ತೊಟ್ಟಿಲು ಶಾಸ್ತ್ರಕ್ಕೆ ಹೋಗುತ್ತಿದ್ದ ಆಟೋಗೆ ಬೊಲೆರೊ ಡಿಕ್ಕಿ, ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು
ಜಿಲ್ಲೆಯ ಶಿಕಾರಿಪುರ ತಾಲೂಕಿನ ಜಕ್ಕನಹಳ್ಳಿ ಬಳಿ ಬೊಲೆರೊ ವಾಹನ ಮತ್ತು ಆಟೋ ನಡುವೆ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ರಾಮ್‌ಜಿ ನಾಯ್ಕ(70), ಹೇಮಿಬಾಯಿ(61) ಮೃತ ರ್ದುದೈವಿಗಳು.
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ(Shikaripur)ತಾಲೂಕಿನ ಜಕ್ಕನಹಳ್ಳಿ ಬಳಿ ಬೊಲೆರೊ ವಾಹನ ಮತ್ತು ಆಟೋ ನಡುವೆ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ರಾಮ್‌ಜಿ ನಾಯ್ಕ(70), ಹೇಮಿಬಾಯಿ (61) ಮೃತ ರ್ದುದೈವಿಗಳು. ತೊಟ್ಟಿಲು ಶಾಸ್ತ್ರಕ್ಕೆ ತೆರಳುತ್ತಿದ್ದ ವೇಳೆ ಆಟೋಗೆ ಬೊಲೆರೊ ವಾಹನ ಡಿಕ್ಕಿಯಾಗಿದೆ. ಇಬ್ಬರು ಸ್ಥಳದಲ್ಲೇ ಮೃತರಾದರೆ, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ಶಿಕಾರಿಪುರ ತಾಲೂಕಿನ ಬಿದರಕೊಪ್ಪ ತಾಂಡಾ ನಿವಾಸಿಗಳು ಎನ್ನಲಾಗುತ್ತಿದೆ. ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಪಲ್ಟಿಯಾಗಿ ಬಿಜೆಪಿ ಮುಖಂಡ ಸಾವು; ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಗಾಯ
ಮೈಸೂರು: ಕಾರು ಪಲ್ಟಿಯಾಗಿ ಮೈಸೂರು ಬಿಜೆಪಿ ಮುಖಂಡ ಸ್ವಾಮಿಗೌಡ ಎನ್ನುವವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಊಟಿ ಬಳಿ ನಡೆದಿದೆ. ಮೈಸೂರಿನ ಎನ್.ಆರ್ ಕ್ಷೇತ್ರದ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಯಾದ ಸ್ವಾಮಿಗೌಡ ಅವರು ಸ್ನೇಹಿತರ ಕುಟುಂಬದವರ ಜೊತೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದುರಂತ ನಡೆದಿದ್ದು, ಸ್ವಾಮಿಗೌಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಸೇರಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.
ಇದನ್ನೂ ಓದಿ:ಕೊಪ್ಪಳದಲ್ಲೊಂದು ಭೀಕರ ಅಪಘಾತ: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ
ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ನದಿಗೆ ಹಾರಿ ಆತ್ಮಹತ್ಯೆ
ಮೈಸೂರು: ಹುಣಸೂರು ನಗರದ ಬಳಿಯ ಲಕ್ಷ್ಮಣ ತೀರ್ಥ ನದಿಗೆ ಹಾರಿ ರಾಮಚಂದ್ರಪ್ಪ(65) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ವಿಶೇಷಚೇತನರಾಗಿದ್ದರು. ಹೌದು ರಾಮಚಂದ್ರಪ್ಪಗೆ ಮಾತು ಬರುತ್ತಿರಲಿಲ್ಲ. ಜೊತೆಗೆ ಇತ ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಇತ 3 ತಿಂಗಳಿಂದ ಕಿಡ್ನಿ ಸಮಸ್ಯೆಯಿಂದ ಕೂಡ ಬಳಲುತ್ತಿದ್ದ. ಇದೀಗ ನದಿಗೆ ಹಾರಿ ಸಾವನ್ನಪ್ಪಿದ್ದು, ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪಘಾತ ಸುದ್ದಿಗಳಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