Karnataka Lok Sabha Election 2024:ರಾಜ್ಯದಲ್ಲಿ ಜೂ.4ರಂದು ಅಭ್ಯರ್ಥಿಗಳ ಭವಿಷ್ಯ ನಿಧಾರ

ವಿವೇಕ ಬಿರಾದಾರ
| Updated By: ರಮೇಶ್ ಬಿ. ಜವಳಗೇರಾ

Updated on:May 07, 2024 | 7:38 PM

Karnataka Lok Sabha Election 2024 Phase 2 Voting highlights : ಲೋಕಸಭೆ ಚುನಾವಣೆ 2024ರ ಮೂರನೇ ಹಂತದ ಮತದಾನ ಕರ್ನಾಟಕದ ಎರಡನೇ ಹಂತ ಸೇರಿದಂತೆ ಒಟ್ಟು ದೇಶದ 93 ಕ್ಷೇತ್ರಗಳಲ್ಲಿ ನಡೆದ ಮತದಾನ ಮುಕ್ತಾಯವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಪ್ರಮುಖರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಕರ್ನಾಟಕದ 14 ಕ್ಷೇತ್ರಗಳಲ್ಲಿ ಅಗ್ನಿ ಪರೀಕ್ಷೆಗಿಳಿದಿದ್ದು, ಒಟ್ಟು 227 ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರ ಸೇರಿದ್ದು, ಜೂನ್ 4ರಂದು ಅವರ ಭವಿಷ್ಯ ನಿರ್ಧಾರವಾಗಲಿದೆ.

Karnataka Lok Sabha Election 2024:ರಾಜ್ಯದಲ್ಲಿ ಜೂ.4ರಂದು ಅಭ್ಯರ್ಥಿಗಳ ಭವಿಷ್ಯ ನಿಧಾರ
ಲೋಕಸಭೆ ಚುನಾವಣೆ 2024

ದೇಶದಾದ್ಯಂತ ಇಂದು (ಮೇ 07) ಮೂರನೇ ಹಂತದ ಲೋಕಸಭಾ ಚುನಾವಣೆ (Lok Sabha Election 2024) ನಡೆಯುತ್ತಿದ್ದರೆ, ಕರ್ನಾಟಕದಲ್ಲಿ 2ನೇ ಹಂತದ ಮತದಾನ ಪ್ರಕ್ರಿಯೆ ಅಂತ್ಯವಾಗಿದೆ. ರಾಜ್ಯದ ಒಟ್ಟು 14 ಕ್ಷೇತ್ರಗಳಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ ಮತದಾನ ಇಂದು ಬೆಳಗ್ಗೆ 7ರಿಂದ ಆರಂಭವಾಗಿದ್ದು ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಈಗಾಗಲೇ ರಾಜ್ಯದ 14 ಕ್ಷೇತ್ರಗಳಲ್ಲಿ ಜನರು ಬಿಸಿಲಿನ ನಡುವೆಯೂ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟು 227 ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರ ಸೇರಿದೆ. ಇನ್ನು ಇದೇ ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

LIVE NEWS & UPDATES

The liveblog has ended.
  • 07 May 2024 06:12 PM (IST)

    Karnataka Lok Sabha Election 2024 LIVE: ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಅಂತ್ಯ

    ಇಂದು ಬೆಳಗ್ಗೆ 07ಗಂಟೆಯಿಂದ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದಿದ್ದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಮತಗಟ್ಟೆ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತಿರುವವರಿಗೆ ಮಾತ್ರ ಮತದಾನಕ್ಕೆ ಅವಕಾಶವಿರುತ್ತದೆ. ಇನ್ನುಳಿದಂತೆ ಯಾರಿಗೂ ಮತದಾನಕ್ಕೆ ಅವಕಾಶ ಇರುವುದಿಲ್ಲ. ಮತಗಟ್ಟೆಯಲ್ಲಿರುವವರು ಮತ ಹಾಕಿದ ಬಳಿಕ ಚುನಾವಣಾ ಸಿಬ್ಬಂದಿ ಮತಯಂತ್ರಗಳನ್ನು ಕ್ಲೋಸ್ ಮಾಡಿ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಮ್​ಗೆ ಕೊಂಡೊಯ್ಯಲಿದ್ದಾರೆ.

  • 07 May 2024 05:42 PM (IST)

    Karnataka Lok Sabha Election 2024 LIVE: ಸಂಜೆ 5ಗಂಟೆವರೆಗೆ ರಾಜ್ಯದ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ?

    ಕರ್ನಾಟಕದ 14 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಂತಿಮ ಹಂತಕ್ಕೆ ಬಂದಿದ್ದು, ಮತದಾನ ಮುಗಿಯುವುದಕ್ಕೆ ಕೆಲವೇ ನಿಮಿಷಗಳು ಬಾಕಿ ಇವೆ. ಇನ್ನು ಸಂಜೆ 5 ಗಂಟೆ ವರೆಗೆ ಒಟ್ಟು 66.05ರಷ್ಟು ಮತದಾನವಾಗಿದೆ. ಹಾಗಾದ್ರೆ, ಯಾವ್ಯಾವ ಲೋಕಸಭಾ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡುವುದಾದರೆ, ರಾಯಚೂರು 59.48%, ಬೀದರ್ 60.17%, ಕಲಬುರಗಿ 57.20%, ಚಿಕ್ಕೋಡಿ 72.75%, ಕೊಪ್ಪಳ 66.05%, ವಿಜಯಪುರ 60.95%, ಬಾಗಲಕೋಟೆ 65.55%, ಬೆಳಗಾವಿ 65.67%, ಬಳ್ಳಾರಿ 68.94%, ಹಾವೇರಿ 71.90%, ಶಿವಮೊಗ್ಗ 72.07% ಉತ್ತರ ಕನ್ನಡ 69.75%, ದಾವಣಗೆರೆ 70.90%, ಧಾರವಾಡ ಕ್ಷೇತ್ರದಲ್ಲಿ ಶೇ.67.15ರಷ್ಟು ಮತದಾನವಾಗಿದೆ.

