ವಿಜಯಪುರ: ಸರ್ಕಾರಿ ಶಾಲೆಯಲ್ಲಿನ ಬಿಸಿಯೂಟದ ಪಡಿತರವನ್ನೂ ಕಳ್ಳತನ ಮಾಡಿದ್ದಾರೆ. ವಿಜಯಪುರ ತಾಲೂಕಿನ ಸಾರವಾಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, 350 ಕೆಜಿ ಅಕ್ಕಿ, 60 ಕೆಜಿ ಗೋಧಿ, 30 ಕೆಜಿ ತೊಗರಿ ಬೇಳೆ, 8 ಪ್ಯಾಕೇಜ್ ಎಣ್ಣೆ ಕಳ್ಳತನ ಮಾಡಿದ್ದಾರೆ.
ಗಮನಾರ್ಹವೆಂದ್ರೆ ಈ ಮುಂಚೆಯೂ ಇದೇ ಶಾಲೆಯಲ್ಲಿ ಕಳ್ಳತನವಾಗಿತ್ತು. ಈ ಮುಂಚೆ ಟಿವಿ, ಸಿಲಿಂಡರ್, 2 ಕಂಪ್ಯೂಟರ್, ಅಕ್ಕಿ ಬೇಳೆ, ವಿದ್ಯಾರ್ಥಿಗಳ ಬ್ಯಾಗ್ ಕಳ್ಳತನ ಆಗಿತ್ತು. ಇದೀಗ ಮತ್ತೆ ಕಳ್ಳತನವಾಗಿದ್ದು ಸಂಶಯಕ್ಕೆ ಕಾರಣವಾಗಿದೆ.
ಈ ಮುಂಚೆಯೂ ಕಳ್ಳತನವಾಗಿದ್ದು, ಪೊಲೀಸರು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದೀಗ, ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 2:04 pm, Tue, 19 November 19