ಚಿರತೆ ದಾಳಿ: ಕುರಿಗಾಹಿ ಯುವಕ ಸ್ಥಳದಲ್ಲೇ ಸಾವು

ಹೊಸ ವರ್ಷದ ದಿನವೇ ಚಿರತೆ ದಾಳಿಗೆ ಗಂಗಾವತಿ ತಾಲೂಕಿನ ಕರಡಿಗುಡ್ಡ ಗ್ರಾಮದ ನಿವಾಸಿ, ಕುರಿಗಾಹಿ ರಾಘವೇಂದ್ರ (18) ಬಲಿಯಾಗಿದ್ದಾನೆ.

ಚಿರತೆ ದಾಳಿ: ಕುರಿಗಾಹಿ ಯುವಕ ಸ್ಥಳದಲ್ಲೇ ಸಾವು
ಚಿರತೆ (ಸಂಗ್ರಹ ಚಿತ್ರ)
Edited By:

Updated on: Jan 01, 2021 | 7:29 PM

ಕೊಪ್ಪಳ: ಚಿರತೆ ದಾಳಿಗೆ ಯುವಕ ಬಲಿಯಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆ ಬಳಿ ನಡೆದಿದೆ.

ಹೊಸ ವರ್ಷದ ದಿನವೇ ಚಿರತೆ ದಾಳಿಗೆ ಗಂಗಾವತಿ ತಾಲೂಕಿನ ಕರಡಿಗುಡ್ಡ ಗ್ರಾಮದ ನಿವಾಸಿ, ಕುರಿಗಾಹಿ ರಾಘವೇಂದ್ರ (18) ಬಲಿಯಾಗಿದ್ದಾನೆ. ಕುರಿ ಕಾಯಲು ವಿರುಪಾಪುರ ಗಡ್ಡೆಗೆ ತೆರಳಿದ್ದ ಸಮಯದಲ್ಲಿ ಚಿರತೆ ದಾಳಿಗೆ ಬಲಿಯಾಗಿದ್ದು, ಈ ಸಂಬಂಧ ಗಂಗಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಗಡಿ: ಜಗುಲಿ ಮೇಲೆ ಮಲಗಿದ್ದ ವೃದ್ಧೆಯನ್ನು ಹೊತ್ತೊಯ್ದ ಚಿರತೆ!