿ!
Published On - 9:37 am, Sat, 15 May 21