ಮೋದಿಯೇ 3ನೇ ಮಹಾಯುದ್ಧ ನಡೆಯದಂತೆ ತಡೆದಿದ್ದು; ಕಂಗನಾ ರಣಾವತ್ ಭರಪೂರ ಭಾಷಣ
ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಬಿಜೆಪಿಗೆ ಸೇರ್ಪಡೆಯಾಗಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೂಡ ಗಿಟ್ಟಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕಂಗನಾ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಹಾಗೇ, ತಮ್ಮ ಭಾಷಣಗಳಿಂದಾಗಿ ಟ್ರೋಲ್ ಕೂಡ ಆಗುತ್ತಿದ್ದಾರೆ.
ನವದೆಹಲಿ: ಜಗತ್ತಿನಲ್ಲಿ ಇನ್ನೂ 3ನೇ ಮಹಾಯುದ್ಧ (World War) ನಡೆದಿಲ್ಲವೆಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯೇ (PM Narendra Modi) ಕಾರಣ. ಮಹಾಯುದ್ಧ ನಡೆಯದಂತೆ ಅವರೇ ತಡೆದಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಉಕ್ರೇನ್‌ನ ಜನರು ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಪಡೆಯುತ್ತಿದ್ದಾರೆ ಎಂದು ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ (Kangana Ranaut) ಹೇಳಿದ್ದಾರೆ.
“ವ್ಲಾಡಿಮಿರ್ ಪುಟಿನ್‌ನಿಂದ ಉಕ್ರೇನ್‌ನ ಜನರವರೆಗೆ ತಮಗೆ ಮಾರ್ಗದರ್ಶನ ನೀಡಲು ಅವರನ್ನು ಮೋದಿಯವರನ್ನು ಎದುರು ನೋಡುತ್ತಿದ್ದಾರೆ. ಬಹುಶಃ ಇದು 3ನೇ ಮಹಾಯುದ್ಧ ನಡೆಯದಿರಲು ಒಂದು ಕಾರಣವಾಗಿರಬಹುದು” ಎಂದು ಕಂಗನಾ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಹೇಳಿದ್ದಾರೆ.
Ukraine looks up to Modi for guidance, It is because of Modi that World War 3 hasn’t happened yet – Kangana Ranaut 😂😂😂😂😂😂😂😂😂😂😂😂😂😂😂 pic.twitter.com/KpDMYKjTfE
— Roshan Rai (@RoshanKrRaii) May 6, 2024
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ಗೆ ಮತ್ತೊಂದು ಸಂಕಷ್ಟ; ಎನ್ಐಎ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಆದೇಶ
ತಮ್ಮ ಭಾಷಣದಲ್ಲಿ ತೇಜಸ್ವಿ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸುವ ಬದಲು ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿರುವ ತೇಜಸ್ವಿ ಸೂರ್ಯ ಅವರ ಹೆಸರು ಪ್ರಸ್ತಾಪಿಸಿ ಟೀಕಾ ಪ್ರಹಾರ ನಡೆಸಿದ್ದ ಕಂಗನಾ ರಣಾವತ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಹಾಗೇ, ಇತ್ತೀಚೆಗೆ ಕಂಗನಾ ರಣಾವತ್ ತಮ್ಮ ಬಗ್ಗೆ ಹೇಳಿಕೊಳ್ಳುವ ಭರದಲ್ಲಿ ತಮ್ಮನ್ನು ಅಮಿತಾಭ್ ಬಚ್ಚನ್ ಅವರಿಗೆ ಸರಿಸಮಾನವಾದವಳು ಎಂದು ಹೇಳಿಕೊಂಡಿದ್ದು ಕೂಡ ಟ್ರೋಲ್ ಆಗಿತ್ತು.
🚨 Exclusive
Kangana Ranaut said that Tejashwi Surya does hooliganism and eats fish.
BJP has made her its candidate, who doesn’t know the difference between Tejasvi Yadav and Tejasvi Surya 🤣#KanganaRanaut #TejasviSurya pic.twitter.com/YN0UvuplOi
— Harsh Tiwari (@harsht2024) May 4, 2024
ಇದನ್ನೂ ಓದಿ: ‘ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾರೆ’; ಬಾಯಿ ತಪ್ಪಿ ತಮ್ಮದೇ ಪಕ್ಷದ ಸಂಸದನ ವಿರುದ್ಧ ಹರಿಹಾಯ್ದರೇ ಕಂಗನಾ?
“ಚಿತ್ರರಂಗದಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್‌ಗೆ ಸಮಾನವಾದ ಪ್ರೀತಿ ಮತ್ತು ಗೌರವವನ್ನು ನಾನು ಗಳಿಸಿದ್ದೇನೆ. ನಾನು ರಾಜಸ್ಥಾನ, ಪಶ್ಚಿಮ ಬಂಗಾಳ, ನವದೆಹಲಿಗೆ ಹೋದರೂ, ಮಣಿಪುರಕ್ಕೆ ಹೋದರೂ, ಇಡೀ ದೇಶವೇ ಆಶ್ಚರ್ಯ ಪಡುತ್ತದೆ. ನನ್ನ ಬಗ್ಗೆ ಜನರಿಗೆ ತುಂಬಾ ಪ್ರೀತಿ ಮತ್ತು ಗೌರವವಿದೆ ಎಂದು ಅನಿಸುತ್ತದೆ. ಅಮಿತಾಬ್ ಬಚ್ಚನ್ ನಂತರ ಯಾರಿಗಾದರೂ ಸಿನಿಮಾ ಇಂಡಸ್ಟ್ರಿಯಲ್ಲಿ ಅಂತಹ ಪ್ರೀತಿ ಮತ್ತು ಗೌರವ ಸಿಕ್ಕಿದರೆ ಅದು ನನಗೆ ಮಾತ್ರ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ” ಎಂದು ಕಂಗನಾ ಹೇಳಿಕೊಂಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:45 pm, Mon, 6 May 24