  • 07 May 2024 05:13 PM (IST)

    Karnataka Lok Sabha Election 2024 LIVE: ಸುರಪುರದಲ್ಲಿ ಕಲ್ಲು ತೂರಾಟ

    ಲೋಕಸಭಾ ಚುನಾವಣೆ ನಡುವೆ ಯಾದಗಿರಿಯ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನದ ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ಶುರುವಾಗಿದ್ದು, ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕಲ್ಲು ತೂರಾಟದ ವೇಳೆ ಓರ್ವನ ತಲೆಗೆ ಗಂಭೀರ ಗಾಯವಾಗಿದೆ. ಮತದಾನದ ವೇಳೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವು ವಿಕೋಪಕ್ಕೆ ತಿರುಗಿದೆ. ಈ ವೇಳೆ ಕೈ-ಕಮಲ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ಹಿನ್ನೆಲೆ ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ‌ ದೌಡಾಯಿಸಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

  • 07 May 2024 05:03 PM (IST)

    ಮತದಾನಕ್ಕೆ ವಿನಯ್ ಕುಲಕರ್ಣಿಗೆ ಅನುಮತಿ, ಶಾರದಾ ಶಾಲೆ ಬಳಿ ಬಿಗಿ​ ಬಂದೋಬಸ್ತ್

    ಧಾರವಾಡ ಬಿಜೆಪಿ ಮುಖಂಡ ಯೋಗೀಶ್​ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಕೋರ್ಟ್​ ನಿರ್ಬಂಧ ವಿಧಿಸಿದೆ. ಆದ್ರೆ, ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ಹಲವು ದಿನಗಳ ಬಂತರ ವಿನಯ್ ಕುಲಕರ್ಣಿ ಅವರು ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಜಮಾಯಿಸಿದ್ದಾರೆ. ಇದರಿಂದ ಧಾರವಾಡ ನಗರದ ಶಾರದಾ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 75ರ ಬಳಿ ಪೊಲೀಸ್ ಬಿಗಿ​ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ವಿನಯ್ ಕುಲಕರ್ಣಿ ಅವರ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ

  • 07 May 2024 04:54 PM (IST)

    Karnataka Lok Sabha Election 2024 LIVE: ಒಂದೇ ಕುಟುಂಬ 69 ಸದಸ್ಯರಿಂದ ಮತದಾನ

    ಒಂದೇ ಕುಟುಂಬ 69 ಸದಸ್ಯರು ಮತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆ ಸಂಖ್ಯೆ 56,57 ರಲ್ಲಿ ನೂಲ್ವಿ ಗ್ರಾಮದ ಕಂಟೆಪ್ಪ ತೋಟದ ಕುಟುಂಬದ ಸದಸ್ಯ ತಮ್ಮ ಹಕ್ಕು ಚಲಾಯಿಸಿದ್ದಾರೆ. ಪ್ರತಿ ಚುನಾವಣೆಯಲ್ಲಿ ಮೂರು ತಂಡವಾಗಿ ವಾಹನ ಮೂಲಕ ಬಂದು ಮತ ಚಲಾವಣೆ ಮಾಡುತ್ತಿದ್ದರು. ಆದ್ರೆ ಈ ಚುನಾವಣೆಯಲ್ಲಿ ಏಕಕಾಲದಲ್ಲಿ ಬಂದು ಮತದಾನ ಮಾಡಿದ್ದಾರೆ. ಮೂರು ತಲೆಮಾರಿನ ಕುಟುಂಬದ ಸದಸ್ಯರು ಮತದಾನದಲ್ಲಿ ಭಾಗಿಯಾಗಿರುವುದು ವಿಶೇಷ. ಇನ್ನು ಮತ ಚಲಾಯಿಸಿದ ಬಳಿಕ ಎಲ್ಲರೂ ಸೇರಿ ಸೆಲ್ಫಿ ಪಡೆದು ಸಂಭ್ರಮಿಸಿದರು.

  • 07 May 2024 03:59 PM (IST)

    Karnataka Lok Sabha Election 2024 LIVE: ಪತ್ನಿ ಮತವನ್ನು ತಾವೇ ಹಾಕಿದ ಸಂಸದ ಸಿದ್ದೇಶ್ವರ್

    ದಾವಣಗೆರೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಅವರು ತಮ್ಮ ಪತ್ನಿಯ ಮತವನ್ನು ತಾವೇ ಹಾಕಿರುವ ಘಟನೆ ನಡೆದಿದೆ, ಈ ಮೂಲಕ ಸಂಸದ ಸಿದ್ದೇಶ್ವರ್ ಚುನಾವಣಾ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ದಂಪತಿ ಮತದಾನಕ್ಕಾಗಿ ದಾವಣಗೆರೆ ನಗರದ ಮಾಗನೂರು ಬಸಪ್ಪ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 236ಕ್ಕೆ ಆಗಮಿಸಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮತ ಹಾಕುವಾಗ ಗೊಂದಲವಾಗಿದೆ. ಬಳಿಕ ಪತಿ ಸಿದ್ದೇಶ್ವರ್, ಪತ್ನಿ ಮತದಾನವನ್ನು ತಾವೇ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ತಮ್ಮ ಮತ ತಾವೇ ಹಾಕಿಕೊಳ್ಳದ ಬಿಜೆಪಿ ಅಭ್ಯರ್ಥಿ ಅಡಳಿತ ಹೇಗೆ ನಡೆಸುತ್ತಾರೆ ಎಂದು ಸಾಮಾಜಿಕ‌‌ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.

  • 07 May 2024 03:50 PM (IST)

    Karnataka Lok Sabha Election 2024 LIVE: ದೇಶದ ಯಾವ್ಯಾವ ರಾಜ್ಯಗಳಲ್ಲಿಎಷ್ಟೆಷ್ಟು ಮತದಾನ?

    ಇನ್ನು ದೇಶದ ಯಾವ್ಯಾವ ರಾಜ್ಯಗಳಲ್ಲಿ 3 ಗಂಟೆವರೆ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡುವುದಾದರೆ,ಕರ್ನಾಟಕ 54.20%, ಅಸ್ಸಾಂ 63.08%, ಬಿಹಾರ 46.69%. ಛತ್ತೀಸ್‌ಗಢ 58.19%, ದಾದ್ರಾ 52.43%, ಗೋವಾ 61.39%, ಗುಜರಾತ್ 47.03%, ಮಧ್ಯಪ್ರದೇಶ 54.09%. ಮಹಾರಾಷ್ಟ್ರ 42.63%, ಉತ್ತರ ಪ್ರದೇಶ 46.78%. ಪಶ್ಚಿಮ ಬಂಗಾಳ 63.11%ರಷ್ಟು ಮತದಾನವಾಗಿದೆ.

  • 07 May 2024 03:46 PM (IST)

    Karnataka Lok Sabha Election 2024 LIVE: 3 ಗಂಟೆವರೆಗೆ ರಾಜ್ಯದ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾನ?

