AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಲಸಿಕೆ ಪಡೆಯಲು ಜನಸಾಮಾನ್ಯರು ಹಿಂದೇಟು.. ಆದ್ರೆ ಜನನಾಯಕರು, ಅಧಿಕಾರಿಗಳು ನಾ ಮುಂದು ತಾ ಮುಂದು!

ಈವರೆಗೂ 14 ಸಚಿವರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕ್ಲಿನ್‌ಟ್ರ್ಯಾಕ್ ಇಂಟರ್​ನ್ಯಾಷನಲ್ ಪ್ರೈ.ಲಿ.ನ ನಿರ್ದೇಶಕಿ ಚೈತನ್ಯಾ ಆದಿಕೇಶವಲು ಸ್ಪಷ್ಟನೆ ನೀಡಿದ್ದಾರೆ. ಭಾರತ್ ಬಯೋಟೆಕ್ ಸಂಸ್ಥೆ ಸಿದ್ಧಪಡಿಸಿರುವ ಲಸಿಕೆಯನ್ನು ನೀಡಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಲಸಿಕೆ ಪಡೆಯಲು ಜನಸಾಮಾನ್ಯರು ಹಿಂದೇಟು.. ಆದ್ರೆ ಜನನಾಯಕರು, ಅಧಿಕಾರಿಗಳು ನಾ ಮುಂದು ತಾ ಮುಂದು!
ಸಾಂದರ್ಭಿಕ ಚಿತ್ರ
Follow us
KUSHAL V
|

Updated on: Dec 26, 2020 | 3:07 PM

ಬೆಂಗಳೂರು: ಈವರೆಗೂ 14 ಸಚಿವರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕ್ಲಿನ್‌ಟ್ರ್ಯಾಕ್ ಇಂಟರ್​ನ್ಯಾಷನಲ್ ಪ್ರೈ.ಲಿ.ನ ನಿರ್ದೇಶಕಿ ಚೈತನ್ಯಾ ಆದಿಕೇಶವಲು ಸ್ಪಷ್ಟನೆ ನೀಡಿದ್ದಾರೆ. ಭಾರತ್ ಬಯೋಟೆಕ್ ಸಂಸ್ಥೆ ಸಿದ್ಧಪಡಿಸಿರುವ ಲಸಿಕೆಯನ್ನು ನೀಡಲಾಗಿದೆ ಎಂದು ಹೇಳಿದರು. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ 98 ಜನರಿಗೆ ಲಸಿಕೆ ನೀಡಲಾಗಿದ್ದು ಒಟ್ಟಾರೆಯಾಗಿ 120 ಜನರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ ಎಂದು ಹೇಳಿದರು.

ಜೊತೆಗೆ, ವೈದೇಹಿ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. 2 ಹಂತದಲ್ಲಿ ಈವರೆಗೂ 400 ಜನರಿಗೆ ಲಸಿಕೆ ನೀಡಿದ್ದೇವೆ. ಆದರೆ, ರಾಜ್ಯದಲ್ಲಿ ಲಸಿಕೆ ಪಡೆಯಲು ಸ್ವಯಂಸೇವಕರ ಕೊರತೆ ಎದುರಾಗಿದೆ. ಹೀಗಾಗಿ ಸಚಿವರು, ಶಾಸಕರು, IAS ಅಧಿಕಾರಿಗಳು, IPS ಅಧಿಕಾರಿಗಳಿಗೆ ಕೊವಿಡ್ ಲಸಿಕೆ ನೀಡಲಾಗಿದೆ ಎಂದು ಚೈತನ್ಯಾ ಆದಿಕೇಶವಲು ಹೇಳಿದರು.

‘ನಾನು ಕೊರೊನಾಗೆ ಕೊವ್ಯಾಕ್ಸಿನ್​ ಲಸಿಕೆ ತೆಗೆದುಕೊಂಡಿಲ್ಲ’ ಈ ನಡುವೆ, ಕೊವ್ಯಾಕ್ಸಿನ್​ ಲಸಿಕೆ ಯಾರು ಬೇಕಾದರೂ ಪಡೆಯಬಹುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ನಾನು ಕೊರೊನಾಗೆ ಕೊವ್ಯಾಕ್ಸಿನ್​ ಲಸಿಕೆ ತೆಗೆದುಕೊಂಡಿಲ್ಲ. ಆದರೆ, ಇತರ ಸಚಿವರು ಯಾರು ಲಸಿಕೆ ಪಡೆದಿದ್ದಾರೋ ಗೊತ್ತಿಲ್ಲ ಎಂದು ಸುಧಾಕರ್​ ಹೇಳಿದರು.

ಊಹೆಗೂ ಮೀರಿ ಅಡ್ಡಪರಿಣಾಮ ಬೀರುತ್ತಿದೆ ಫೈಜರ್ ಕೊರೊನಾ ಲಸಿಕೆ – ಡಾ. ಮಾನ್ಸೆಫ್ ಸ್ಲಾಯ್