ಮಲೆನಾಡಿನಲ್ಲಿ ದೀಪವಾಳಿ ಹಬ್ಬದ ಬಳಿಕ ಮನೆ ಮನೆಗೆ ಜಾನಪದ ಹಾಡುಗಳನ್ನು ಹೇಳುತ್ತಾ ಒಂದು ಗುಂಪು ಬರುತ್ತದೆ.. ತಲೆಮಾರುಗಳಿಂದ ಅಂಟಿಕೆ ಪಿಂಟಿಕೆ ಎನ್ನುವ ಜಾನಪದ ಕಲೆಯು (A unique Deepavali tradition Antike Pintike) ಮಲೆನಾಡಿನಲ್ಲಿ (Shivamogga) ಗಟ್ಟಿಯಾಗಿ ಬೇರುಬಿಟ್ಟಿದೆ. ಅಂಟಿಕೆ ಪಿಂಟಿಕೆ ತಂಡವು ಮನೆ ಮನೆಗೆ ದೀಪ ಹಿಡಿದುಕೊಂಡು ಎಂಟ್ರಿ ಕೊಡುತ್ತದೆ. ದೀಪಾವಳಿ ಹಬ್ಬದ ಕುರಿತು ಜಾನಪದ ಗೀತೆಗಳು ಎಲ್ಲರ ಗಮನ ಸೆಳೆಯುತ್ತವೆ.. ಅಂಟಿಕೆ ಪಿಂಟಿಕೆ ಜಾನಪದ ಕಲೆ ಕುರಿತು ಒಂದು ವರದಿ ಇಲ್ಲಿದೆ.. ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವತಿಯಿಂದ ಮಲೆನಾಡಿನ ವಿಶಿಷ್ಟ ಕಲೆಯಾದ (Deepavali Tradition) ಅಂಟಿಕೆ ಪಿಂಟಿಕೆ ಕಾರ್ಯಕ್ರಮ ಆಯೋಜಿಸಿತ್ತು. ಜ್ಯೋತಿಯು ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ತೆರಳಿ ದೀಪ ನೀಡಿ ಅಂಟಿಕೆ ಪಿಂಟಿಕೆ ಪದಗಳ ಮೂಲಕ ಶುಭ ಹಾರೈಸಿತು. ಆದಿಚುಂಚನಗಿರಿಯ ಕಾಲಭೈರವೇಶ್ವರ ದೇವಸ್ಥಾನದಿಂದ ಸಂಜೆ ಹೊರಟ ಅಂಟಿಕೆ ಪಿಂಟಿಕೆಯ ಎರಡು ತಂಡಗಳನ್ನು ನಗರದ ವಿವಿಧ ಬಡಾವಣೆಗಳ ನಿವಾಸಿಗಳು ಸಂಭ್ರಮದಿಂದ ಬರಮಾಡಿಕೊಂಡರು.
ನಗರದ ಸುಮಾರು 80 ಕ್ಕು ಹೆಚ್ಚು ಮೆನೆಗಳಿಗೆ ಅಂಟಿಕೆ ಪಿಂಟಿಕೆ ತಂಡ ಬೆಳಗಿನ ಜಾವದವರೆಗೂ ತೆರಳಿತು. ‘ದೀಪೋಳಿ ಎನ್ನಿರಣ್ಣಾ ..ಈ ಊರ ದೇವ್ರಿಗೆ’ , ‘ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ಣೆಲಿ ಕಣ್ನಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ’ ಎನ್ನುತ್ತಾ ಶುಭಹಾರೈಸಿದರು. ಅಂಟಿಕೆ ಪಿಂಟಿಕೆಯ ತಂಡ ತರುವ ಜ್ಯೋತಿ ಮನೆ ಪ್ರವೇಶಿಸಿದಾಗ ಮನೆಯವರು ದೀಪಕ್ಕೆ ಎಣ್ಣೆ ಎರೆದು ಪೂಜೆ ಸಲ್ಲಿಸುತ್ತಾರೆ.