    ಕರ್ನಾಟಕದ 14 ಕ್ಷೇತ್ರಗಳಲ್ಲಿ 3 ಗಂಟೆ ವರೆಗೆ ಒಟ್ಟು ಶೇ.54.20ರಷ್ಟು ಮತದಾನವಾಗಿದೆ. ಹಾಗಾದ್ರೆ, ಯಾವ್ಯಾವ ಲೋಕಸಭಾ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಮತದಾನವಾಗಿದೆ ಎನ್ನುವುದನ್ನು ನೋಡುವುದಾದರೆ, ಬಾಗಲಕೋಟೆ 54.95%, ಬೆಳಗಾವಿ 53.14 %, ಬಳ್ಳಾರಿ 56.08%, ಬೀದರ್ 47.58%, ವಿಜಯಪುರ 50.143, ಚಿಕ್ಕೋಡಿ 59.64, ದಾವಣಗೆರೆ 57.29%, ಧಾರವಾಡ ಶೇ.55 %, ಕಲಬುರಗಿ 47.68%, ಹಾವೇರಿ 58.48, ಕೊಪ್ಪಳ 54.89, ರಾಯಚೂರು ಶೇ.47.70%, ಶಿವಮೊಗ್ಗ 57.96% ಹಾಗೂ ಉತ್ತರ ಕನ್ನಡ 55.98% ಮತದಾನವಾಗಿದೆ.

  • 07 May 2024 03:15 PM (IST)

    Karnataka Lok Sabha Election 2024 LIVE: ಊಟಕ್ಕಾಗಿ ಮತದಾನ ಪ್ರಕ್ರಿಯೆ ನಿಲ್ಲಿಸಿದ ಸಿಬ್ಬಂದಿ

    ಊಟಕ್ಕಾಗಿ ಮತದಾನ ಪ್ರಕ್ರಿಯೆ ನಿಲ್ಲಿಸಿರುವ ಘಟನೆ ಧಾರವಾಡದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ಮತಗಟ್ಟೆಯಲ್ಲಿ ನಡೆದಿದೆ. ಧಾರವಾಡದ ಕುಮಾರೇಶ್ವರನಗರ, ಮೂಕಾಂಬಿಕಾ ನಗರ, ನೀರಾವರಿ ಕ್ವಾರ್ಟರ್ಸ್‌ಗೆ ಸಂಬಂಧಿಸಿದ ಮತಗಟ್ಟೆ ಸಂಖ್ಯೆ 180ರ ಚುನಾವಣಾ ಸಿಬ್ಬಂದಿ ಮತದಾರರನ್ನು ಹೊರಗಡೆ ಕ್ಯೂನಲ್ಲಿ ನಿಲ್ಲಿಸಿ ಬಾಗಿಲು ಹಾಕಿಕೊಂಡು ಊಟ ಮಾಡಿದ್ದಾರೆ. ಇತ್ತ ಮತದಾನ ಮಾಡಲು ಬಂದಿದ್ದ ಮತದಾರರು ಸಿಬ್ಬಂದಿ ಊಟ ಮುಗಿಯುವವರೆಗೆ ಮತಗಟ್ಟೆ ಹೊರಗಡೆ ಕಾಯುತ್ತಾ ನಿಂತಿದ್ದಾರೆ.

  • 07 May 2024 03:09 PM (IST)

    Karnataka Lok Sabha Election 2024 LIVE: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮನತದಾನ

    ಕಾಂಗ್ರೆಸ್​ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಇಂದು ಮತದಾನ ಮಾಡಿದರು. ಪುತ್ರ ಉದ್ಯಮಿ‌ ಎಸ್ ಎಸ್ ಗಣೇಶ್ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ದಾವಣಗೆರೆ ನಗರದ ಎಂಸಿಸಿ ಬಿ ಬ್ಲಾಕ್ ಐಎಂಎ ಹಾಲ್ ಮತಗಟ್ಟೆ ಸಂಖ್ಯೆ 210 ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.

  • 07 May 2024 03:03 PM (IST)

    Karnataka Lok Sabha Election 2024 LIVE: ಮತದಾನ ಮಾಡಿದ ವಿಡಿಯೋ ವೈರಲ್

    ಧಾರವಾಡದಲ್ಲಿ ಮತದಾನ ಪ್ರಕ್ರಿಯೆ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಗುರುರಾಜ್ ಅಂಜನ್ ಎನ್ನುವ ವ್ಯಕ್ತಿ ಕಾಂಗ್ರೆಸ್‌ಗೆ ಮತ ಹಾಕಿದ ವೀಡಿಯೋವನ್ನು ಸೋಶಿಯಲ್ ಮೀಡಿಯಾ Xನಲ್ಲಿ ಪೋಸ್ಟ್ ಮಾಡಿದ್ದಾರೆ. ಮತದಾನದ ಗೌಪ್ಯತೆಯನ್ನು ಗುರುರಾಜ್ ಬಹಿರಂಗ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

  • 07 May 2024 02:45 PM (IST)

    Karnataka Lok Sabha Election 2024 LIVE: ವೋಟ್ ಮಾಡಿ ಉಚಿತವಾಗಿ ಐಸ್ ಕ್ರೀಂ ಸವಿಯಿರಿ

    ಧಾರವಾಡದಲ್ಲಿ ಮತದಾನ ಮಾಡಿದರೆ ಉಚಿತ ಆರೋಗ್ಯ ತಪಾಸಣೆಯಾದರೆ, ಇತ್ತ ಹುಬ್ಬಳ್ಳಿಯಲ್ಲಿ ವೋಟ್ ಮಾಡಿದವರಿಗೆ ಉಚಿತವಾಗಿ ಐಸ್ ಕ್ರೀಂ ನೀಡಲಾಗುತ್ತಿದೆ. ಉಜ್ವಲ ಭಾರತದ ಭವಿಷ್ಯಕ್ಕಾಗಿ ಮತದಾನ ಹೆಚ್ಚಿಸುವ ಉದ್ದೇಶದಿಂದ ಸಾಮಾಜಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಡೈರಿಸ್ ಐಸ್ಕ್ರೀಮ್ ಅವರು, ವೋಟ್ ಹಾಕಿದಂತ ಪ್ರತಿ ವ್ಯಕ್ತಿಗೆ ತಲಾ ಒಂದು ಐಸ್ಕ್ರೀಮ್ ಉಚಿತವಾಗಿ ಕೊಡುತ್ತಿದ್ದಾರೆ. ಇದರ ಬೆಲೆ 59 ರೂ ಯಿಂದ 90 ರೂ. ವರೆಗೆ ಇದೆ.

