ಹೊಸ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅಧಿಕಾರ ಸ್ವೀಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 31, 2020 | 6:09 PM

ಹಿರಿಯ ಐಎಎಸ್​ ಅಧಿಕಾರಿ ಪಿ. ರವಿಕುಮಾರ್ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಹೊಸ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅಧಿಕಾರ ಸ್ವೀಕಾರ
ನಿವೃತ್ತ ಮುಖ್ಯಕಾರ್ಯದರ್ಶಿ ತ.ಮ.ವಿಜಯಭಾಸ್ಕರ (ಎಡ) ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
Follow us on

ಬೆಂಗಳೂರು: ಹಿರಿಯ ಐಎಎಸ್​ ಅಧಿಕಾರಿ ಪಿ. ರವಿಕುಮಾರ್ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯ ಕಾರ್ಯದರ್ಶಿಯವರ ಕಾರ್ಯಾಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಮುಖ್ಯ ಕಾರ್ಯದರ್ಶಿ, ತ.ಮ. ವಿಜಯ ಭಾಸ್ಕರ ಅವರು ಹೊಸದಾಗಿ ನಿಯುಕ್ತಿಗೊಂಡ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಪತ್ರ ನೀಡಿ ಸ್ವಾಗತಿಸಿದರು.

ನಿರ್ಗಮಿಸುತ್ತಿರುವ ಮುಖ್ಯ ಕಾರ್ಯದರ್ಶಿ ತ.ಮ. ವಿಜಯ ಭಾಸ್ಕರ ಅವರಿಗೆ ಹಿರಿಯ ಐಎಎಸ್​ ಅಧಿಕಾರಿಗಳು ಮಧ್ಯಾಹ್ನ ಸನ್ಮಾನ ಮಾಡಿದರು.

1984ರ ಬ್ಯಾಚ್​ನ ಕರ್ನಾಟಕ ಕೇಡರ್​ನ ಐಎಎಸ್​ ಅಧಿಕಾರಿ, ಪಿ. ರವಿಕುಮಾರ್ ಒಂದುವರೆ ವರ್ಷದ ಅಧಿಕಾರಾವಧಿಯನ್ನು ಹೊಂದಿದ್ದಾರೆ. ರವಿಕುಮಾರ್ ಅವರ ಕಾರ್ಯ ವೈಖರಿ ಭಿನ್ನವಾದುದು. ಅವರು ಕೆಲಸವನ್ನು ಸ್ಮಾರ್ಟ್​ ಆಗಿ ಮಾಡಲು, ಮಾಡಿಸಲು ಪ್ರಯತ್ನಿಸುತ್ತಾರೆ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ಜನಜನಿತ.

ದೊಡ್ಡ ಮೂಲಭೂತ ಯೋಜನೆಗಳನ್ನು ಜಾರಿಗೆ ತರುವ ಸಾಧ್ಯತೆ ಹೆಚ್ಚು. ಪಾವಗಡದ ಸೌರಶಕ್ತಿ ವಿದ್ಯುತ್ ಸ್ಥಾವರ ಯೋಜನೆಯನ್ನು ಸಂಪೂರ್ಣ ಜಾರಿಗೊಳಿಸಿದ್ದು ಅವರು ಇಂಧನ ಕಾರ್ಯದರ್ಶಿ ಆಗಿದ್ದಾಗ. ಆದ್ದರಿಂದ ಯೋಜನೆ ಅನುಷ್ಠಾನ ಮತ್ತು ಹೊಸ ಯೋಜನೆ ಪರಿಕಲ್ಪನೆ ಮಾಡಿ ಅದನ್ನು ಜಾರಿಗೊಳಿಸಲು ತಮ್ಮ ತಂಡವನ್ನು ತೊಡಗಿಸುವಲ್ಲಿ ಅವರದು ಮೇಲುಗೈ ಅಂತ ಅವರ ಜೊತೆ ಕೆಲಸ ಮಾಡುವ ಅಧಿಕಾರಿಗಳು ಹೇಳುತ್ತಾರೆ.

ನೂತನ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರನ್ನು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಅಭಿನಂದಿಸಿದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್​ಗೆ ಆತ್ಮೀಯ ಬೀಳ್ಕೊಡುಗೆ

Published On - 6:05 pm, Thu, 31 December 20