ಶಿವಮೊಗ್ಗ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಪ್ರಚಾರ ಆರಂಭಿಸಿದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ
ಹಾಗೆಯೇ ಮಾರ್ಚ್ 26 ರಂದು ಅವರು ಶಿವಮೊಗ್ಗದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರಿರುತ್ತಾರೆ, ಆದರೆ ಈಶ್ವರಪ್ಪ ಸ್ವತಂತ್ರ ಉಮೇದುವಾರನಾಗಿ ಸ್ಪರ್ಧಿಸುತ್ತಿದ್ದಾರೆ, ಅವರಿಗೂ ಬೂತ್ ಮಟ್ಟದ ಕಾರ್ಯಕರ್ತರಿದ್ದಾರೆಯೇ ಅಥವ ಬಿಜೆಪಿ ಕಾರ್ಯಕರ್ತರನ್ನೇ ತಮ್ಮ ಕಾರ್ಯಕರ್ತರು ಅನ್ನುತ್ತಿದ್ದಾರೆಯೇ?
ಶಿವಮೊಗ್ಗ: ರಾಜ್ಯ ಬಿಜೆಪಿ ನಾಯಕತ್ವಕ್ಕೆ ಸೆಡ್ಡು ಹೊಡೆದಿರುವ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ಶಿವಮೊಗ್ಗ ಲೋಕಸಭಾ ಚುನಾವಣಾ ಕ್ಷೇತ್ರದಿಂದ (Shivamogga LS constituency) ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಾರ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಅವರು ಕ್ಷೇತ್ರದ ಪುರ್ಲೆ ಗುರ್ಪುರದಲ್ಲಿರುವ ಗಣಪತಿ ದೇವಸ್ಥಾನದಲ್ಲಿ (Ganesh mandir) ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು. ನಿರ್ದಿಷ್ಟವಾಗಿ ಇದೇ ಭಾಗದಿಂದ ಅವರು ಪ್ರಚಾರ ಕಾರ್ಯ ಆರಂಭಿಸಿರುವುದಕ್ಕೆ ಕಾರಣವಿದೆ. 1989 ರಲ್ಲಿ ಈಶ್ವರಪ್ಪ ರಾಜಕೀಯ ಬದುಕು ಆರಂಭಿಸಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಇದೇ ಭಾಗದ ಜನ ಅವರಿಗೆ ಅತಿಹೆಚ್ಚು ಲೀಡ್ ನೀಡಿ ಗೆಲ್ಲಿಸಿದ್ದರಂತೆ. ಹಾಗಿ ಅವರ ಮೇಲಿನ ಪ್ರೀತಿ-ವಿಶ್ವಾಸಕ್ಕಾಗಿ ಇಲ್ಲಿಗೆ ಬಂದಿದ್ದು ಮತ್ತು ಜನ ತಮ್ಮನ್ನು ಮನಸಾರೆ ಹರಿಸಿದ್ದನ್ನು ಈಶ್ವರಪ್ಪ ಹೇಳುತ್ತಾರೆ. ಹಾಗೆಯೇ ಮಾರ್ಚ್ 26 ರಂದು ಅವರು ಶಿವಮೊಗ್ಗದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಸಾಮಾನ್ಯವಾಗಿ ರಾಜಕೀಯ ಪಕ್ಷಗಳಿಗೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರಿರುತ್ತಾರೆ, ಆದರೆ ಈಶ್ವರಪ್ಪ ಸ್ವತಂತ್ರ ಉಮೇದುವಾರನಾಗಿ ಸ್ಪರ್ಧಿಸುತ್ತಿದ್ದಾರೆ, ಅವರಿಗೂ ಬೂತ್ ಮಟ್ಟದ ಕಾರ್ಯಕರ್ತರಿದ್ದಾರೆಯೇ ಅಥವ ಬಿಜೆಪಿ ಕಾರ್ಯಕರ್ತರನ್ನೇ ತಮ್ಮ ಕಾರ್ಯಕರ್ತರು ಅನ್ನುತ್ತಿದ್ದಾರೆಯೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಿಆರ್‌ಎಸ್ ಹೆಚ್ಚು ಕಾಣಿಸಿಕೊಂಡಿಲ್ಲ, ಕೆಸಿಆರ್ ಮೌನದ ಹಿಂದಿನ ರಹಸ್ಯವೇನು?