  • 07 May 2024 02:43 PM (IST)

    ಮತಹಾಕಿದವರಿಗೆ ಧಾರವಾಡದಲ್ಲಿ ಉಚಿತ ಆರೋಗ್ಯ ತಪಾಸಣೆ

    ಮತದಾನ ಪ್ರೇರಣೆಗೆ ಧಾರವಾಡದಲ್ಲಿ ವಿನೂತನ ಪ್ರಯೋಗ ಮಾಡಿದ್ದು, ಮತದಾನ ಮಾಡಿದವರಿಗೆ ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ಇಸಿಜಿ(ECG) ತಪಾಸಣೆ ಮಾಡಲಾಗುತ್ತಿದೆ. ಧಾರವಾಡದ(Dharwad) ಹರೀಶ ಮೆಡಿಕಲ್​ ಲ್ಯಾಬ್‌, ಮಾಳಮಡ್ಡಿ ಮತ್ತು ಕಾಮನಕಟ್ಟಿರುವ ಲ್ಯಾಬ್​ನಲ್ಲಿ ಕೈ ಬೆರಳಿನ ಶಾಹಿ ತೋರಿಸಿದವರಿಗೆ ಉಚಿತ ತಪಾಸಣೆ ಮಾಡಲಾಗುತ್ತಿದ್ದು, ಬೆಳಗ್ಗೆಯಿಂದ ನೂರಕ್ಕೂ ಹೆಚ್ಚು ಮತದಾರರಿಗೆ ತಪಾಸಣೆ ಮಾಡಲಾಗಿದೆ. ಇನ್ನು ಇದು ಸಂಜೆಯವರೆಗೂ ಉಚಿತ ತಪಾಸಣೆ ನಡೆಯಲಿದೆ. ಈ ಮೂರು ತಪಾಸಣೆಗೆ ಸೇರಿ ಒಟ್ಟು 500 ರೂಪಾಯಿ ಶುಲ್ಕ ಆಗುತ್ತದೆ. ಆದರೂ ಮತದಾನ ಮಾಡಿರೋ ಎಲ್ಲರಿಗೂ ಉಚಿತವಾಗಿ ಸೇವೆ ನೀಡಲಾಗುತ್ತಿದೆ.

  • 07 May 2024 01:54 PM (IST)

    Karnataka Lok Sabha Election 2024 LIVE: ಮಧ್ಯಾಹ್ನ 1 ಗಂಟೆವರೆಗೆ ಶೇ.41.59ರಷ್ಟು ಮತದಾನ

    ರಾಜ್ಯದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆವರೆಗೆ ಶೇ.41.59ರಷ್ಟು ಮತದಾನವಾಗಿದೆ. ಚಿಕ್ಕೋಡಿಯಲ್ಲಿ ಶೇ 45 ರಷ್ಟು, ಉತ್ತರ ಕನ್ನಡದಲ್ಲಿ ಶೇ 44.22 ರಷ್ಟು, ಶಿವಮೊಗ್ಗದಲ್ಲಿ ಶೇ 44.98 ರಷ್ಟು, ಬೆಳಗಾವಿಯಲ್ಲಿ ಶೇ.40.57 ರಷ್ಟು, ಬಳ್ಳಾರಿಯಲ್ಲಿ ಶೇ 44.36ರಷ್ಟು, ದಾವಣಗೆರೆಯಲ್ಲಿ ಶೇ 42.32 ರಷ್ಟು, ಕೊಪ್ಪಳದಲ್ಲಿ ಶೇ 42.74 ರಷ್ಟು, ಕಲಬುರಗಿಯಲ್ಲಿ ಶೇ 37.48 ರಷ್ಟು, ಉತ್ತರ ಕನ್ನಡದಲ್ಲಿ ಶೇ 44.22 ರಷ್ಟು, ಶಿವಮೊಗ್ಗದಲ್ಲಿ ಶೇ.44.98 ರಷ್ಟು, ಬೆಳಗಾವಿಯಲ್ಲಿ ಶೇ.40.57 ರಷ್ಟು, ಬಳ್ಳಾರಿಯಲ್ಲಿ ಶೇ 44.36 ರಷ್ಟು,  ದಾವಣಗೆರೆಯಲ್ಲಿ ಶೇ 42.32 ರಷ್ಟು, ಕೊಪ್ಪಳದಲ್ಲಿ ಶೇ 42.74 ರಷ್ಟು, ಕಲಬುರಗಿಯಲ್ಲಿ ಶೇ 37.48 ರಷ್ಟು ಮತದಾನವಾಗಿದೆ.

  • 07 May 2024 01:31 PM (IST)

    Karnataka Lok Sabha Election 2024 LIVE: ಮಧ್ಯಾಹ್ನ 1ರ ವರೆಗೆ ವಿಜಯಪುರದಲ್ಲಿ ಶೇ40.18 ರಷ್ಟು ಮತದಾನ. 

    ಮಧ್ಯಾಹ್ನದ 1 ಗಂಟೆವರೆಗೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ ಶೇ. 35.33 ರಷ್ಟು ಮತದಾನವಾಗಿದೆ. ಕಲಬುರಗಿಯಲ್ಲಿ ಶೇ 42.64 ರಷ್ಟು,  ವಿಜಯಪುರದಲ್ಲಿ ಶೇ 40.18 ರಷ್ಟು ಮತದಾನವಾಗಿದೆ.

  • 07 May 2024 01:06 PM (IST)

    Karnataka Lok Sabha Election 2024 LIVE: ವಿದೇಶದಿಂದ ಬಂದು ಮತದಾನ ಮಾಡಿದ ಯುವಕ

    ಬೆಳಗಾವಿ: ಕಳೆದ 10 ವರ್ಷಗಳಿಂದ ಅಬುದಾಬಿಯಲ್ಲಿರುವ ಯುವಕ ಸೂರಜ್ ಉಪಾಶೆ ಎಂಬ ಯುವಕ ಮತದಾನಕ್ಕಾಗಿ ಊರಿಗೆ ಬಂದಿದ್ದಾರೆ. ಇಂದು ಹುಕ್ಕೇರಿ ಪಟ್ಟಣದ ಗಾಂಧಿನಗರ ಶಾಲೆಯಲ್ಲಿ ಮತದಾನ ಮಾಡಿದರು. ಎಲ್ಲರೂ ತಮ್ಮ ಹಕ್ಕು ಚಲಾಯಿಸುವಂತೆ ಯುವಕ ಮನವಿ ಮಾಡಿದ್ದಾರೆ.

  • 07 May 2024 12:33 PM (IST)

    Karnataka Lok Sabha Election 2024 LIVE: ಮತಗಟ್ಟೆಗೆ ನಡೆದುಕೊಂಡು ಬಂದೇ ಹಕ್ಕು ಚಲಾಯಿಸಿದ ಶತಾಯುಷಿ

    ಗದಗ: ಗದಗ ತಾಲೂಕಿನ ಶಿರುಂಜ ಗ್ರಾಮದ ಶತಾಯುಷಿ ಈರಮ್ಮ ಗುಡ್ಡದ (103) ಎಂಬುವರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗೆ ಮೊಮ್ಮಕ್ಕಳ ಸಹಾಯದಿಂದ ನಡೆದುಕೊಂಡು ಬಂದು ಹಕ್ಕು ಚಲಾಯಿಸಿದರು. ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿ ಉಳಿದವರಿಗೆ ಮಾದರಿಯಾದರು.

