AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ಮೂವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಆರಗ ಜ್ಞಾನೇಂದ್ರ ಮಾಹಿತಿ

ಕಾರ್​​ನಲ್ಲಿ ನಾಲ್ಕು ಜನರೂ ಇದ್ದರು. ಆಟೋದಲ್ಲಿ ಒಬ್ಬ ಬಂದು ಮಾರಕಾಸ್ತ್ರ ಕೊಟ್ಟಿದ್ದಾರೆ. 8.45 ರಿಂದ 8.50 ರ ನಡುವೆ ಈ ಘಟನೆ ನಡೆದಿದೆ. ಹರ್ಷ ಒಬ್ಬನೇ ಮಗ. ಇಬ್ಬರು ಹೆಣ್ಣು ಮಕ್ಕಳು ಇದ್ದರು, ಅವರ ಮದುವೆ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ಮೂವರು ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಆರಗ ಜ್ಞಾನೇಂದ್ರ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ganapathi bhat|

Updated on:Feb 21, 2022 | 5:44 PM

Share

ಶಿವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ ನಿನ್ನೆ (ಫೆಬ್ರವರಿ 20) ನಡೆದಿದೆ. ಕಾರಿನಲ್ಲಿ ಬಂದಿದ್ದ 6 ಜನರಿಂದ ಹರ್ಷನ ಬರ್ಬರ ಹತ್ಯೆ ಮಾಡಲಾಗಿದೆ. ಹರ್ಷ ಕೂಡ ಪ್ರತಿದಾಳಿ ಮಾಡುವುದಕ್ಕೆ ಪ್ರಯತ್ನಿಸಿದ್ದಾರೆ. ಹೀಗಾಗಿ ಹರ್ಷ ಬ್ಯಾಟ್ ನೀಡುವಂತೆ ಕೂಡ ಕೇಳಿದ್ದಾರೆ ಎಂದು ಹರ್ಷ ಕೊಲೆಯ ಬಗ್ಗೆ ಟಿವಿ9ಗೆ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ದಾರೆ.

ಕಾರ್​​ನಲ್ಲಿ ನಾಲ್ಕು ಜನರೂ ಇದ್ದರು. ಆಟೋದಲ್ಲಿ ಒಬ್ಬ ಬಂದು ಮಾರಕಾಸ್ತ್ರ ಕೊಟ್ಟಿದ್ದಾರೆ. 8.45 ರಿಂದ 8.50 ರ ನಡುವೆ ಈ ಘಟನೆ ನಡೆದಿದೆ. ಹರ್ಷ ಒಬ್ಬನೇ ಮಗ. ಇಬ್ಬರು ಹೆಣ್ಣು ಮಕ್ಕಳು ಇದ್ದರು, ಅವರ ಮದುವೆ ಆಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಶಿವಮೊಗ್ಗ ನಗರದಲ್ಲಿ ಹರ್ಷ ಮೃತದೇಹ ಮೆರವಣಿಗೆ ವೇಳೆ ಉದ್ರಿಕ್ತರಿಂದ ಕಲ್ಲು ತೂರಾಟ ನಡೆಸಲಾಗಿದೆ. ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತವಾಗಿದೆ. ಶಿವಮೊಗ್ಗದ ಹೊಳೆ ಬಸ್​ ನಿಲ್ದಾಣದ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಶಿವಮೊಗ್ಗ ಬಿ.ಹೆಚ್. ರಸ್ತೆಯಲ್ಲಿ ಹಣ್ಣಿನ ಅಂಗಡಿ ಮೇಲೆ ಕಲ್ಲೆಸೆತ ನಡೆಸಲಾಗಿದೆ. ಶೋ ರೂಮ್, ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ; ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಶ್ರಮಿಸುತ್ತಿದ್ದಾರೆ

