ವಾಹನ ಸಾಲ: ಅರೆಸ್ಟ್ ವಾರಂಟ್‌ಗೆ ಹೆದರಿ ಗ್ರಾಮವನ್ನೇ ತೊರೆದ ರೈತ!
ಬೆಳಗಾವಿ: ಅಲ್ಲಿ ಪ್ರವಾಹದ ಪರಿಸ್ಥಿತಿ, ತುತ್ತು ಅನ್ನಕ್ಕು ಪರದಾಡುವಂತಾಗಿದೆ. ಮನೆ ಮಠ ಕಳೆದುಕೊಂಡು ಜನರ ಜೀವನ ಅಧೋಗತಿಯಾಗಿದೆ. ಹೌದು ನಾವು ಹೇಳ್ತಿರೋದು ಬೆಳಗಾವಿ ಜನರ ಕೂಗು. ಬೆಳಗಾವಿಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದ ನೀಲಕಂಠ ಮತ್ತು ನಿಂಗಪ್ಪ ಎಂಬ ಇಬ್ಬರು ರೈತರಿಗೆ ಅರೆಸ್ಟ್ ವಾರಂಟ್ ಜಾರಿಯಾಗಿದೆ. ರೈತ ನೀಲಕಂಠ ಐದು ವರ್ಷದ ಹಿಂದೆ ಎಲ್&ಟಿ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದು ವ್ಯವಸಾಯಕ್ಕೆ ಅನುಕೂಲವಾಗಲು ಟ್ರ್ಯಾಕ್ಟರ್ ಖರೀದಿಸಿದ್ದ, ನಿಗದಿತ ಸಮಯಕ್ಕೆ 2 ಕಂತುಗಳನ್ನೂ ಪಾವತಿಸಿದ್ದ. ನಂತರ ತೀವ್ರ ಬರ […]
ಬೆಳಗಾವಿ: ಅಲ್ಲಿ ಪ್ರವಾಹದ ಪರಿಸ್ಥಿತಿ, ತುತ್ತು ಅನ್ನಕ್ಕು ಪರದಾಡುವಂತಾಗಿದೆ. ಮನೆ ಮಠ ಕಳೆದುಕೊಂಡು ಜನರ ಜೀವನ ಅಧೋಗತಿಯಾಗಿದೆ.
ಹೌದು ನಾವು ಹೇಳ್ತಿರೋದು ಬೆಳಗಾವಿ ಜನರ ಕೂಗು. ಬೆಳಗಾವಿಯ ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದ ನೀಲಕಂಠ ಮತ್ತು ನಿಂಗಪ್ಪ ಎಂಬ ಇಬ್ಬರು ರೈತರಿಗೆ ಅರೆಸ್ಟ್ ವಾರಂಟ್ ಜಾರಿಯಾಗಿದೆ. ರೈತ ನೀಲಕಂಠ ಐದು ವರ್ಷದ ಹಿಂದೆ ಎಲ್&ಟಿ ಫೈನಾನ್ಸ್ ಸಂಸ್ಥೆಯಿಂದ ಸಾಲ ಪಡೆದು ವ್ಯವಸಾಯಕ್ಕೆ ಅನುಕೂಲವಾಗಲು ಟ್ರ್ಯಾಕ್ಟರ್ ಖರೀದಿಸಿದ್ದ, ನಿಗದಿತ ಸಮಯಕ್ಕೆ 2 ಕಂತುಗಳನ್ನೂ ಪಾವತಿಸಿದ್ದ.
ನಂತರ ತೀವ್ರ ಬರ ಹಿನ್ನೆಲೆ ಬೆಳೆಯ ಫಸಲು ಬಾರದೇ ಕಂತು ಮರುಪಾವತಿಸಲು ಆಗಿರಲಿಲ್ಲ. ಹೀಗಾಗಿ ಕಳೆದ ವರ್ಷವೇ ಎಲ್ ಆ್ಯಂಡ್ ಟಿ ಫೈನಾನ್ಸ್ ಸಿಬ್ಬಂದಿ ರೈತನ ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಹೋಗಿತ್ತು. ಆದರೆ ಈಗ ಇಂತಹುದೇ ಮತ್ತೊಂದು ಪರಿಸ್ಥಿತಿ ಎದುರಾಗಿದ್ದು, ಬೆಳಗಾವಿಯ ಮತ್ತೊಬ್ಬ ರೈತನಿಗೆ ಅರೆಸ್ಟ್ ವಾರಂಟ್ ನೀಡಲಾಗಿದೆ.
ಈ ಹಿಂದೆ ರಾಜ್ಯ ಸರ್ಕಾರದ ಸೂಚನೆ ಮೇರಗೆ ಜಿಲ್ಲಾಧಿಕಾರಿ ಕೋರ್ಟ್ ನೋಟಿಸ್ ಜಾರಿಗೊಳಿಸದಂತೆ ಆ ಸಂಸ್ಥೆಗೆ ಸೂಚಿಸಿದ್ದರು. ಆದರೆ, ಈಗ ಬೇರೊಂದು ಸಂಸ್ಥೆ ಮತ್ತೊಬ್ಬ ರೈತನಿಗೆ ನೋಟಿಸ್ ನೀಡುವ ಮೂಲಕ ಅದೇ ರೀತಿಯ ಉದ್ಧಟತನ ತೋರಿದೆ ಎಂದು ಸ್ಥಳೀಯ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ನಿಂಗಪ್ಪನಿಗೆ ಕೋಲ್ಕತ್ತಾ ಕೋರ್ಟ್ ಸೂಚನೆಯಂತೆ ಅರೆಸ್ಟ್ ವಾರಂಟ್ ಜಾರಿ ಮಾಡಲಾಗಿದೆ. ರಾಮದುರ್ಗ ಠಾಣೆ ಪೊಲೀಸರ ಮೂಲಕ ವಾರಂಟ್ ನೀಡಲಾಗಿದ್ದು, ಅರೆಸ್ಟ್ ವಾರಂಟ್‌ಗೆ ಹೆದರಿ ರೈತ ನಿಂಗಪ್ಪ ಊರು ಬಿಟ್ಟಿದ್ದಾನೆ.
Published On - 3:49 pm, Mon, 23 September 19