  • 07 May 2024 12:15 PM (IST)

    Karnataka Lok Sabha Election 2024 LIVE: ಪತಿ ಸಾವಿನ ನೋವಿನಲ್ಲೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ಮಹಿಳೆ

    ಶಿವಮೊಗ್ಗ:  ಹೊಸನಗರ ತಾಲೂಕಿನ ಆಡುಗೋಡಿಯ ಕಲಾವತಿ ಎಂಬುವರ ಪತಿ ವೆಂಕಟೇಶ್ ಅನಾರೋಗ್ಯದ ಕಾರಣ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಮುಂಜಾನೆ ನಿಧನರಾಗಿದ್ದಾರೆ. ಪತಿಯ ಸಾವಿನ ವಿಚಾರ ತಿಳಿದು ದುಃಖದಲ್ಲೇ ಕಲಾವತಿಯವರು ಮತಗಟ್ಟೆಗೆ ಆಗಮಿಸಿ ಮತ ಹಾಕಿದ್ದಾರೆ. ಇದೀಗ ಮೃತ ಪತಿ ದೇಹ ನೋಡಲು ಹೋಗಿದ್ದಾರೆ.

  • 07 May 2024 12:00 PM (IST)

    Karnataka Lok Sabha Election 2024 LIVE: ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಮತದಾನ

    ಲೋಕಸಭೆ ಚುನಾವಣೆಗೆ ದೇಶದಲ್ಲಿ ಮೂರುನೇ ಹಂತದ ಮತದಾನ ನಡೆಯುತ್ತಿದೆ. ಬೆಳಗ್ಗೆ 11 ಗಂಟೆವರೆಗೆ ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಮತದಾನವಾಗಿದೆ. ಇಲ್ಲಿವರೆಗೆ ಶೇ.18.18ರಷ್ಟು ಮಾತ್ರ ಮತದಾನ ನಡೆದಿದೆ. ಪ್ರಶ್ಚಿಮ ಬಂಗಾಳದಲ್ಲಿ ಶೇ.32.82ರಷ್ಟು ಮತದಾನವಾಗಿದೆ.

    • ಮಹಾರಾಷ್ಟ್ರದಲ್ಲಿ ಶೇ 18.18
    • ಗುಜರಾತ್​ನಲ್ಲಿ ಶೇ 24.35
    • ಉತ್ತರ ಪ್ರದೇಶದಲ್ಲಿ ಶೇ 26.12
    • ಅಸ್ಸಾಂನಲ್ಲಿ ಶೇ 27.34
    • ಬಿಹಾರದಲ್ಲಿ ಶೇ 24.41
    • ಛತ್ತೀಸ್‌ಗಢದಲ್ಲಿ ಶೇ 29.90
    • ಪಶ್ಚಿಮ ಬಂಗಾಳ ಶೇ 32.82
    • ಕರ್ನಾಟಕದಲ್ಲಿ ಶೇ 24.48%
    • ಮಧ್ಯಪ್ರದೇಶದಲ್ಲಿ ಶೇ 30.21 ರಷ್ಟು ಮತದಾನವಾಗಿದೆ.
  • 07 May 2024 11:43 AM (IST)

    Karnataka Lok Sabha Election 2024 LIVE: ಬೆಳಗ್ಗೆ 11 ಗಂಟೆವರೆಗೆ ಶೇ.24.48ರಷ್ಟು ಮತದಾನ

    ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಈ ಕ್ಷೇತ್ರಗಳಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇ.24.48ರಷ್ಟು ಮತದಾನವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಶೇ.27.23ರಷ್ಟು ಮತದಾನವಾಗಿದೆ. ಬೆಳಗಾವಿಯಲ್ಲಿ ಶೇ23.91ರಷ್ಟು, ಬಳ್ಳಾರಿಯಲ್ಲಿ ಶೇ26.45ರಷ್ಟು, ದಾವಣಗೆರೆಯಲ್ಲಿ ಶೇ23.73ರಷ್ಟು, ಶಿವಮೊಗ್ಗದಲ್ಲಿ ಶೇ27.22ರಷ್ಟು, ರಾಯಚೂರಿನಲ್ಲಿ ಶೇ.22.05ರಷ್ಟು, ಬಾಗಲಕೋಟೆಯಲ್ಲಿ  ಶೇ.23.80ರಷ್ಟು, ವಿಜಯಪುರದಲ್ಲಿ ಶೇ.23.91ರಷ್ಟು, ಧಾರವಾಡದಲ್ಲಿ ಶೇ.24ರಷ್ಟು, ಕಲಬುರಗಿಯಲ್ಲಿ ಶೇ.22.64ರಷ್ಟು, ಹಾವೇರಿಯಲ್ಲಿ ಶೇ.24.24ರಷ್ಟು, ಉತ್ತರ ಕನ್ನಡದಲ್ಲಿ ಶೇ.27.65ರಷ್ಟು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 24.64ರಷ್ಟು ಮತದಾನವಾಗಿದೆ.

  • 07 May 2024 11:12 AM (IST)

    Karnataka Lok Sabha Election 2024 LIVE: ಒಂದೇ ಕುಟುಂಬದ 30 ಮತದಾರರಿಂದ ಹಕ್ಕು ಚಲಾವಣೆ

    ಕಲಬುರಗಿ: ಹೆಚ್​ಕೆ ಸೀತನೂರು ಕುಟುಂಬದ 30  ಜನ ಸದಸ್ಯರು ಮತದಾನ ಮಾಡಿದರು. ಸಂಗಮೇಶ್ವರ ಕಾಲೋನಿಯಲ್ಲಿನ ಮತಗಟ್ಟೆ ಸಂಖ್ಯೆ 137 ರಲ್ಲಿ ಮತ ಚಲಾಯಿಸಿದರು. ಕುಟುಂಬದ ಮುಖ್ಯಸ್ಥರಾದ ಮೋಹನ್ ಸೀತನೂರು ಸೇರಿ ಆರು ಜನ ಸಹೋದರರು, ಅವರ ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿ ಒಟ್ಟು 30 ಜನ ಮತದಾನ ಮಾಡಿದರು.

