ಶಕ್ತಿ ಯೋಜನೆ: ಸರ್ಕಾರಿ ಬಸ್​ಗಳಲ್ಲಿ ಈವರೆಗೆ 200 ಕೋಟಿ ಮಹಿಳೆಯರು ಪ್ರಯಾಣ

|

Updated on: May 07, 2024 | 11:25 AM

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ 10 ತಿಂಗಳು ಕಳೆದಿದ್ದು, ಏಪ್ರಿಲ್​ ಅಂತ್ಯದವರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಬಸ್​​ನಲ್ಲಿ ಬರೊಬ್ಬರಿ 200 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ರಾಜ್ಯ ಸರ್ಕಾರ 2023ರ ಜೂ. 11ರಿಂದ ಶಕ್ತಿ ಯೋಜನೆ ಆರಂಭಿಸಿತು.

ಶಕ್ತಿ ಯೋಜನೆ: ಸರ್ಕಾರಿ ಬಸ್​ಗಳಲ್ಲಿ ಈವರೆಗೆ 200 ಕೋಟಿ ಮಹಿಳೆಯರು ಪ್ರಯಾಣ
ಶಕ್ತಿ ಯೋಜನೆ
Follow us on

ಬೆಂಗಳೂರು, ಮೇ 07: ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojana) ಜಾರಿಯಾಗಿ 10 ತಿಂಗಳು ಕಳೆದಿದ್ದು, ಏಪ್ರಿಲ್​ ಅಂತ್ಯದವರೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (RTC) ನಾಲ್ಕು ನಿಗಮಗಳ ಬಸ್​​ನಲ್ಲಿ ಬರೊಬ್ಬರಿ 200 ಕೋಟಿ ಮಹಿಳೆಯರು (Woman) ಉಚಿತವಾಗಿ ಪ್ರಯಾಣಿಸಿದ್ದಾರೆ. ಮಹಿಳೆಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ 2023ರ ಜೂ. 11ರಿಂದ ಶಕ್ತಿ ಯೋಜನೆ ಆರಂಭಿಸಿತು. ಈ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮ ಕೆಎಸ್​ಆರ್​ಟಿಸಿ, ಎನ್​ಡಬ್ಲೂಕೆಆರ್​ಟಿಸಿ, ಬಿಎಂಟಿಸಿ, ಕೆಕೆಆರ್​ಟಿಸಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.

ಶಕ್ತಿ ಯೋಜನೆ ಜಾರಿಯಾದಾಗಿನಿಂದ ಏಪ್ರಿಲ್​ ಅಂತ್ಯದವರೆಗೆ ಒಟ್ಟು 348.97 ಕೋಟಿ ಜನರು ಪ್ರಯಾಣಿಸಿದ್ದರು. ಇದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಿದೆ. ಈವರೆಗೆ ಒಟ್ಟು 4,836 ಕೋಟಿ ರೂ. ಮೌಲ್ಯದ ಉಚಿತ ಟಿಕೆಟ್​ಗಳನ್ನು ನೀಡಲಾಗಿದೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ನವೆಂಬ್​ ಅಂತ್ಯದ ವೇಳೆಗೆಯೇ 100 ಕೋಟಿ ಮಹಿಳೆಯರು ಪ್ರಯಾಣಿಸಿದ್ದರು. ಇದೀಗ ಈ ಸಂಖ್ಯೆ 200 ಕೋಟಿಗೆ ಮುಟ್ಟಿದೆ. ಬಿಸಿಲು ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ನಾಲ್ಕು ದಿನಗಳ ಪೈಕಿ ಬಿಎಂಟಿಸಿ ಬಸ್​ಗಳಲ್ಲೇ ಅತಿ ಹೆಚ್ಚು ಜನರು ಪ್ರಯಾಣಿಸಿದ್ದಾರೆ. ಯೋಜನೆ ಜಾರಿಯಾದಾಗಿನಿಂದ ಮೇ 05ರವರೆಗೆ 64 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಒಟ್ಟು 842 ಕೋಟಿ ರೂ. ಮೌಲ್ಯದ ಟಿಕೆಟ್​ ನೀಡಲಾಗಿದೆ. ಕೆಎಸ್​ಆರ್​ಟಿಸಿ ಬಸ್​ನಲ್ಲಿ 61.03 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಒಟ್ಟು 1,844 ಕೋಟಿ ರೂ. ಮೌಲ್ಯದ ಟಿಕೆಟ್​ ನೀಡಲಾಗಿದೆ.

ಇದನ್ನೂ ಓದಿ: ಶಕ್ತಿ ಯೋಜನೆಯ ‘ಫಲಾನುಭವಿ ಬಳೆ ಗ್ಯಾಂಗ್​’ ಕೊನೆಗೂ ಅರೆಸ್ಟ್​! ಏನಿವರ ಕೈಚಳಕದ ಕತೆ?

ಎನ್​ಡಬ್ಲೂಕೆಆರ್​ಟಿಸಿ ಬಸ್​​​ನಲ್ಲಿ 47.2 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, 1,844 ಕೋಟಿ ರೂ. ಮೌಲ್ಯದ ಟಿಕೆಟ್​ ನೀಡಲಾಗಿದೆ. ಕೆಕೆಆರ್​ಟಿಸಿ ಬಸ್​ಗಳಲ್ಲಿ 30 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. 1000 ಕೋಟಿ ರೂ. ಮೌಲ್ಯದ ಟಿಕೆಟ್​ ನೀಡಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಹೊಸ ಬಸ್‌ಗಳು ಸೇರ್ಪಡೆಯಾಗದ ಕಾರಣ, ಬಸ್‌ಗಳ ಕೊರತೆಯು ಆಗಾಗ್ಗೆ ಕೇಳಿಬರುವ ದೂರು ಮತ್ತು ನಿಗಮಗಳಿಗೆ ಸವಾಲಾಗಿದೆ. ಗ್ರಾಮೀಣ ಭಾಗದಲ್ಲಿ ನಿಗದಿತ ಸಂಖ್ಯೆಯ ಬಸ್‌ಗಳನ್ನು ಓಡಿಸದ ಅಧಿಕಾರಿಗಳು ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. 1,000 ಸಾಮಾನ್ಯ ಬಸ್‌ಗಳನ್ನು ಸೇರ್ಪಡೆಗೊಳಿಸಲು ಯುಟಿಲಿಟಿ ಕ್ರಮ ಕೈಗೊಂಡಿದ್ದು, ಅವುಗಳಲ್ಲಿ 450 ಈಗಾಗಲೇ ಸೇರ್ಪಡೆಗೊಂಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಲೋಕಸಭಾ ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