ಶಿವಮೊಗ್ಗ, ನ.01: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಹುಲಿ ಉಗುರಿನ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಅದರಂತೆ ಇದೀಗ ವನ್ಯಜೀವಿ ಉಪ ಸಂರಕ್ಷಣಾ ಅಧಿಕಾರಿಗಳ ತಂಡ ಮತ್ತು ಅರಣ್ಯ ಜಾಗೃತ ದಳ ಅಧಿಕಾರಿಗಳು ಶಿವಮೊಗ್ಗ(Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಸಮೀಪದ ಬಸವನಗದ್ದೆಯಲ್ಲಿ ಜಂಟಿ ಕಾರ್ಯಾಚರಣೆ ಮಾಡಿ, ಕಾಡು ಪ್ರಾಣಿಗಳ ಕೊಂಬನ್ನು ವಶಕ್ಕೆ ಪಡೆದಿದ್ದಾರೆ. ಹೌದು, ಪ್ರಸನ್ನ ಎಂಬುವವರ ಮನೆ‘ಯ 12 ಜನ ಅಧಿಕಾರಿಗಳ ತಂಡವು ದಾಳಿ ಮಾಡಿ, ಮನೆಯಲ್ಲಿದ್ದ ಜಿಂಕೆ ಮತ್ತು ಕಾಡುಕೋಣದ ಕೊಂಬನ್ನು ವಶಕ್ಕೆ ಪಡೆದಿದ್ದಾರೆ.
ಹೌದು, ನೂರಾರು ವರ್ಷಗಳಿಂದ ಈ ಮನೆಯಲ್ಲಿ ವನ್ಯಜೀವಿಯ ಟ್ರೋಫಿಯೊಂದು ಇದ್ದು, ಇದೀಗ ಅದನ್ನು ಸೀಜ್ ಮಾಡಿದ್ದಾರೆ. ಇನ್ನು ಮನೆ ಯಜಮಾನ ವಯಸ್ಸಾಗಿ ಅನಾರೋಗ್ಯದಲ್ಲಿದಲಿದ್ದಾರೆ. ಆದರೂ ಅರಣ್ಯ ಅಧಿಕಾರಿಗಳು ಆತನನ್ನು ಬಂಧಿಸಲು ಮುಂದಾಗಿದ್ದು, ಅರಣ್ಯ ಅಧಿಕಾರಿಗಳ ಧೋರಣೆಗೆ ಶಾಸಕ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳ ಈ ದಿಢೀರ್ ಕ್ರಮವನ್ನು ಖಂಡಿಸಿ ಮಾಜಿ ಸಚಿವ ಆರಗ ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಇನ್ನು ಶಾಸಕ ಲಕ್ಷ್ಮಣ್ ಸವದಿ ಅವರ ಪುತ್ರನಾದ ಸುಮಿತ್, ಹುಲಿ ಉಗುರು ಪೆಂಡೆಂಟ್ ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 31 ರಂದು ಅರಣ್ಯ ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ನಡೆಸಿದ್ದರು. ಇದರ ವಿರುದ್ಧ ಲಕ್ಷ್ಮಣ್ ಸವದಿ ಅವರು ಕೆಂಡಾಮಂಡಲವಾಗಿದ್ದರು. ಹುಲಿ ಉಗುರು ಇಲ್ಲ, ಇಲಿ ಉಗುರೂ ಇಲ್ಲ. ಅದು ಕೃತಕ ಉಗುರು. ನಮ್ಮ ಮನೆ ಪರಿಶೀಲನೆ ಮಾಡಬೇಕಾದರೆ ನನ್ನ ಗಮನಕ್ಕೆ ತರಬೇಕಿತ್ತು. ಅಥವಾ ನೋಟಿಸ್ ನೀಡಬೇಕಿತ್ತು. ನಾನು ಊರಲ್ಲಿ ಇರದ ಸಮಯದಲ್ಲಿ ನನ್ನ ಬೆಡ್ ರೂಮ್ಗೆ ಹೊಗಿ ಪರಿಶೀಲನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Wed, 1 November 23