  • 07 May 2024 10:47 AM (IST)

    Karnataka Lok Sabha Election 2024 LIVE: ಮತ ಚಲಾಯಿಸಿದ ಮಲ್ಲಿಕಾರ್ಜುನ ಖರ್ಗೆ

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಟುಂಬದವರ ಜೊತೆ ಆಗಮಿಸಿ ಕಲಬುರಗಿಯ ಬಸವನಗರದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.

  • 07 May 2024 10:37 AM (IST)

    Karnataka Lok Sabha Election 2024 LIVE: ಕೊಪ್ಪಳ ಜಿಲ್ಲೆಯ ಹಲವಡೆ ಮತದಾನ ಬಹಿಷ್ಕಾರ

    ಕೊಪ್ಪಳ: ಕುಕನೂರು ಪಟ್ಟಣದ 19ನೇ ವಾರ್ಡ್​ ಜನರು ಮತದಾನ ಬಹಿಷ್ಕರಿಸಿದ್ದಾರೆ. ಬೆಳಿಗ್ಗೆಯಿಂದ ಇದುವರೆಗೂ ಒಬ್ಬರೂ ಮತದಾನ ಮಾಡಿಲ್ಲ. ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು ಎಂದು ಮತದಾನ ಬಹಿಷ್ಕಾರ ಮಾಡಿದ್ದಾರೆ. ಗುದ್ನೇಪ್ಪನಮಠದ ಬೂತ್​ನಲ್ಲಿ 1040 ಮತಗಳಿವೆ

  • 07 May 2024 10:21 AM (IST)

    Karnataka Lok Sabha Election 2024 LIVE: 9 ಗಂಟೆಯವರೆಗೆ ದೇಶದಲ್ಲಿ ಎಷ್ಟು ಮತದಾನ

    ದೇಶದಲ್ಲಿ 9 ಗಂಟೆಯವರೆಗೆ ಶೇ.10.57ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇ.14.60ರಷ್ಟು ಮತದಾನ ನಡೆದಿದೆ. ಆಸ್ಸಾಂನಲ್ಲಿ ಶೇ 10.12, ಬಿಹಾರನಲ್ಲಿ ಶೇ 10.03, ಛತ್ತೀಸಗಡನಲ್ಲಿ ಶೇ 13.24, ಗೋವಾದಲ್ಲಿ ಶೇ 12.35, ಗುಜರಾತಿನಲ್ಲಿ ಶೇ 9.87, ಕರ್ನಾಟಕದಲ್ಲಿ ಶೇ 9.45, ಮಧ್ಯಪ್ರದೇಶದಲ್ಲಿ ಶೇ 14.22, ಮಹಾರಾಷ್ಟ್ರ 6.64 ರಷ್ಟು, ಉತ್ತರ ಪ್ರದೇಶದಲ್ಲಿ ಶೇ 11.63, ಪಶ್ಚಿಮ ಬಂಗಾಳದಲ್ಲಿ ಶೇ 14.60 ರಷ್ಟು ಮತದಾನವಾಗಿದೆ.

  • 07 May 2024 10:05 AM (IST)

    Karnataka Lok Sabha Election 2024 LIVE: ಮತದಾನಕ್ಕೆ ಬರುವವರಿಗೆ ಪಾನೀಯ ವಿತರಣೆ

    ಕೊಪ್ಪಳ: ಗಂಗಾವತಿ ತಾಲೂಕಿನ ವಡ್ಡರಟ್ಟಿಯ ಸಖಿ ಮತಗಟ್ಟೆ 112 ರಲ್ಲಿ ಮತ ಚಲಾಯಿಸಲು ಬಂದವರಿಗೆ ವೆಲ್ ಕಮ್‌ ಡ್ರಿಂಕ್ಸ್ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆ ಮುಂದೆ ತಂಪು ಪಾನೀಯ ವಿತರಣೆ ಮಾಡಲಾಗುತ್ತಿದೆ.

  • 07 May 2024 09:44 AM (IST)

    Karnataka Lok Sabha Election 2024 LIVE: 9 ಗಂಟೆವರೆಗೆ ಶಿವಮೊಗ್ಗದಲ್ಲಿ ಅತಿ ಹೆಚ್ಚು ಮತದಾನ

    ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ 2ನೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ 9 ಗಂಟೆವರೆಗೆ ಶೇ.10.79ರಷ್ಟು ಮತದಾನವಾಗಿದೆ. ಬೆಳಗಾವಿ ಕ್ಷೇತ್ರದಲ್ಲಿ ಶೇಕಡಾ 9.31ರಷ್ಟು, ಬಳ್ಳಾರಿ ಕ್ಷೇತ್ರದಲ್ಲಿ ಶೇಕಡಾ 10.36ರಷ್ಟು, ದಾವಣಗೆರೆ ಕ್ಷೇತ್ರದಲ್ಲಿ ಶೇಕಡಾ 9.35ರಷ್ಟು, ಶಿವಮೊಗ್ಗ ಕ್ಷೇತ್ರದಲ್ಲಿ ಶೇಕಡಾ 10.5ರಷ್ಟು ಮತ್ತು ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಶೇ.8.27ರಷ್ಟು ಮತದಾನವಾಗಿದೆ.

    ಶಿವಮೊಗ್ಗದಲ್ಲಿ ಶೇ. 11.39 ರಷ್ಟು, ಬಾಗಲಕೋಟೆಯಲ್ಲಿ ಶೇ 8.59ರಷ್ಟು,  ಬಳ್ಳಾರಿಯಲ್ಲಿ ಶೇ. 10.37ರಷ್ಟು, ವಿಜಯಪುರದಲ್ಲಿ ಶೇ. 9.26ರಷ್ಟು, ಚಿಕ್ಕೋಡಿಯಲ್ಲಿ ಶೇ. 10.81ರಷ್ಟು, ದಾವಣಗೆರೆಯಲ್ಲಿ ಶೇ. 9.11ರಷ್ಟು, ಧಾರವಾಡದಲ್ಲಿ ಶೇ. 9.38ರಷ್ಟು, ಕಲಬುರಗಿಯಲ್ಲಿ ಶೇ. 8.71ರಷ್ಟು, ಹಾವೇರಿ ಶೇ. 8.62ರಷ್ಟು, ಕೊಪ್ಪಳದಲ್ಲಿ ಶೇ. 8.79ರಷ್ಟು, ರಾಯಚೂರಿನಲ್ಲಿ ಶೇ. 8.27ರಷ್ಟು,  ಉತ್ತರ ಕನ್ನಡದಲ್ಲಿ ಶೇ. 11.07ರಷ್ಟು ಮತದಾನವಾಗಿದೆ.

