ಮುರುಘಾ ಶ್ರೀಗೆ ಎದೆನೋವು; ಹೃದ್ರೋಗ ತಜ್ಞರಿಂದ ತಪಾಸಣೆ
ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮುರುಘಾ ಶ್ರೀಗಳು ಹೃದಯಾಘಾತಕ್ಕೆ ಒಳಗಾಗಿದ್ದು, ಹೆಚ್ಚಿನ ತಪಾಸಣೆಗಾಗಿ ಚಿತ್ರದುರ್ಗ ಜಿಲ್ಲಾಧಿಕಾರಿ ಆದೇಶದಂತೆ ಇಬ್ಬರು ಹೃದ್ರೋಗ ತಜ್ಞರನ್ನು ಕರೆಸಲಾಗಿದೆ.
ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಮುರುಘಾ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದ್ದು, ಹೆಚ್ಚಿನ ತಪಾಸಣೆಗಾಗಿ ಚಿತ್ರದುರ್ಗ ಜಿಲ್ಲಾಧಿಕಾರಿ ಆದೇಶದಂತೆ ಇಬ್ಬರು ಹೃದ್ರೋಗ ತಜ್ಞರನ್ನು ಕರೆಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಡಿಹೆಚ್ಒ ಡಾ.ರಂಗನಾಥ್, ಶಿವಮೂರ್ತಿ ಮುರುಘಾ ಶರಣರ ಆರೋಗ್ಯ ತಪಾಸಣೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸಾಧ್ಯವಿರುವ ಎಲ್ಲಾ ತಪಾಸಣೆ ಮಾಡಲಾಗಿದೆ. ಹೃದಯ ಸಂಬಂಧಿ ತಪಾಸಣೆ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿದೆ. ನಮ್ಮಲ್ಲಿರು ಎಲ್ಲಾ ತಪಾಸಣೆಗಳನ್ನ ಮಾಡಲಾಗಿದೆ. ಹೃದಯ ಸಂಬಂಧಿ ತಪಾಸಣೆ ನಂತರ ನಿರ್ಧಾರ ಆಗಲಿದೆ. ಶ್ರೀಗಳಿಗೆ 60 ವರ್ಷ ವಯಸ್ಸಾಗಿದ್ದು ದೇಹ ತುಂಬಾ ಸೂಕ್ಷ್ಮ ಆಗಿದೆ. ಈ ಹಿಂದೆ ಹೃದಯ ಸಂಬಂಧಿ ಸಮಸ್ಯೆ ಇತ್ತು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಫಿಜಿಷಿಯನ್ಸ್ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಫಿಜಿಷಿಯನ್ ಸಲಹೆ ಮೇರೆಗೆ ಹೃದ್ರೋಗ ತಜ್ಞರನ್ನ ಕರೆಸಿದ್ದೇವೆ. ಹೃದಯ ತಜ್ಞರ ಸಲಹೆ ಮೇರೆ ಮುಂದೇನು ಎಂಬ ನಿರ್ಧಾರ ಆಗಲಿದೆ ಎಂದರು.
ಜಿಲ್ಲಾ ಸರ್ಜನ್ ಬಸವರಾಜ್ ಮಾತನಾಡಿ, ಸಿರಿಯಸ್ ಕಂಡಿಷನ್ ಇರುವುದರಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ. ಫುಲ್ ರೋಡ್ಡೆಡ್ ಐಸಿಯು ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ. ಇನ್ನೂ ಅರ್ಧ ಗಂಟೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಆಸ್ಪತ್ರೆಗೆ ರವಾನಿಸುವ ಸಂಬಂಧ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ನಮ್ಮ ತಂಡ ಜೊತೆಯಲ್ಲಿ ಇರಲಿದೆ ಎಂದಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Fri, 2 September 22