ಮೈಸೂರು: ಈ ಬಾರಿಯ ಮೈಸೂರು ದಸರಾಗೆ ಜಿಲ್ಲೆಯಲ್ಲಿ ಚುನಾವಣೆ ಕಾವು ಜೋರಾಗಿಯೇ ಆರಂಭವಾಗಿದೆ. ಅತ್ತ ಶ್ರದ್ಧಾ ಭಕ್ತಿಯ ಪಾರಂಪರಿಕ ದಸರಾ ಚಟುವಟಿಕೆಗಳು ಗರಿಗೆದರಿದ್ದರೆ, ಇತ್ತ ರಾಜಕಾರಣಿಗಳು ಎಂದಿನಂತೆ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ವೈಯಕ್ತಿಕ ನಿಂದನೆಗಳಿಗೆ ಇಳಿದಿದ್ದು, ಆ ಚಾಮುಂಡಿ ತಾಯಿ ಇವರಿಗೆಲ್ಲಾ ಇನ್ನಾದರು ಸದ್ಭುದ್ಧಿ ಕೊಡಲಿ ಎಂದು ಮತದಾರ ಚಾಮುಂಡಿ ಬೆಟ್ಟದ ಮೇಲೆ ಕುಳಿತು ಆಶಿಸುತ್ತಿದ್ದಾನೆ.
ಹೆಚ್.ವಿಶ್ವನಾಥ್ ಒಬ್ಬ ಅತೃಪ್ತ ಪ್ರೇತಾತ್ಮ:
ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಒಂದು ಅತೃಪ್ತ ಪ್ರೇತಾತ್ಮ. ಅವರು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕಲು ಯತ್ನಿಸುತ್ತಿದ್ದಾರೆ. ಅವರು ವೈಯಕ್ತಿಕವಾಗಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ನನ್ನ ರಾಜಕೀಯ ಇತಿಹಾಸದಲ್ಲಿ ಯಾರ ವಿರುದ್ಧವೂ ವೈಯಕ್ತಿಕವಾಗಿ ಟೀಕಿಸಿಲ್ಲ. ಆದ್ರೆ, ಕಾಂಗ್ರೆಸ್ ಪಕ್ಷದಲ್ಲಿ ಹೆಚ್.ವಿಶ್ವನಾಥ್ ತಿರಸ್ಕೃತರಾಗಿದ್ದರು. ಆಗ ಅವರನ್ನು ಜೆಡಿಎಸ್ ಪಕ್ಷಕ್ಕೆ ಕರೆದುಕೊಂಡು ಬಂದ್ವಿ. ಈಗ ಆ ಅತೃಪ್ತ ಪ್ರೇತಾತ್ಮ ನಮ್ಮ ಮೇಲೆಯೇ ಆರೋಪಿಸುತ್ತಿದೆ ಎಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಜಿ ಸಚಿವ ಸಾ.ರಾ.ಮಹೇಶ್ ಕಿಡಿಕಾರಿದರು.