ಶಿವಮೊಗ್ಗ ಭದ್ರತೆಗೆ ಬೆಂಗಳೂರಿನ ಪೊಲೀಸರ ನಿಯೋಜನೆ ಮಾಡಲಾಗಿದೆ. 212 ಪೊಲೀಸರನ್ನ ರಾಜ್ಯ ಸರ್ಕಾರ ಭದ್ರತೆಗೆ ನಿಯೋಜಿಸಿದೆ. ನಾಲ್ವರು ಪಿಐ, 8 PSI, 200 ಹೆಚ್​ಸಿ, ಪಿಸಿ​ ನಿಯೋಜನೆ ಮಾಡಲಾಗಿದೆ. ಎಡಿಜಿಪಿ ಎಸ್.ಮುರುಗನ್ ಶಿವಮೊಗ್ಗಕ್ಕೆ ಕಳುಹಿಸಲಾಗಿತ್ತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಶ್ರಮಿಸುತ್ತಿದ್ದಾರೆ. ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ಹಂತದಲ್ಲಿರುವುದರಿಂದ ಮಾಹಿತಿ ನೀಡಲಾಗಲ್ಲ. ಬೆಳಗ್ಗೆ ಹರ್ಷನ ತಂದೆ, ತಾಯಿಯನ್ನು ಭೇಟಿಯಾಗಿದ್ದೆವು. ನನ್ನ ಮಗನನ್ನು ತಂದುಕೊಡಲಾಗಲ್ಲ, ಸೂಕ್ತ ಕ್ರಮಕೈಗೊಳ್ಳಿ. ಬೇರೆ ಮಕ್ಕಳಿಗೆ ಇಂತಹ ಸ್ಥಿತಿ ಬರಬಾರದು ಎಂದು ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಇಬ್ಬರು ಸೇರಿದಂತೆ ಮೂವರು ಆರೋಪಿಗಳ ಸೆರೆ ಹಿಡಿಯಲಾಗಿದೆ. ಮಧ್ಯಾಹ್ನ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾನೆ ಖಾಸಿಫ್​ ವಶಕ್ಕೆ ಪಡೆದಿದ್ದ ಶಿವಮೊಗ್ಗ ಪೊಲೀಸರು, ಶಿವಮೊಗ್ಗದಲ್ಲಿ ಬಂಧಿತ ಖಾಸಿಫ್​ ಹೇಳಿಕೆ ಆಧರಿಸಿ ಬಂಧನ ಮಾಡಲಾಗಿದೆ. ಐವರು ಸೇರಿ ಹರ್ಷನನ್ನು ಕೊಂದಿದ್ದಾಗಿ ಖಾಸಿಫ್​ ಬಾಯ್ಬಿಟ್ಟಿದ್ದಾರೆ. ಬೆಂಗಳೂರಿನ ಇಬ್ಬರು, ಉಳಿದವರು ಬೇರೆಯವರು ಎಂದಿದ್ದ. ಖಾಸಿಫ್​ ಮಾಹಿತಿ ಮೇರೆಗೆ ಬೆಂಗಳೂರಿಗೆ ಪೊಲೀಸ್ ಟೀಮ್​ ಬಂದಿದೆ. ಬೆಂಗಳೂರಿನಲ್ಲಿ ಆರೋಪಿಗಳಿಬ್ಬರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ನಿನ್ನೆ ರಾತ್ರಿ ಹರ್ಷನನ್ನು ಕೊಂದು ಬೆಂಗಳೂರಿಗೆ ಬಂದಿದ್ದರು. ಮೊಬೈಲ್​ ಸ್ವಿಚ್ ಆಫ್​ ಮಾಡಿಕೊಂಡು ಮನೆಯಲ್ಲೇ ಇದ್ದರು. ಸ್ಥಳೀಯ ಪೊಲೀಸರ ಸಹಕಾರದಿಂದ ಇಬ್ಬರು ಆರೋಪಿಗಳ ಸೆರೆ ಹಿಡಿಯಲಾಗಿದೆ. ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಲಾಗಿದೆ ಎಂದು ಟಿವಿ9ಗೆ ಪೊಲೀಸ್ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಶಿವಮೊಗ್ಗದಲ್ಲಿ 1,200 ಪೊಲೀಸ್ ಸಿಬ್ಬಂದಿ ಇದ್ದಾರೆ. ಬೆಂಗಳೂರಿನಿಂದಲೂ 200 ಸಿಬ್ಬಂದಿ ಕಳುಹಿಸಲಾಗಿದೆ. ಹರ್ಷ ಹತ್ಯೆಯಲ್ಲಿ ಐವರು ಭಾಗಿಯಾಗಿರುವ ಮಾಹಿತಿಯಿದೆ. ಮತ್ತೆ ಎಷ್ಟು ಜನ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಸದ್ಯಕ್ಕೆ ಯಾವುದೇ ಸಂಘಟನೆ ನಿಷೇಧಿಸುವ ಬಗ್ಗೆ ನಿರ್ಧರಿಸಿಲ್ಲ. ಅದಕ್ಕೆ ಕಾನೂನು ಪ್ರಕ್ರಿಯೆಗಳಿವೆ, ಮುಂದೆ ನೋಡೋಣ. ಸಮಯಾವಕಾಶ ನೋಡಿಕೊಂಡು ಸಂಘಟನೆ ನಿಷೇಧಿಸುತ್ತೇವೆ. ಯಾವುದನ್ನೂ ಬಾಯಿಬಿಟ್ಟು ಹೇಳುವಂತಹ ಸ್ಥಿತಿಯಲ್ಲಿಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಹರ್ಷ ಕುಟುಂಬಸ್ಥರಿಗೆ ಅರವಿಂದ ಲಿಂಬಾವಳಿ 1 ಲಕ್ಷ ರೂ. ಧನಸಹಾಯ ಘೋಷಣೆ, 25 ಲಕ್ಷ ರೂ. ಪರಿಹಾರ ನೀಡಲು ಮುತಾಲಿಕ್ ಒತ್ತಾಯ

ಹರ್ಷ ಕುಟುಂಬಸ್ಥರಿಗೆ ಅರವಿಂದ ಲಿಂಬಾವಳಿ ಧನಸಹಾಯ ಘೋಷಣೆ ಮಾಡಿದ್ದಾರೆ. ಹರ್ಷ ಕುಟುಂಬಸ್ಥರಿಗೆ ಲಿಂಬಾವಳಿ ₹1 ಲಕ್ಷ ಧನಸಹಾಯ ಮಾಡುವುದಾಗಿ ಅರವಿಂದ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ. ಸಿಎಂ ಭೇಟಿ ಮಾಡಿದ ಪ್ರಮೋದ್ ಮುತಾಲಿಕ್, ಹರ್ಷ ಕೊಲೆಗೆ ಕಾರಣರಾದವರ ಶೀಘ್ರ ಬಂಧನ ಮಾಡಬೇಕು, ಕಠಿಣ ಕ್ರಮ‌ಕ್ಕೆ ಆಗ್ರಹಿಸಿದ್ದಾರೆ. ಹರ್ಷ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಲು ಮನವಿ ಮಾಡಿದ್ದಾರೆ. ಹಿಂದೂ ಮುಖಂಡರು, ಕಾರ್ಯಕರ್ತರಿಗೆ ಸೂಕ್ತ ಭಧ್ರತೆ ಕೊಡಬೇಕು. ಎಸ್ ಡಿಪಿಐ, ಪಿಎಫ್ಐ, ಸಿಎಫ್ ಐ ನಿಷೇಧಿಸಬೇಕು. ಈ ಸಂಘಟನೆಗಳ ಮುಖಂಡರ ಬಂಧಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಹರ್ಷ ಮೃತದೇಹ ಮೆರವಣಿಗೆ ವೇಳೆ ಉದ್ರಿಕ್ತರಿಂದ ಕಲ್ಲು ತೂರಾಟ; ಮತ್ತೆ ಬಿಗು ವಾತಾವರಣ ನಿರ್ಮಾಣ

ಇದನ್ನೂ ಓದಿ: Shivamogga murder: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ! ಬೆಚ್ಚಿಬಿದ್ದ ಮಲೆನಾಡು ಜನ

Published On - 5:11 pm, Mon, 21 February 22

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!