ಶಿವಮೊಗ್ಗ: ಬಿಸಿಊಟ ಸೇವಿಸಿ ವಿದ್ಯಾರ್ಥಿನಿಯರು(Students) ಅಸ್ವಸ್ಥರಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜಿನ ಹಾಸ್ಟೆಲ್ನಲ್ಲಿ(Hostel) ನಡೆದಿದೆ. ವಿದ್ಯಾನಗರದ ಸಹ್ಯಾದ್ರಿ ಕಾಲೇಜ್ ಹಾಸ್ಟೆಲ್‌ನ 27 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ನಿನ್ನೆ ರಾತ್ರಿ ಊಟ(Meals) ಸೇವನೆ ಬಳಿಕ ಹೊಟ್ಟೆನೋವು, ವಾಂತಿಯಾಗಿದೆ. ಸದ್ಯ ಅಸ್ವಸ್ಥ ವಿದ್ಯಾರ್ಥಿನಿಯರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಿವಮೊಗ್ಗ ವಿದ್ಯಾನಗರದಲ್ಲಿರುವ ಸಹ್ಯಾದ್ರಿ ವಿಜ್ಷಾನ ಮಹಿಳಾ ಹಾಸ್ಟೆಲ್ನಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ 575 ವಿದ್ಯಾರ್ಥಿನಿಯರಿದ್ದಾರೆ. ನಿನ್ನೆ ರಾತ್ರಿ 75ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಸೊಪ್ಪಿನ ಸಾರು, ಅನ್ನ, ಹೆಸರು ಬೆಳೆ, ಕೋಸಂಬರಿ ಊಟ ಸೇವಿಸಿದ್ದರು. ಊಟದ ನಂತರ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರು ಶುರುವಾಗಿತ್ತು. ನೋಡ ನೋಡುತ್ತಿದ್ದಂತೆ ಒಬ್ಬರಿಂದ ಹತ್ತಾರು ವಿದ್ಯಾರ್ಥಿನಿಯರು ಸುಸ್ತು, ತಲೆನೋವು, ವಾಂತಿ ಶುರುವಾಗಿದೆ.
ವಿದ್ಯಾರ್ಥಿನಿಯರನ್ನು ಮೊದಲು ಸ್ಥಳೀಯ ಕ್ಲೀನಿಕ್ನಲ್ಲಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಬಳಿಕ ತುಂಬಾ ಅಸ್ವಸ್ಥಗೊಂಡಿರುವ ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಬಿಎಚ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ 12ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕ್ಲಿನಿಕ್ನಲ್ಲಿ ಚಿಕಿತ್ಸೆ ನೀಡಿ, ಅವರಿಗೆ ಹಾಸ್ಟೆಲ್ನಲ್ಲಿ ವಿಶ್ರಾಂತಿ ನೀಡಲಾಗುತ್ತಿದೆ. ಅಡುಗೆಗೆ ಮತ್ತು ಕುಡಿಯುವ ನೀರು ಶುದ್ಧವಾಗಿರದೇ ಇರುವುದೇ ಈ ಎಲ್ಲ ಯಡವಟ್ಟಿಗೆ ಕಾರಣವಾಗಿದೆ. ಕೆಲ ವಿದ್ಯಾರ್ಥಿಗಳು ಕೇವಲ ನಿನ್ನೆ ಬೆಳಗ್ಗೆ ತಿಂಡಿ ಮಾಡಿದ್ದರು. ಅವರ ಆರೋಗ್ಯದಲ್ಲೂ ಏರುಪೇರು ಆಗಿದೆ. ಇದರಿಂದ ಹಾಸ್ಟೇಲ್ನಲ್ಲಿ ಸದ್ಯ ಎಲ್ಲ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ.
ಮೈಸೂರು: ಮಗನ ಸಾವಿನ ಹಿಂದೆ ಅನುಮಾನ; ಒಂದು ತಿಂಗಳ ಹಿಂದೆ ಹೂತಿಟ್ಟಿದ್ದ ಶವ ಹೊರಗೆ ತೆಗೆದು ಪರೀಕ್ಷೆ
ಮಗನ ಸಾವಿನ ಹಿಂದೆ ಸೊಸೆಯ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ಮಗನನ್ನು ಕಳೆದುಕೊಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ದೂರಿನ ಮೇರೆಗೆ ಮತ್ತೊಮ್ಮೆ ಶವ ಪರೀಕ್ಷೆ ಮಾಡಲಾಗಿದೆ. ಹೂತಿಟ್ಟಿದ್ದ ಶವ ಹೊರಗೆ ತೆಗೆದು ತಹಶೀಲ್ದಾರ್ ಬಿ.ಗಿರಿಜಾ, ಪೊಲೀಸರ ಸಮ್ಮುಖದಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಲಾಗಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಯಡದೊರೆ ಗ್ರಾಮದಲ್ಲಿ ಒಂದು ತಿಂಗಳ ಹಿಂದೆ ಅನಾರೋಗ್ಯದಿಂದ ವಿನೋದ್‌ರಾಜ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ಅಣ್ಣ ವಿನೋದ್‌ರಾಜ್ನ ಸಾವಿನ ವೇಳೆ ಅಣ್ಣನ ಪತ್ನಿ ಮಾಹಿತಿ ತಿಳಿಸಿರಲಿಲ್ಲ. ಅನಾರೋಗ್ಯದಿಂದ ವಿನೋದ್ ಮೃತಪಟ್ಟಿದ್ದ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದರು. ಹೀಗಾಗಿ ಅನುಮಾನಗೊಂಡು ಮೃತ ವಿನೋದ್ ರಾಜ್ ತಮ್ಮ ರಘು ಮತ್ತು ಪೋಷಕರು ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಅಂತ್ಯಸಂಸ್ಕಾರ ಮಾಡಿದ್ದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ತಹಶೀಲ್ದಾರ್ ಬಿ.ಗಿರಿಜಾ, ಪೋಲೀಸ್ ಇಲಾಖೆ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮಗನ ಶವದ ಮುಂದೆ ತಾಯಿ ರಾಜಮ್ಮ ಗೋಳಾಡಿದ್ದು ತನ್ನ ಅಣ್ಣನ ಸಾವಿಗೆ ನ್ಯಾಯ ಕೊಡಿಸುವಂತೆ ತಮ್ಮ ರಘು ಮನವಿ ಮಾಡಿದ್ದಾರೆ.
ಇದನ್ನೂ ಓದಿ:
ಸೇತುವೆ ಮೇಲೆ ಅಪಘಾತ; ಸೇತುವೆಯಿಂದ ನದಿಗೆ ಬಿದ್ದ ಬೈಕ್ ಸವಾರನ ಮೃತ ದೇಹ ಪತ್ತೆ
crime news: ಸೇತುವೆ ಮೇಲೆ ಕಾರ್ ಮತ್ತು ಬೈಕ್ ನಡುವೆ ಅಪಘಾತ; ನದಿಗೆ ಹಾರಿ ಬಿದ್ದ ಬೈಕ್ ಸವಾರರು
Published On - 3:41 pm, Fri, 11 March 22