  • 07 May 2024 09:33 AM (IST)

    Karnataka Lok Sabha Election 2024 LIVE: ಲಕ್ಷ್ಮೇಶ್ವರದ ಹಲವು ಮತಗಟ್ಟೆಗಳ ಇವಿಎಂನಲ್ಲಿ ದೋಷ

    ಗದಗ: ಲಕ್ಷ್ಮೇಶ್ವರದ 99, 107, 110, 112 ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಸದ್ಯ ನಮ್ಮ ಅಧಿಕಾರಿಗಳು ಮತಯಂತ್ರಗಳನ್ನು ಸರಿಪಡಿಸುತ್ತಿದ್ದಾರೆ ಎಂದು ಗದಗ ಜಿಲ್ಲಾ ಚುನಾವಣಾ ಅಧಿಕಾರಿ ಎಂ.ಎಲ್​.ವೈಶಾಲಿ ಮಾಹಿತಿ ನೀಡಿದರು.

  • 07 May 2024 09:08 AM (IST)

    Karnataka Lok Sabha Election 2024 LIVE: ಮತಯಂತ್ರದಲ್ಲಿ ಸಮಸ್ಯೆ, 1 ಗಂಟೆ ತಡವಾಗಿ ಮತದಾನ ಆರಂಭ

    ಶಿವಮೊಗ್ಗ: ಹೊಸನಗರ ತಾಲೂಕಿನ ಸುಳುಗೋಡು ಗ್ರಾಮ ಮತಗಟ್ಟೆ ಸಂಖ್ಯೆ 171 ರಲ್ಲಿ ತಾಂತ್ರಿಕ ಕಾರಣದಿಂದ ಮತಯಂತ್ರದಲ್ಲಿ ಸಮಸ್ಯೆ ಕಂಡು ಬಂದಿತ್ತು. ಇದರಿಂದ ಒಂದು ಗಂಟೆ ತಡವಾಗಿ ಮತದಾನ ಆಂಭವಾಯಿತು.

  • 07 May 2024 09:04 AM (IST)

    Karnataka Lok Sabha Election 2024 LIVE: ಕೊಪ್ಪಳದಲ್ಲಿ ಮತದಾನ ಬಹಿಷ್ಕಾರ

    ಕೊಪ್ಪಳ: ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ವಾರದ ಹಿಂದೆ ಇದೇ ಬಡಾವಣೆಯ ನಿವಾಸಿ ಲಕ್ಷ್ಮಿ ಎಂಬುವರು ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದಾರೆ. ಮಗ ಕೂಡ ಮೃತಪಟ್ಟಿದೆ.  ವೈದ್ಯರ ನಿರ್ಲಕ್ಷ್ಯ ದಿಂದ ತಾಯಿ-ಮಗು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಮತ್ತು ಬಡಾವಣೆಯ ಜನ ಆರೋಪಿಸಿದ್ದರು. ಈ ಹಿನ್ನೆಲಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕರಿಸಿದ್ದಾರೆ.

  • 07 May 2024 08:41 AM (IST)

    Karnataka Lok Sabha Election 2024 LIVE: ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಿ: ಮೋದಿ

    ಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಟ್ವೀಟ್​ ಮಾಡಿದ್ದಾರೆ.

  • 07 May 2024 07:49 AM (IST)

    Karnataka Lok Sabha Election 2024 LIVE: ಮತ ಚಲಾಯಿಸಿದ ಪ್ರಧಾನಿ ಮೋದಿ

    ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್​ನ ಅಹಮದಾಬಾದ್​ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತದಾನ ಮಾಡಿದರು.

  • 07 May 2024 07:42 AM (IST)

    Karnataka Lok Sabha Election 2024 LIVE: ಮತ ಚಲಾಯಿಸಿದ ಬಿಎಸ್​ ಯಡಿಯೂರಪ್ಪ

    ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ,  ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತದಾನ ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಬಿಎಸ್​ ಯಡಿಯೂರಪ್ಪ, ಕರ್ನಾಟಕದಲ್ಲಿ 25ರಿಂದ 26 ಸ್ಥಾನದಲ್ಲಿ ಗೆಲ್ಲುತ್ತೇವೆ. ದೇಶದ ಜನ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಬಯಸಿದ್ದಾರೆ. ದೇಶದಲ್ಲಿ ಈ ಬಾರಿ ನಾವು 400ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದರು.

  • 07 May 2024 07:08 AM (IST)

    Karnataka Lok Sabha Election 2024 LIVE: 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭ

    ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ. ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಜನ ಮತದಾನ ಮಾಡಿದ್ದಾರೆ.

  • 07 May 2024 07:02 AM (IST)

    Karnataka Lok Sabha Election 2024 LIVE: ಗಣಿ ನಾಡಿನಲ್ಲಿ ಮತದಾನಕ್ಕೆ ಜನ ಉತ್ಸುಕ

    ಕೆಲವೇ ಕ್ಷಣಗಳಲ್ಲಿ ಮತದಾನ ಆರಂಭವಾಗಲಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1972 ಮತಗಟ್ಟೆಗಳನ್ನು ಸ್ಥಾಪನೆ ಮತದಾನ ಮಾಡಲಾಗಿದೆ. ಒಟ್ಟು 18,65,341 ಮತದಾರರಿದ್ದಾರೆ. ಪುರುಷರು 925052, ಮಹಿಳೆ 945053 , ತೃತಿಯ ಲಿಂಗಿಗಳು 266 ಮತದಾರರಿದ್ದಾರೆ.

  • 07 May 2024 06:54 AM (IST)

    Karnataka Lok Sabha Election 2024 LIVE: ಪ್ರತಿಷ್ಠೆಯ ಕಣವಾದ ಬೆಳಗಾವಿ ಲೋಕಸಭಾ ಕ್ಷೇತ್ರ

    ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬೆಳಗಾವಿ ಪ್ರತಿಷ್ಠೆಯ ಕ್ಷೇತ್ರವಾಗಿದೆ. ಕಾಂಗ್ರೆಸ್- ಬಿಜೆಪಿ ನಡುವೆ ಕ್ಷೇತ್ರದಲ್ಲಿ ನೇರಾ ಹಣಾಹಣಿ ಇದೆ.  ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಗಾವಿ ಕ್ಷೇತ್ರದಲ್ಲಿ ಒಟ್ಟು 19,23,788 ಮತದಾರರು ಇದ್ದಾರೆ. ಪುರುಷ- 9,57,559, ಮಹಿಳಾ- 9,66,134, ಇತರೆ 95 ಮತದಾರರಿದ್ದಾರೆ. ಕ್ಷೇತ್ರದಲ್ಲಿ 53,922 ಯುವ ಮತದಾರರು ಇದ್ದಾರೆ. 7958 ಸೇವಾ ಮತದಾರರಿದ್ದಾರೆ.  85 ವರ್ಷ ಮೇಲ್ಪಟ್ಟವರು 20,512 ಜನರಿದ್ದಾರೆ. ಬೆಳಗಾವಿ ಕ್ಷೇತ್ರದಲ್ಲಿ ಒಟ್ಟು 2086 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಸೂಕ್ಷ್ಮ, ಅತಿ ಸೂಕ್ಷ್ಮ 466 ಮತಗಟ್ಟೆ ಗುರುತು ಮಾಡಲಾಗಿದೆ.

