ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿರುವ ಆಗುಂಬೆ ಘಾಟ್ನ (Agumbe Ghat) 9ನೇ ತಿರುವಿನಲ್ಲಿ ವ್ಯಾನ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದೆ. ಈ ವ್ಯಾನ್ನಲ್ಲಿ ಪ್ರಯಾಣಿಸುತ್ತಿದ್ದ 9 ಜನರ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಐವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಸಾವನ್ನಪ್ಪಿರುವ ನಾಲ್ವರು ಕಾರ್ಕಳದವರು ಎಂದು ತಿಳಿದುಬಂದಿದೆ.
ಮಲೆನಾಡು ಮತ್ತು ಕರಾವಳಿಗೆ ಸಂಪರ್ಕ ಕಲ್ಪಿಸುವ ಕಡಿದಾದ ತಿರುವುಗಳಿರುವ ಆಗುಂಬೆ ಘಾಟಿಯಲ್ಲಿ ನಡೆದಿರುವ ಈ ಅಪಘಾತದಲ್ಲಿ ಕಾರ್ಕಳದ ಮಿಯ್ಯಾರಿನ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ ಐವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗುಂಬೆ ಹಾಗೂ ಹೆಬ್ರಿ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.
ಅಫಘಾತಕ್ಕೀಡಾದ ವಾಹನ ಚಿಕ್ಕಮಗಳೂರಿನ ಕೊಪ್ಪಕ್ಕೆ ಇಂಟರ್ ಲಾಕ್ ಬ್ರಿಕ್ಸ್ ಗಳನ್ನು ಸರಬರಾಜು ಮಾಡಲು ತೆರಳಿ ಮಂಗಳೂರಿನ ಕಡೆಗೆ ವಾಪಾಸಾಗುತ್ತಿತ್ತು ಎನ್ನಲಾಗಿದೆ. ತೀರ್ಥಹಳ್ಳಿಯಿಂದ ಆಗುಂಬೆ ಘಾಟ್ ಮಾರ್ಗದಲ್ಲಿ ಬರುವಾಗ 9ನೇ ತಿರುವಿನಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದೆ. ಪೊಲೀಸರು ಮತ್ತು ಸ್ಥಳೀಯರು ಪ್ರಪಾತದಲ್ಲಿ ಬಿದ್ದಿದ್ದ ವಾಹನದಿಂದ ಮೃತದೇಹಗಳನ್ನು ಹೊರಗೆ ಎಳೆದಿದ್ದಾರೆ. ಉಳಿದವರ ಸ್ಥಿತಿಯೂ ಗಂಭೀರವಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇದನ್ನೂ ಓದಿ: ಆಗುಂಬೆ ಘಾಟ್ ಬಳಿ ರಾತ್ರಿ ವೇಳೆ.. ಚಲಿಸುವ ಕಾರ್ನಿಂದ ಬಿದ್ದ 5 ವರ್ಷದ ಮಗು!
ಆಗುಂಬೆ: ಆಕಸ್ಮಿಕ ಬೆಂಕಿಯಿಂದ ರಸ್ತೆಯಲ್ಲೇ ಧಗಧಗಿಸಿದ ಕಾರು; ತಪ್ಪಿತು ಭಾರೀ ಅವಗಢ