ನಮ್ಮ ಜೆಡಿಎಸ್ ಶಾಸಕರನ್ನ ಬೇರೆ ಪಕ್ಷಕ್ಕೆ ತಲೆಹಿಡಿದವನು ನೀನು. ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದಾಗ ನಮ್ಮ ಪಕ್ಷವನ್ನು ಕಾಯಬೇಕಾಗಿತ್ತು. ಆದ್ರೆ ಮುಂಬೈಗೆ ಹೋಗಿ ನಮ್ಮ ಶಾಸಕ ತಲೆ ಹಿಡಿದ್ದೀಯ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ವಿರುದ್ಧ ಏಕವಚನದಲ್ಲಿಯೇ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಹೆಚ್.ವಿಶ್ವನಾಥ್ ಒಬ್ಬ ಬ್ಲೂ ಬಾಯ್:
ಹೆಚ್.ವಿಶ್ವನಾಥ್ ಬ್ಲೂ ಬಾಯ್, ಅವ್ರು ಬ್ಲೂ ಫಿಲ್ಮ್ ಹೀರೋ, ನಿಮ್ಮ ಹೀರೋಹಿನ್ ಯಾರೆಂದು ನಮಗೆ ಗೊತ್ತು. ವಿಶ್ವನಾಥ್‌ಗೆ ಹಳ್ಳಿಹಕ್ಕಿ ಎಂದು ಯಾರು ಹೆಸರಿಟ್ರೋ ಗೊತ್ತಿಲ್ಲ, ಆದ್ರೆ ನೀನು ಎಂಥ ಕೊಚ್ಚೆಗುಂಡಿ ಎಂದು ಎಲ್ರಿಗೂ ಗೊತ್ತಿದೆ. ಅವರಿಗೆ ಬೇಸಿಗೆ ಕಾಲದಲ್ಲೊಂದ ಗೂಡು, ಚಳಿಗಾಲದಲ್ಲೊಂದು, ಮಳೆಗಾಲದಲ್ಲಿ ಒಂದು ಗೂಡು ಇದೆ. ಅಲ್ದೆ ವಿಶ್ವನಾಥ್ ಸಾಧನೆಗಳು ಅನೇಕ ಇವೆ. ಅವರಿಂದ ಹೇಗೆ ಕೆ.ಆರ್.ನಗರ ತಹಶೀಲ್ದಾರ್ ಕುಟುಂಬ ಬೀದಿಗೆ ಬಂತು. ಕೆ.ಆರ್.ನಗರದಲ್ಲಿ ನಿಮ್ಮಿಂದಾಗಿ ಯಾರೆಲ್ಲ ನೊಂದಿದ್ದಾರೆ. ಸಂವಿಧಾನ, ಮಾತಿನ ಮೇಲೆ ಹಿಡಿತ ಇಲ್ಲ ಎಂದು ಗೊತ್ತು. ಅದಕ್ಕೆ ನೀವು ಯಾವ ದೇಗುಲಕ್ಕೆ ಕರೆದರೂ ಬರುತ್ತೇನೆ ಎಂದು ವಿಶ್ವನಾಥ್‌ಗೆ ಮಾಜಿ ಸಚಿವ ಸಾರಾ ಮಹೇಶ್ ಸವಾಲ್ ಹಾಕಿದ್ದಾರೆ.
ಹೀರೋಯಿನ್ ಜೊತೆಗಿನ ಆಡಿಯೋ ಬಾಂಬ್ ಸಿಡಿಸಿದ ಸಾರಾ:
70ನೇ ವಯಸ್ಸಿನಲ್ಲಿ ಯಾವ ಹೀರೋಯಿನ್ ಜೊತೆ ನೀವು ಸಂಭಾಷಣೆ ಮಾಡಿದ್ದೀರ. 2 ತಿಂಗಳ ಹಿಂದೆ ಬಿಡುಗಡೆಯಾದ ಆ ಆಡಿಯೋ ಬಗ್ಗೆ ಯಾಕ್ ನೀವು ಮಾತನಾಡ್ತಿಲ್ಲ. ಬ್ಲೂ ಫಿಲ್ಮ್ ವಿಡಿಯೋ ಇಲ್ಲಿದೆ. ಕೋತಿ ತಿಂದು ಮೇಕೆ ಬಾಯಿಗೆ ವರೆಸೋಕೆ ಹೋಗ್ತಿರಲ್ಲ. ನಿನ್ನಂತ ಜೀವನ ಮಾಡಿದ್ರೆ ನಾನು ಹೊಳೆನೋ, ಕೆರೆನೋ ನೋಡ್ಕೊಳ್ತ ಇದ್ದೆ. ಈಗ ಹೇಳು ನಾನಾ ಅಯೋಗ್ಯ… ಇಲ್ಲ ನೀವಾ? ಚಡ್ಡಿ ಹೊಗೆದರೆ ಪರವಾಗಿಲ್ಲ, ಆದ್ರೆ ಕಂಡ ಕಂಡ ಕಡೆಯಲ್ಲಿ ಚಡ್ಡಿ ಬಿಚ್ಚಬಾರದು ಎಂದು ಸಾರಾ ಮಹೇಶ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಧವೆ ಜೊತೆ ಹೇಗೆ ನಡೆದುಕೊಂಡ್ರಿ ನೆನಪಿದ್ಯಾ?:
ವಿಧವೆಯೊಬ್ಬರು ನ್ಯಾಯಕ್ಕಾಗಿ ನಿಮ್ಮ ಮನೆಗೆ ಬಂದಿದ್ದರು. ವಕೀಲ ವೃತ್ತಿ ಮಾಡುವ ವೇಳೆ ನೀವು ಆಕೆ ಜತೆ ಹೇಗೆ ನಡೆಸಿಕೊಂಡ್ರಿ ಎಂದು ನೆನಪಿದ್ಯಾ? ನೀವು ಮಾಡಿರುವುದೆಲ್ಲಾ ನಮಗೆ ನೆನಪಿದೆ. ಅವರು ಅನರ್ಹರಾದ ಬಳಿಕ ಹುಚ್ ವಿಶ್ವನಾಥ್ ಆಗಿದ್ದಾರೆ. ಹೆಚ್.ವಿಶ್ವನಾಥ್‌ರನ್ನು ಮೊದಲು ನಿಮ್ಹಾನ್ಸ್‌ಗೆ ಸೇರಿಸಬೇಕು ಎಂದು ಸಾ.ರಾ.ಮಹೇಶ್ ವೈಯಕ್ತಿವಾಗಿ ವಾಗ್ದಾಳಿ ನಡೆಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲಿ:
ಹೆಚ್.ವಿಶ್ವನಾಥ್ ನನ್ನ ಮೇಲೆ ಮಾಡಿರುವ ಆರೋಪ ನಿಜವಾದ್ರೆ, ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಲು ಭಯವೇಕೆ? ನಿಮ್ಮ ಬಗ್ಗೆ ನಿಮಗಿಂತಾ ಹೆಚ್ಚಾಗಿ ಏಕವಚನದಲ್ಲಿ ಮಾತಾನಾಡೋದು ನನಗೆ ಕಷ್ಟವಲ್ಲ. ಆದ್ರೆ, ನೀವು ಹಿರಿಯರೆಂಬ ಕಾರಣಕ್ಕೆ ಏಕವಚನದಲ್ಲಿ ಮಾತಾಡಿಲ್ಲ. ನಮಗೆ ನಮ್ಮ ತಂದೆಯವರು ಅಂತಹ ಸಂಸ್ಕೃತಿ ಕಲಿಸಿಲ್ಲ. ಜನ ನೀರಿನಲ್ಲಿ ಮುಳುಗಿ ಹೋಗುವಾಗ ಹೆಚ್.ವಿಶ್ವನಾಥ್ ಏನು ಮಾಡ್ತಿದ್ರು? ಅವರಿಗೆ ಶ್ರದ್ಧೆ, ಬದ್ಧತೆ, ಕರ್ತವ್ಯ ಎಲ್ಲಿದೆ? ಈಗ ಸುಳ್ಳು ಹೇಳುವ ಕೆಲಸ ಮಾಡ್ತಿರೋದೇಕೆ? ನಾನು ಮಾಡಿರುವ ಆರೋಪ ಸುಳ್ಳಾದ್ರೆ ಚಾಮುಂಡಿ ಬೆಟ್ಟಕ್ಕೆ ಬಂದು ಆಣೆ ಮಾಡುವಂತೆ ಹೆಚ್.ವಿಶ್ವನಾಥ್‌ಗೆ ಸಾರಾ ಮಹೇಶ್ ಸವಾಲ್ ಹಾಕಿದ್ದಾರೆ.