ಹೀಗೆ ದೀಪ ಬೆಳಗಿದ ಮನೆಯಲ್ಲಿ ಮುಂದಿನ ವರ್ಷದವರೆಗೆ ಯಾವುದೇ ಕಷ್ಟಗಳು ಬರುವುದಿಲ್ಲ ಎಂಬ ಅಚಲ ನಂಬಿಕೆಯಿದೆ. ಮಲೆನಾಡಿನ ಸಾಂಪ್ರದಾಯಿಕ ಆಚರಣೆಗಳು ಇನ್ನೂ ಜೀವಂತವಾಗಿವೆ. ತಲೆಮಾರಿನಿಂದ ಅಂಟಿಕೆ ಪಿಂಟಿಕೆ ಕುಟುಂಬಗಳು ಈ ಜಾನಪದ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿದ್ದಾರೆ. ದೀಪಾವಳಿ ಹಬ್ಬದಿಂದ ಶುರುವಾದ ಜಾನಪದ ಆಚರಣೆಯು ಸುಮಾರು 15 ದಿನಗಳ ವರೆಗೆ ನಡೆಯುತ್ತಿದೆ.
ಮಲೆನಾಡಿನ ಜನರು ಹಬ್ಬದ ಸಂಭ್ರಮ ಸಡಗರ ಖುಷಿಯಲ್ಲಿರುತ್ತಾರೆ. ಮನೆ ಮನೆಗೆ ಅಂಟಿಕೆ ಪಿಂಟಿಕೆ ತಂಡವು ಬಂದು ದೀಪ ಬೆಳಗಿಸಿ, ಜಾನಪದ ಗೀತೆ ಹೇಳುವುದು ವಾಡಿಕೆ ಆಗಿದೆ. ಇನ್ನೂ ಕಲೆಯನ್ನು ಮಲೆನಾಡಿನಲ್ಲಿ ಮುಂದುವರೆಸಿಕೊಂಡು ಹೋಗುತ್ತಿರುವುದು ವಿಶೇಷವಾಗಿದೆ ಎನ್ನುತ್ತಾರೆ ಡಿ. ಮಂಜುನಾಥ್, ರಾಜ್ಯ ಜಾನಪದ ಪರಿಷತ್ ಅಧ್ಯಕ್ಷರು.
ಒಂದೊಂದು ಮನೆಯ ಮುಂದೆ ನಿಂತು ‘ಬಾಗಿಲ ತೆಗಿಯರಮ್ಮ ಭಾಗ್ಯದ ಲಕ್ಷ್ಮಮ್ಮ ಜ್ಯೋತ್ಸಮ್ಮನೊಳಗೆ ಕರಕೊಳ್ಳಿ’ ಎಂದು ‘ಮುಳ್ಳಾಗೆ ಕಲ್ಲಾಗೆ ಬಂದೇವಯ್ಯ ತಂದೇವಿ ದೀಪವ ಕೊಳ್ಳೀರೀ’ ಮುಂತಗಿ ಹಾಡಿಸಿ ಬಾಗಿಲು ತೆಗೆಸಿ ‘ಜ್ಯೋತಿಗೆಣ್ಣೆಯ ಅರೆಯ ಬನ್ನಿ’ ಎಂಬಂತ ಹಾಡುಗಳನ್ನು ಹೇಳಿ ತಮ್ಮ ಹಣತೆಯಿಂದ ಅವರಿಗೆ ದೀಪದ ಕುಡಿ ಕೊಡುತ್ತಾರೆ . ಅನಂತರ ಮನೆಯ ಜಗುಲಿಯನ್ನೇರಿ ಅರ್ಜುನ ಜೋಗಿಯ ಹಾಡು, ಉತ್ತರದೆವಿಯ ಹಾಡು, ತೆರೆ ಅಳೆಯುವ ಹಾಡು, ಕರು ಹಾಡು ಇತ್ಯಾದಿ ಧೀರ್ಘ ಜಾನಪದ ಗೀತೆಗಳನ್ನು ಹಾಡುತ್ತಾರೆ. ಕೊನೆಯಲ್ಲಿ ಮಂಗಳಗೀತೆ ಹೇಳುತ್ತಾರೆ.. ಹಾಡುಗಳಲ್ಲಿ ಹೆಚ್ಚಿನವು ತ್ರಿಪದಿಗಳು. ಉಳಿದವ ದ್ವಿಪದಿ, ಚೌಪದಿ ಮುಂತಾದ ಸರಳ ರಚನೆಗಳು, ಅಪರೂಪವಾಗಿ ಲಾವಣಿ ಅಥವಾ ಕೋಲಾಟದ ಮಟ್ಟುಗಳೂ ಇರುತ್ತವೆ.