  • 07 May 2024 06:45 AM (IST)

    Karnataka Lok Sabha Election 2024 LIVE: 14 ಲೋಕಸಭಾ ಕ್ಷೇತ್ರಗಳ ಮತದಾರರ ಸಂಖ್ಯೆ

    ಒಟ್ಟು 2.59.17.493 ಮತದಾರರು ಮತ ಚಲಾವಣೆ ಮಾಡಲಿದ್ದಾರೆ. 1.29.48.978 ಪುರುಷರು, 1.29.66.570 ಮಹಿಳೆಯರು, ಇತರೆ 1.945 ಮತದಾರರು ಮತ ಚಲಾಯಿಸಲಿದ್ದಾರೆ. 3.78.144 ಯುವ ಪುರುಷ ಮತದಾರರು ಇದ್ದಾರೆ. ಯುವ 3.12.703 ಮಹಿಳಾ ಮತದಾರರು ಇದ್ದಾರೆ. ಒಟ್ಟು 6.90.929 ಯುವ ಮತದಾರರಿದ್ದಾರೆ. 85 ವರ್ಷ ಮೇಲ್ಪಟ್ಟವರು 2.29.263 ಜನರು ಇದ್ದಾರೆ. 3.43.966 ದಿವ್ಯಾಂಗ ಮತದಾರರ ಹೆಸರು ಮತದಾನ ಪಟ್ಟಿಯಲ್ಲಿದೆ. ಕಲಬುರಗಿ ಲೋಕಸಭಾ ಕ್ಷೇತ್ರ ಅತಿ ಹೆಚ್ಚು ಮತಗಳನ್ನು ಹೊಂದಿದೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 20.98.202 ಮತದಾರರು ಪಟ್ಟಿಯಲ್ಲಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಅತಿ ಕಡಿಮೆ ಮತದಾರರನ್ನು ಹೊಂದಿದೆ. ಉತ್ತರ ಕನ್ನಡದಲ್ಲಿ 16.41.156 ಮತದಾರರು ಇದ್ದಾರೆ. ಮೇ 7 ರಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ.

  • 07 May 2024 06:42 AM (IST)

    Karnataka Lok Sabha Election 2024 LIVE: 227 ಅಭ್ಯರ್ಥಿಗಳು ಕಣದಲ್ಲಿ

    ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿಕ್ಕೋಡಿ 17 ಜನ ಪುರುಷರು, ಓರ್ವ ಮಹಿಳೆ ಕಣದಲ್ಲಿದ್ದಾರೆ. ಬೆಳಗಾವಿಯಲ್ಲಿ 13 ಜನ ಪುರುಷರು, ಬಾಗಲಕೋಟೆಯಲ್ಲಿ 20 ಜನ ಪುರುಷರು, ಇಬ್ಬರು ಮಹಿಳೆಯರು, ವಿಜಯಪುರದಲ್ಲಿ ಆರು ಪುರುಷರು, ಇಬ್ಬರು ಮಹಿಳೆಯರು, ಕಲಬುರಗಿಯಲ್ಲಿ 12 ಜನ ಪುರುಷರು, ಓರ್ವ ಮಹಿಳೆ, ರಾಯಚೂರಿನಲ್ಲಿ ಏಳು ಜನ ಪುರುಷರು, ಓರ್ವ ಮಹಿಳೆ, ಬೀದರ್ 18 ಜನ ಪುರುಷರು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 17 ಜನ ಪುರುಷ, ಇಬ್ಬರು ಮಹಿಳೆಯರು, ಬಳ್ಳಾರಿ 10 ಜನ ಪುರುಷರು, ಹಾವೇರಿಯಲ್ಲಿ 11 ಜನ ಪುರುಷರು ಹಾಗೂ ಮೂವರು ಮಹಿಳಾ ಅಭ್ಯರ್ಥಿಗಳು, ಧಾರವಾಡದಲ್ಲಿ 17 ಜನ ಪುರುಷರು, ಉತ್ತರ ಕನ್ನಡದಲ್ಲಿ 12 ಜನ ಪುರುಷರು ಹಾಗೂ ಓರ್ವ ಮಹಿಳೆ, ದಾವಣಗೆರೆಯಲ್ಲಿ 25 ಜನ ಪುರುಷ ಐವರು ಮಹಿಳೆಯರು, ಶಿವಮೊಗ್ಗದಲ್ಲಿ 21 ಜನ ಪುರುಷರು ಇಬ್ಬರು ಮಹಿಳಾ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.

  • 07 May 2024 06:40 AM (IST)

    Karnataka Lok Sabha Election 2024 LIVE: ದೇಶದ 3ನೇ ಹಂತದ ಮತದಾನ: ಮತದಾನ ಮಾಡಲಿರುವ ಮೋದಿ, ಶಾ

    ಲೋಕಸಭಾ ಚುನಾವಣೆಗೆ ದೇಶದ ಮೂರನೇ ಹಂತದ ಮತದಾನ ಪ್ರಕ್ರಿಯೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಗುಜರಾತ್​​ನ ಎಲ್ಲ ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ  ಅಮಿತ್​ ಶಾ ಅಹಮದಾಬಾದ್​​ನಲ್ಲಿ ಮತ ಚಲಾಯಿಸಲಿದ್ದಾರೆ. ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೋದಿ ಮತದಾನ ಮಾಡಲಿದ್ದಾರೆ.

  • 07 May 2024 06:32 AM (IST)

    Karnataka Lok Sabha Election 2024 LIVE: ಮತದಾನಕ್ಕೆ ಕ್ಷಣಗಣನೆ

    ಲೋಕಸಭೆ ಚುನಾವಣೆಗೆ ರಾಜ್ಯದ ಎರಡನೇ ಹಂತದ ಮತದಾನ ಇಂದು (ಮೇ 7) ಆರಂಭವಾಗಿದೆ. ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿದ್ದು, ಇಂದು ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಈಗಾಗಲೆ ಮತಗಟ್ಟೆಗಳ ಬಳಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಕ್ಕೆ ಸಾಕ್ಷಿಯಾಗಲಿದ್ದಾರೆ.

  • Published On - May 07,2024 6:27 AM

    Follow us
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
    ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