ಕಾಂಗ್ರೆಸ್ ಯುವರಾಜನಿಗೆ ರಾಜರು ಮಹಾರಾಜರ ಕೊಡುಗೆಗಳು ನೆನಪಿಲ್ಲ: ರಾಹುಲ್ ವಿರುದ್ಧ ಮೋದಿ ವಾಗ್ದಾಳಿ
ಕಾಂಗ್ರೆಸ್ನ ಯುವರಾಜ ರಾಜರು, ಮಹಾರಾಜರನ್ನು ಅವಮಾನಿಸುವ ಮೂಲಕ ರಾಣಿಚೆನ್ನಮ್ಮ, ಛತ್ರಪತಿ ಶಿವಾಜಿಯವರನ್ನು ಅವಮಾನಿಸಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್(Congress) ಯುವರಾಜನಿಗೆ ನಮ್ಮ ರಾಜರು, ಮಹಾರಾಜರ ಕೊಡುಗೆ ನೆನಪಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ ಬೆಳಗಾವಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಯುವರಾಜರು ಭಾರತದ ರಾಜ-ಮಹಾರಾಜರು ದಬ್ಬಾಳಿಕೆ ನಡೆಸುತ್ತಿದ್ದರು, ಬಡವರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಕಾಂಗ್ರೆಸ್ ಯುವರಾಜ ಛತ್ರಪತಿ ಶಿವಾಜಿ ಮಹಾರಾಜ್, ರಾಣಿ ಚಿನ್ನಮ್ಮ ಅವರನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ ಯುವರಾಜನ ಹೇಳಿಕೆ ವೋಟ್ ಬ್ಯಾಂಕ್ ರಾಜಕೀಯ ಮಾಡಲು ಮತ್ತು ಓಲೈಕೆಗಾಗಿ ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಯಾಗಿದೆ.
ಪಿಎಫ್‌ಐ ಅನ್ನು ಸಮರ್ಥಿಸಿಕೊಳ್ಳುವಲ್ಲಿ ಕಾಂಗ್ರೆಸ್ ನಿರತವಾಗಿದೆ ಕಾಂಗ್ರೆಸ್ಗೆ ನೇಹಾ ಅವರಂತಹ ಹೆಣ್ಣುಮಕ್ಕಳ ಜೀವಕ್ಕೆ ಯಾವುದೇ ಬೆಲೆ ಇಲ್ಲ, ಅವರಿಗೆ ತಮ್ಮ ವೋಟ್ ಬ್ಯಾಂಕ್ ಬಗ್ಗೆ ಮಾತ್ರ ಚಿಂತೆ. ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆದಾಗ ಅದನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಷ್ಟೇ ಅಲ್ಲ, ಕಾಂಗ್ರೆಸ್ ಪಿಎಫ್‌ಐ ಅನ್ನು ಮತಕ್ಕಾಗಿ ಬಳಸಿಕೊಂಡಿದೆ ಎಂದರು.
ಮತ್ತಷ್ಟು ಓದಿ: ಬೆಳಗಾವಿಯ ಬಿಜೆಪಿ ಸಮಾವೇಶದಲ್ಲಿ ಗಿಫ್ಟ್ ನೋಡಿ ಭಾವುಕರಾದ ಮೋದಿ, ವಿಡಿಯೋ ನೋಡಿ
ಇದು ಭಯೋತ್ಪಾದನೆಗೆ ಆಶ್ರಯ ನೀಡುವ ದೇಶವಿರೋಧಿ ಸಂಘಟನೆಯಾಗಿದ್ದು, ಇದನ್ನು ಮೋದಿ ಸರ್ಕಾರ ನಿಷೇಧಿಸಿದೆ. ವಯನಾಡಿನಲ್ಲಿ ಒಂದು ಸ್ಥಾನವನ್ನು ಗೆಲ್ಲುವುದಕ್ಕಾಗಿಯೇ ಇಂತಹ ಪಿಎಫ್‌ಐ ಭಯೋತ್ಪಾದಕ ಸಂಘಟನೆಯನ್ನು ಸಮರ್ಥಿಸುವಲ್ಲಿ ಕಾಂಗ್ರೆಸ್ ನಿರತವಾಗಿದೆ.
ಕಳೆದ 10 ವರ್ಷಗಳಲ್ಲಿ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರ ದೇಶದ ನಾಗರಿಕರ ನೆಮ್ಮದಿಗಾಗಿ ಸಾಕಷ್ಟು ಕೆಲಸ ಮಾಡಿದೆ, ಇದಕ್ಕೆ ದೊಡ್ಡ ಉದಾಹರಣೆ ಭಾರತೀಯ ನ್ಯಾಯ ಸಂಹಿತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