ಹುಲಿ ಉಗುರು ವಿವಾದ: ಶಾಸಕ ಭರತ್ ರೆಡ್ಡಿ ಹುಲಿ ಉಗುರಿನ ಪೆಂಡೆಂಟ್​ ಧರಿಸಿರುವ ಪೋಟೋ ವೈರಲ್

ಬಳ್ಳಾರಿ ನಗರ ಶಾಸಕ ಭರತ ರೆಡ್ಡಿಗೂ ಹುಲಿ ಉಗುರು ಪರಚಿದೆ. ಮದುವೆ ಸಮಯದಲ್ಲಿ ಹುಲಿ ಉಗುರಿನ ಪೆಂಡೆಂಟ್​ ಧರಿಸಿರುವ ಫೋಟೋ ಸಾಮಾಜಿಕ ಪೆಂಡೆಂಟ್ ವೈರಲ್ ಆಗಿದೆ. ಪೋಟೋ ವೈರಲ್ ಬಗ್ಗೆ ಶಾಸಕ ಭರತ್ ರೆಡ್ಡಿ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ.

ಹುಲಿ ಉಗುರು ವಿವಾದ: ಶಾಸಕ ಭರತ್ ರೆಡ್ಡಿ ಹುಲಿ ಉಗುರಿನ ಪೆಂಡೆಂಟ್​ ಧರಿಸಿರುವ ಪೋಟೋ ವೈರಲ್
ಶಾಸಕ ಭರತ ರೆಡ್ಡಿ
Follow us
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ವಿವೇಕ ಬಿರಾದಾರ

Updated on: Oct 28, 2023 | 3:15 PM

ಬಳ್ಳಾರಿ ಅ.28: ರಾಜ್ಯದಲ್ಲಿ ಹುಲಿ ಉಗುರಿನ ಸದ್ದು ಜೋರಾಗಿದೆ. ಹುಲಿ ಉಗುರು (Tiger Claw) ಧರಿಸಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು ಧರಿಸಿರುವ ರಾಜ್ಯದ ವಿಐಪಿ ಮಂದಿಗೆ ತಲೆನೋವು ಶುರುವಾಗಿದೆ. ಕನ್ನಡ ಚಿತ್ರರಂಗದ (Sandalwood) ಪ್ರಮುಖರ ವಿರುದ್ಧ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ ಕೇಳಿಬಂದಿತ್ತು. ಸೆಲೆಬ್ರೆಟಿಗಳು ಬೆನ್ನಲ್ಲೇ ರಾಜ್ಯ ಸರ್ಕಾರದ ಶಾಸಕರು, ಮಂತ್ರಿಗಳ ಕುಟುಂಬಸ್ಥರು ಹುಲಿ ಉಗುರು ಧರಿಸಿರುವ ಫೋಟೋಗಳು ವೈರಲ್​ ಆಗುತ್ತಿವೆ. ಇದೀಗ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ (Bharth Reddy) ಹುಲಿ ಉಗುರಿನ ಪೆಂಡೆಂಟ್​ ಧರಿಸಿರುವ ಪೋಟೋ ವೈರಲ್ ಆಗಿದೆ.

ಶಾಸಕ ಭರತ ರೆಡ್ಡಿ ಮದುವೆ ಸಮಯದಲ್ಲಿ ಹುಲಿ ಉಗುರಿನ ಪೆಂಡೆಂಟ್​ ಧರಿಸಿರುವ ಫೋಟೋ ಸಾಮಾಜಿಕ ಪೆಂಡೆಂಟ್ ವೈರಲ್ ಆಗಿದೆ. ಪೋಟೋ ವೈರಲ್ ಬಗ್ಗೆ ಶಾಸಕ ಭರತ್ ರೆಡ್ಡಿ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. ನಾನು ಹಾಕಿರೋದು ಹುಲಿ ಉಗುರಿನ ಪೆಂಡೆಂಟ್ ಅಲ್ಲ, ಅದು ಸಿಂಥೆಟಿಕ್ ಹುಲಿ ಉಗುರಿನ ಪೆಂಡೆಂಟ್ ಎಂದಿದ್ದಾರೆ.

