Actress Anu Gowda: ಕಿರುತೆರೆ ಮತ್ತು ಚಲನಚಿತ್ರ ನಟಿ ಅನುಗೌಡ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

ಜಮೀನು ವಿವಾದದಲ್ಲಿ ಕಿರುತೆರೆ ಮತ್ತು ಚಲನಚಿತ್ರ ನಟಿ ಅನುಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ನಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Actress Anu Gowda: ಕಿರುತೆರೆ ಮತ್ತು ಚಲನಚಿತ್ರ ನಟಿ ಅನುಗೌಡ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು
ನಟಿ ಅನುಗೌಡ
Edited By:

Updated on: Jul 04, 2023 | 9:45 AM

ಶಿವಮೊಗ್ಗ: ಜಮೀನು ವಿವಾದ ಸಂಬಂಧ ಕಿರುತೆರೆ ಮತ್ತು ಚಲನಚಿತ್ರ ನಟಿ ಅನುಗೌಡ(actress Anu Gowda) ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಶಿವಮೊಗ್ಗ(Shivamogga) ಜಿಲ್ಲೆ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸದ್ಯ ನಟಿ ಅನುಗೌಡ ಸಾಗರದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನಿನ ವಿಚಾರದಲ್ಲಿ ಸ್ಥಳೀಯ ನೀವಾಸಿಗಳಾದ ನೀಲಮ್ಮ ಮತ್ತು ಮೋಹನ್ ಎನ್ನುವರು ಅನುಗೌಡ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಶಿವಮೊಗ್ಗದ ಯುವ ಸಹನಟನೊಂದಿಗೆ ಮದುವೆ ಪ್ರಸ್ತಾವ, ಭಾರೀ ಹಣ ವಂಚನೆ: ಬೆಂಗಳೂರಿನ ಸಿನಿಮಾ-ಕಿರುತೆರೆಯ ನಟಿ ಬಂಧನ

ಕಾಸ್ಪಡಿಯಲ್ಲಿರುವ ಜಮೀನನ್ನು ಅನುಗೌಡ ಅಪ್ಪ ಅಮ್ಮ ನೋಡಿಕೊಳ್ಳುತ್ತಿದ್ದು, ಅನುಗೌಡ ಆಗಾಗ ಬೆಂಗಳೂರಿನಿಂದ ಬಂದು ಹೋಗುತ್ತಿದ್ದರು. ಆದರೆ, ಜಮೀನು ವಿವಾದ ವಿಚಾರಕ್ಕೆ ಅನುಗೌಡ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಅನುಗೌಡ ತಮಿಳು ಹಾಗೂ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ವಿಷ್ನುವರ್ಧನ್, ಶಿವರಾಜ್​ ಕುಮಾರ್, ಪುನಿತ್ ರಾಜ್​ಕುಮಾರ್ ಹಾಗೂ ಸುದೀಪ್​ ಸಿನಿಮಾಗಳಲ್ಲಿ ಸೈಡ್ ಆ್ಯಕ್ಟಿಂಗ್ ಮಾಡಿದ್ದಾರೆ. ತಮಿಳಿನ ಮೌನಮಾನ ನೇರಂ, ಕಲಕಲ್, ಶಂಕರ, ಆಡಾದ ಆಟಮೆಲ್ಲ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಕನ್ನಡದಲ್ಲಿ ಸವಿಸವಿ ನೆನಪುಮ ಭೂಗತ, ವಿಷ್ಣುವರ್ಧನ್ ಜೊತೆಗೆ ಸ್ಕೂಲ್ ಮಾಸ್ಟರ್, ಕಿಚ್ಚ ಸುದೀಪ್​ ಜೊತೆ ಕೆಂಪೇಗೌಡ ಚಿತ್ರದಲ್ಲಿ ಆ್ಯಕ್ಟ್ ಮಾಡಿದ್ದಾರೆ. ದಂಡಂ ದಶಗುಣಂ ಚಿತ್ರದಲ್ಲಿ ರಮ್ಯಾ ಸಹೋದರಿ ಪಾತ್ರದಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಅವರ ಸುಗ್ರೀವ ಹಾಗೂ ಪುನಿತ್ ರಾಜ್​ಕುಮಾರ್ ಅವರ ಹುಡುಗರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