ಬಾಗಲಕೋಟೆ: ಜಿಲ್ಲೆಯ ಜಮಖಂಡಿಯಲ್ಲಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಸಾರಿಗೆ ನಿಗಮದ ಸಿಬ್ಬಂದಿಯ ಸಾವಿಗೆ ಕಾರಣರಾಗಿದ್ದ ಏಳು ಸಿಬ್ಬಂದಿಯನ್ನು ನೌಕರಿಯಿಂದ ವಜಾ ಮಾಡಲಾಗಿದೆ. ಈ ಸಂಬಂಧ ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ಸಾರಿಗೆ ನಿಗಮದ ವ್ಯವಸ್ಥಾಪಕ ಅರುಣ್ ಅರಕೇರಿ ಆದೇಶ ಹೊರಡಿಸಿದ್ದಾರೆ. ಮನೋಹರ ಐಹೊಳಿ, ಸದಾಶಿವ ಕಂಕನವಾಡಿ, ಲೋಹಿತ್ ದಾಸರ, ಮಲ್ಲಪ್ಪ ತಳವಾರ, ಚೇತನ ಕರ್ವೆ, ಬಿ.ವೈ.ಪೂಜಾರ ಅವರನ್ನು ನೌಕರಿಯಿಂದ ವಜಾ ಮಾಡಲಾಗಿದೆ.
ಬಸ್ ಚಾಲನೆ ವೇಳೆ ಕಲ್ಲೇಟಿನಿಂದ ಜಮಖಂಡಿ ಚಾಲಕ ನಬಿರಸೂಲ್ ಸಾಬ್ ಅವಟಿ (58) ಮೃತಪಟ್ಟಿದ್ದರು. ಏಪ್ರಿಲ್ 16ರಂದು ಜಮಖಂಡಿ ಸಮೀಪ ಕವಟಗಿ ಕ್ರಾಸ್ ಬಳಿ ಬಸ್ಗೆ ಕಲ್ಲು ತೂರಲಾಗಿತ್ತು. ಕಲ್ಲು ಕುತ್ತಿಗೆಗೆ ಬಡಿದು ಚಾಲಕ ಸಾವನ್ನಪ್ಪದ್ದರು. ಆರೋಪಿ ನೌಕರರನ್ನು ವಜಾ ಮಾಡಲಾಗಿದೆ ಎಂದು ಬಾಗಲಕೋಟೆ ವಿಭಾಗೀಯ ಸಂಚಾರ ವ್ಯವಸ್ಥಾಪಕ ಬಸವರಾಜ ಅಮ್ಮನವರ ಮಾಹಿತಿ ನೀಡಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ವೇಳೆ ಪ್ರತಿನಿತ್ಯ ಅಧಿಕಾರಿಗಳು ಒತ್ತಡ ಹಾಕುತ್ತಿದ್ದರು. ಕೆಲಸಕ್ಕೆ ಬರಬೇಕೆಂದು ದಿನವೂ ಒತ್ತಾಯ ಮಾಡುತ್ತಿದ್ದರು. ಅವರ ಒತ್ತಡಕ್ಕೆ ಮಣಿದು ಕೆಲಸ ಮಾಡಿದ್ದಕ್ಕೆ ಇಂಥಾ ಶಿಕ್ಷೆ ಸಿಕ್ಕಿದೆ. ಸಾರಿಗೆ ಸೇವೆಯ ಕರ್ತವ್ಯದಲ್ಲಿದ್ದಾಗ ನನ್ನ ಪತಿ ಕಲ್ಲೇಟಿಗೆ ಬಲಿಯಾಗಿದ್ದಾರೆ ಎಂದು ಮೃತರ ಪತ್ನಿ ಅಳಲು ತೋಡಿಕೊಂಡಿದ್ದರು. ಈಗ ಯಾರು ನಮಗೆ ದಿಕ್ಕು ಎಂದು ಮೃತ ಚಾಲಕ ಎನ್.ಕೆ. ಅವಟಿ ಪತ್ನಿ ಶಹಿರಾಬಾನು ಕಣ್ಣೀರು ಹಾಕಿದ್ದರು.
ಅರುಣ್ ಅರಕೇರಿ ಎಂಬಾತ ಕೆಎಸ್ಆರ್ಟಿಸಿ ಬಸ್ಗೆ ಕಲ್ಲು ತೂರಲು ಪ್ಲ್ಯಾನ್ ಮಾಡಿದ್ದ. ಕಲ್ಲು ತೂರಿದ್ದ ಬಸ್ನಲ್ಲಿಯೇ ಅರುಣ್ ಕೂಡ ಪ್ರಯಾಣಿಸುತ್ತಿದ್ದ. ಬಸ್ನಲ್ಲಿಯೇ ಕುಳಿತು ಕಲ್ಲು ತೂರುವುದಕ್ಕೆ ಸ್ಕೆಚ್ ರೂಪಿಸಿದ್ದ. ಆತ ನೀಡಿದ ಸೂಚನೆಯಂತೆ ಮಲ್ಲಪ್ಪ ತಳವಾರ, ಚೇತನ್ ಕರ್ವೆ, ಸದಾಶಿವ ಕಂಕಣವಾಡಿ, ಲೋಹಿತ್ ದಾಸರ ಕಲ್ಲೆ ಎಸೆದಿದ್ದಾರೆ ಎಂಬುದು ವಿಚಾರಣೆ ಬಳಿಕ ತಿಳಿದುಬಂದಿತ್ತು. ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಏಳು ಜನರನ್ನು ಈ ಹಿಂದೆ ಅಮಾನತು ಮಾಡಲಾಗಿತ್ತು. ಇದೀಗ ವಜಾ ಮಾಡಿ ಆದೇಶ ಹೊರಡಿಸಲಾಗಿದೆ.
(Seven Staff of Jamkhandi NWKRTC Depot Dismissed for Stone Pelting on bus cause for death of a driver)
ಇದನ್ನೂ ಓದಿ: ಎದೆಗೆ ಕಲ್ಲು ಬಿದ್ದರೂ ಪ್ರಯಾಣಿಕರ ರಕ್ಷಣೆ; ಗಂಭೀರ ಗಾಯಗೊಂಡಿದ್ದ ಕೆಎಸ್ಆರ್ಟಿಸಿ ಚಾಲಕ ಸಾವು
ಇದನ್ನೂ ಓದಿ: ಕೆಎಸ್ಆರ್ಟಿಸಿ ಚಾಲಕ ಸಾವು: ಎದೆಗೆ ಕಲ್ಲು ಎಸೆಯಲು ಮೊದಲೇ ನಡೆದಿತ್ತು ಪ್ಲ್ಯಾನ್; ಶಾಕಿಂಗ್ ಮಾಹಿತಿ ಬಹಿರಂಗ