ಮೈಸೂರು: ಬಿತ್ತನೆ ಮಾಡಿ 2 ತಿಂಗಳು ಕಳೆದರೂ ಮೊಳಕೆ ಬಾರದ ಹಿನ್ನೆಲೆಯಲ್ಲಿ ಕಳಪೆ ಬಿತ್ತನೆ ಬೀಜ ನೀಡಿದ್ದಾರೆಂದು ರೈತ ಕಂಪನಿ ವಿರುದ್ಧ ಆರೋಪ ಮಾಡಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹೆಚ್.ಮೇಟಗೇರಿಯ ರೈತ ಮೊಹಮ್ಮದ್ ದಸ್ತಗೀರ್ 10 ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿದ್ದರು. ರಾಯಲ್ ಗೋಲ್ಡ್ ಕಂಪನಿಯ ಬಿತ್ತನೆ ಬೀಜ ಖರೀದಿಸಿ ಜಮೀನಿನಲ್ಲಿ ಬಿತ್ತಿದ್ದರು. ಆದರೆ ಬಿತ್ತನೆ ಮಾಡಿ ಸುಮಾರು 2 ತಿಂಗಳು ಕಳೆದರೂ ಮೊಳಕೆ ಬಂದಿಲ್ಲ. ಬಿತ್ತನೆ ಬೀಜ, ಉಳುಮೆ ಖರ್ಚು ಸೇರಿ ₹2 ಲಕ್ಷ ನಷ್ಟವಾಗಿದೆ. ಹಣ ನಷ್ಟವಾಗಿ ರೈತ ಕಂಗಾಲಾಗಿದ್ದಾರೆ.
ರೈತ ಮೊಹಮ್ಮದ್ ದಸ್ತಗೀರ್ ತಮಗೆ ಕಂಪನಿಯಿಂದ ನ್ಯಾಯಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ರಾಯಲ್ ಗೋಲ್ಡ್ ಕಂಪನಿಯ ಬಿತ್ತನೆ ಬೀಜ ನೀಡಿದ ಖಾಸಗಿ ಟ್ರೇಡರ್ಸ್ ನಾವು ಬೇರೆ ಬೀಜವನ್ನು ಕೊಡುತ್ತೇವೆ ಆದ್ರೆ ಪರಿಹಾರ ಹಣ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಬಿತ್ತನೆ ಬೀಜದ ಸಮಸ್ಯೆ ಇಲ್ಲ ಎಂದ ಕೃಷಿ ಸಚಿವರ ವಿರುದ್ಧ ರೈತರ ಆಕ್ರೋಶ