ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದರೆ ಮಹಾನಗರಗಳಲ್ಲೂ ಶಾಲೆ ಓಪನ್​- ಶಿಕ್ಷಣ ಸಚಿವ ಬಿ ಸಿ ನಾಗೇಶ್​

ತಾತ್ರಿಕ ಸಲಹಾ ಸಮಿತಿ ಅನುಮತಿ ಕೊಟ್ಟರೆ ಮಹಾನಗರಗಳಲ್ಲೂ ಶಾಲೆ ಓಪನ್ ಮಾಡುತ್ತೇವೆ ಎಂದಿದ್ದಾರೆ. ಸಲಹಾ ಸಮಿತಿ ಅಂತಿಮ ನಿರ್ಣಯ ಕೊಟ್ಟ ಮೇಲೆ ಸಿಎಂ ಜತೆ ಶಾಲೆ ತೆರೆಯುವುದರ ಬಗ್ಗೆ  ಚರ್ಚಿಸಿ ಅಂತಿಮಗೊಳಿಸುತ್ತೇವೆ.

ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದರೆ ಮಹಾನಗರಗಳಲ್ಲೂ ಶಾಲೆ ಓಪನ್​- ಶಿಕ್ಷಣ ಸಚಿವ ಬಿ ಸಿ ನಾಗೇಶ್​
ಶಿಕ್ಷಣ ಸಚಿವ ಬಿ ಸಿ ನಾಗೇಶ್ (ಸಂಗ್ರಹ ಚಿತ್ರ)
Follow us
TV9 Web
| Updated By: Pavitra Bhat Jigalemane

Updated on:Jan 20, 2022 | 12:50 PM

ರಾಜ್ಯದಲ್ಲಿ ಕೊರೋನಾ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಈ ನಡುವೆ ಶಿಕ್ಷಣ ಸಚಿವ ಬಿಸಿ ನಾಗೇಶ್ (B.C Nagesh)​ ತಾಂತ್ರಿಕ ಸಲಹಾ ಸಮಿತಿ ನಾಳೆ ಅನುಮತಿ ಕೊಟ್ಟರೆ ಮಹಾನಗರಗಳಲ್ಲೂ ಶಾಲೆ ಓಪನ್ ಮಾಡುತ್ತೇವೆ ಎಂದಿದ್ದಾರೆ. ಸಲಹಾ ಸಮಿತಿ ಅಂತಿಮ ನಿರ್ಣಯ ಕೊಟ್ಟ ಮೇಲೆ ಸಿಎಂ ಜತೆ ಶಾಲೆ ತೆರೆಯುವುದರ ಬಗ್ಗೆ  ಚರ್ಚಿಸಿ ಅಂತಿಮಗೊಳಿಸುತ್ತೇವೆ. 0-5 ವರ್ಷದ ಮಕ್ಕಳಲ್ಲಿ ಪಾಸಿಟಿವಿಟಿ (Positivity) ಇದೆ. ಆದರೆ ಎಸ್ಎಸ್ಎಲ್​ಸಿ (SSLC) ಪಿಯುಸಿ(PUC) ಮಕ್ಕಳಿಗೆ ಸಮಸ್ಯೆ ಕಾಣಿಸಿಕೊಂಡಿಲ್ಲ. ನಾವು ಶೈಕ್ಷಣಿಕ ದೃಷ್ಟಿಯಿಂದ ನೋಡಿದರೆ ಶಾಲೆಗಳನ್ನು ತೆರೆಯಬಹುದು ಅಂತ ಅನಿಸುತ್ತದೆ ಎಂದಿದ್ದಾರೆ. 1ರಿಂದ 10 ನೇ ತರಗತಿಯಲ್ಲಿ ನಿನ್ನೆ 1250 ಮಕ್ಕಳಲ್ಲಿ ಕೊರೋನಾ ದೃಢಪಟ್ಟಿದೆ, ಒಟ್ಟು  ಕೇಸ್ 6752 ಸಕ್ರಿಯ ಪ್ರಕರಣಗಳಿವೆ. ಇನ್ನು ನಿನ್ನೆ ಒಂದೇ ದಿನ, ಪಿಯುಸಿಯ 166 ಮಕ್ಕಳಿಗೆ ನಿನ್ನೆ ಪಾಸಿಟಿವ್ ಆಗಿದೆ. 897 ಆ್ಯಕ್ಟಿವ್ ಕೇಸ್​ನಲ್ಲಿ (Active Case) ಪಿಯುಸಿ ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಕಳೆದ ಸಿಎಂ ನೇತೃತ್ವದ ಸಭೆಯಲ್ಲಿ ಶಿಕ್ಷಣ ಇಲಾಖೆ ಕಡೆಯಿಂದ ಕಳೆದ ಎರಡೂ ಕೋವಿಡ್ ನಿಂದ ಆದ ಸಮಸ್ಯೆಗಳ ಬಗ್ಗೆ ವಿವರಿಸಿದ್ದೆವು. ಕಳೆದ ಬಾರಿ ತರಹ ರಾಜ್ಯದಲ್ಲಿ ಒಂದೇ ಸಲ ಶಾಲೆ ಬಂದ್ ಮಾಡಬಾರದು ಅಂತ ನಿರ್ಣಯ ತೆಗೆದುಕೊಂಡೆವು. ಜಿಲ್ಲಾಧಿಕಾರಿಗಳಿಗೆ ನಿರ್ಣಯ ತೆಗೆದುಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು.ಅನೇಕ ಜಿಲ್ಲೆಗಳಲ್ಲಿ ಈಗಲೂ ಕೂಡ ಸಂಪೂರ್ಣವಾಗಿ ಶಾಲೆಗಳು ಕ್ಲೋಸ್ ಆಗಿಲ್ಲ. ಮೈಸೂರು, ತುಮಕೂರು ಸೇರಿ ಕೆಲವು ಮಹಾನಗರಗಳಲ್ಲಿ  ಶಾಲೆಗಳನ್ನು ಕ್ಲೋಸ್ ಮಾಡಲಾಗಿತ್ತು. ಈವರೆಗೂ ಕೋವಿಡ್ ಮಕ್ಕಳ ಮೇಲೆ ಬೇರೆ ರೀತಿಯ ಪರಿಣಾಮ ಬೀರಿಲ್ಲ. ತಾಂತ್ರಿಕ ಸಲಹಾ ಸಮಿತಿ ಮುಂದೆ ಕೂಡ ನಾವು ಶಾಲೆಗಳ ಸ್ಥಿತಿಗತಿ ಬಗ್ಗೆ ವಿವರ ನೀಡುತ್ತೇವೆ. ಈಗಾಗಲೇ 80 ಪ್ರತಿಶತದಷ್ಟು ಸಿಲೆಬಸ್ ಕಂಪ್ಲೀಟ್ ಮಾಡಿದ್ದೇವೆ. ಮಕ್ಕಳ ಪಾಸಿಟಿವಿಟಿ ರೇಟ್ ಕೂಡ ಅನಲೈಸ್ ಮಾಡಿದ್ದೇವೆ. ನಾಳೆ ಸಿಎಂ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಗೃಹ ಸಚಿವ ಆರಗ ಸಾಹೇಬ್ರು ಇಬ್ಬರನ್ನೂ ವಜಾ ಮಾಡಲು ಸೂಚಿಸಿದ್ದೇನೆ ಅಂದ್ರು, ಆದರೆ ಅವರಿಬ್ಬರಿಗೂ ಆಗ್ಲೇ ಜಾಮೀನು ಸಿಕ್ತು!

Published On - 12:45 pm, Thu, 20 January 22

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