Also Read: ದೀಪಾವಳಿ ಬಳಿಕ ವಿಜಯಪುರದಲ್ಲಿ ನಡೆಯುತ್ತೆ ಶಿವಾಜಿ ಉತ್ಸವ; ಏನಿದರ ವಿಶೇಷ? ಇಲ್ಲಿದೆ ವಿವರ
ಹಾಡುವಾಗ ಯಾವುದೇ ವಾದ್ಯ ಜೊತೆಗೆ ಇರುವುದಿಲ್ಲ. ಕಥನಗೀತೆಗಳಲ್ಲಿ ಸಾಮಾನ್ಯವಾಗಿ ಶಿವನ, ಶಿವಭಕ್ತರ ಅಪರೂಪವಾಗಿ ಐತಿಹಾಸಿಕ, ಕೌಟುಂಬಿಕ ಕಥೆಗಳು ಸೇರಿರುತ್ತವೆ. ಹಾಡುವವರಿಗೆ ಮನೆಮನೆಯಲ್ಲೂ ದೀಪಕ್ಕೆ ಎಣ್ಣೆ, ಬಟ್ಟೆ, ಅಕ್ಕಿ, ಹಣ್ಣು, ತೆಂಗಿನಕಾಯಿ ಹಬ್ಬದ ತಿಂಡಿ ಮತ್ತು ಕಾಣಿಕೆಯನ್ನು ಭಕ್ತರು ಸಲ್ಲಿಸುತ್ತಾರೆ. ಸದ್ಯ ಮಲೆನಾಡಿನ ಜನರು ಹಬ್ಬದ ಸಂತಸದಲ್ಲಿದ್ದಾರೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳ ಮನೆ ಮನೆಗೆ ಅಂಟಿಕೆ ಪಿಂಟಿಕೆ ತಂಡವು ಭೇಟಿ ನೀಡಿ ಪೂಜೆ ಮತ್ತು ದೀಪಾವಳಿಯ ಸಾಂಪ್ರದಾಯಿಕ ಆಚರಣೆಯಯನ್ನು ಮಾಡುತ್ತದೆ. ಇಂದಿನ ಹೈಟೆಕ್ ಯುಗದ ಯುವಕರು ಮತ್ತು ಯುವತಿಯರು ಮಕ್ಕಳಿಗೆ ಮಲೆನಾಡಿನ ಸೊಗಡು ಏನು ಎಂಬುವುದು ಈ ಅಂಟಿಕೆ ಪಿಂಟಿಕೆಯಿಂದ ಗೊತ್ತಾಗುತ್ತದೆ. ಈ ಅಂಟಿಕೆ ಪಿಂಟಿಕೆ ತಂಡ ಮನೆಗೆ ಭೇಟಿ ಕೊಟ್ಟಿದ್ದರು ಜನರಿಗೆ ಎಲ್ಲಿಲ್ಲದ ಸಂತಸ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಸ್ಥಳೀಯರಾದ ಮಾಲಾ.
ಮಲೆನಾಡಿನ ಅಪರೂಪದ ಜಾನಪದ ಕಲೆ ಅಂಟಿಕೆ ಪಿಂಟಿಕೆ ಇನ್ನೂ ಹೆಚ್ಚು ಜನರಿಗೆ ತಲುಪಬೇಕಿದೆ. ಈ ಕುರಿತು ಎಲ್ಲಿರಿಗೂ ಅರಿವು ಮೂಡಿಸುವ ಅಗತ್ಯವಿದೆ. ಈ ಜಾನಪದ ಕಲೆಯು ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಆದ್ರೆ ಈ ಕಲೆಯು ನಶಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯು ಯುವಪೀಳಿಗೆ ಮೇಲಿದೆ..
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