ಇದನ್ನೂ ಓದಿ: ಚಿನ್ನಾಭರಣ ತಯಾರಕರಿಗೆ ಹುಲಿ ಉಗುರು ಹೆಸರಿನಲ್ಲಿ ಟಾರ್ಚಾರ್ ಕೊಡುತ್ತಿದ್ದಾರೆ -ಟಿ ಎ ಶರವಣ

ಸಾಮಾನ್ಯವಾಗಿ ಅಷ್ಟು ಸುಲಭವಾಗಿ ಹುಲಿ ಉಗುರುಗಳು ಸಿಗಲ್ಲ. ಗೋಲ್ಡ್ ಶಾಪ್​ನಲ್ಲಿ ಹುಲಿ ಉಗುರಿನ ಸಿಂಥೆಟಿಕ್ ಪೆಂಡೆಂಟ್ ಸಿಗುತ್ತವೆ. ಈಗ ಸಿಕ್ಕಿರುವ ಪೆಂಡೆಂಟ್​​ಗಳು ಬಹುತೇಕ ಸಿಂಥೆಟಿಕ್ ಎನ್ನುವುದು ನನ್ನ ಅಭಿಪ್ರಾಯ. ಹುಲಿ ಉಗುರುಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಭಾರತದಲ್ಲಿ ಹುಲಿಗಳನ್ನು ರಕ್ಷಣೆ ಮಾಡಿಕೊಂಡು ಬಂದಿದ್ದೇವೆ. ಅಭಿಯಾನದ ರೀತಿಯಲ್ಲಿ ಪೋಟೋ ವೈರಲ್ ಆಗುತ್ತಿವೆ. ಅದೇ ರೀತಿಯಲ್ಲಿ ನನ್ನ ಪೋಟೋ ಕೂಡಾ ವೈರಲ್ ಆಗಿದೆ. ಸಿಂಥೆಟಿಕ್​ ಹುಲಿ ಉಗುರು ಸಿಗುವ ವಿಳಾಸ ನಿಮಗೂ ಕೊಡುತ್ತೇನೆ, ನೀವು ಖರೀದಿ ಮಾಡಬಹುದು ಎಂದು ವ್ಯಂಗ್ಯವಾಡಿದರು.

ಏನಿದು ಹುಲಿ ಉಗುರು ವಿವಾದ

ಹುಲಿ ಉಗುರು ಧರಿಸಿದ್ದ ವರ್ತೂರು ಸಂತೋಷ್ ಅವರನ್ನು ಕಳೆದ ಎರಡು ದಿನಗಳ ಹಿಂದೆ ಅರಣ್ಯ ಅಧಿಕಾರಿಗಳು ಬಿಗ್ ಬಾಸ್ ಮನೆಯಿಂದಲೇ ಬಂಧಿಸಿ ಕರೆತಂದಿದ್ದರು. ವರ್ತೂರು ಸಂತೋಷ್​​​ ಅವರಿಗೆ ಜಾಮೀನು ಸಿಕ್ಕಿದೆ. ಇವರ ಬಂಧನ ಬಳಿಕ ಹುಲಿ ಉಗುರು ಪ್ರಕರಣದ ರಾಜ್ಯದಲ್ಲಿ ಒಂದು ಮಟ್ಟಿಗೆ ಕಾವು ಎದ್ದಿತ್ತು. ಆದರೆ ಯಾವಾಗ ಕನ್ನಡದ ಖ್ಯಾತ ಚಲನಚಿತ್ರ ನಟರೂ ಹುಲಿ ಉಗುರು ಧರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದವು ಈ ಕಾವು ಜಾಸ್ತಿ ಆಯ್ತು. ಈ ಹುಲಿ ಉಗುರು ರಾಜಕಾರಣಿ, ಅಧಿಕಾರಿಗಳಿಗೆ ಮಾತ್ರವಲ್ಲದೆ ಸ್ವಾಮೀಜಿಗಳಿಗೂ ಪರಚಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