AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದ ಯುವ ಸಹನಟನೊಂದಿಗೆ ಮದುವೆ ಪ್ರಸ್ತಾವ, ಭಾರೀ ಹಣ ವಂಚನೆ: ಬೆಂಗಳೂರಿನ ಸಿನಿಮಾ-ಕಿರುತೆರೆಯ ನಟಿ ಬಂಧನ

ಫೇಸ್ ಬುಕ್ ನ ನೀನಾಸಂ ಫ್ರೆಂಡ್ ಸರ್ಕಲ್ ನಲ್ಲಿ ಪರಿಚಯವಾಗಿದ್ದ ಶಿವಮೊಗ್ಗದ ಶರವಣನ್ ಎಂಬುವರು ಬೆಂಗಳೂರಿನ ಸಹಕಲಾವಿದೆ ಉಷಾ ಎಂಬುವರಿಗೆ ಪರಿಚಯವಾಗಿದ್ದಾರೆ. ಪರಿಚಯ ಸ್ನೇಹಕ್ಕೆ ಬದಲಾಗುತ್ತದೆ. ನಂತರ ಶರವಣನ್ ಮುಂದೆ ಮದುವೆಯಾಗುವ ಪ್ರಸ್ತಾವನೆಯನ್ನ ನಟಿ ಇಟ್ಟಿದ್ದಾಳೆ. ಅದಾದ ಮೇಲೆ ವಂಚನೆ ಶುರುವಾಗಿದೆ.

ಶಿವಮೊಗ್ಗದ ಯುವ ಸಹನಟನೊಂದಿಗೆ ಮದುವೆ ಪ್ರಸ್ತಾವ, ಭಾರೀ ಹಣ ವಂಚನೆ: ಬೆಂಗಳೂರಿನ ಸಿನಿಮಾ-ಕಿರುತೆರೆಯ ನಟಿ ಬಂಧನ
ಶಿವಮೊಗ್ಗದಲ್ಲಿ ಬೆಂಗಳೂರಿನ ಕಿರುತೆರೆಯ ನಟಿ ಬಂಧನ
Basavaraj Yaraganavi
| Updated By: ಸಾಧು ಶ್ರೀನಾಥ್​|

Updated on:Jun 17, 2023 | 10:24 AM

Share

ಸಿನಿಮಾ ಮತ್ತು ಕಿರುತೆರೆಯ ನಟಿಯೋರ್ವಳನ್ನ (TV actress) ಸ್ಥಳೀಯ ವಿನೋಬ ನಗರ ಪೊಲೀಸರು (Vinoba Nagar Police) ಶುಕ್ರವಾರ ಬಂಧಿಸಿ ನಗರದ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ವಂಚನೆ ಪ್ರಕರಣವೊಂದರಲ್ಲಿ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಸಹಕಲಾವಿದೆಯ ಬಂಧನದ ಕುರಿತು ಒಂದು ವರದಿ ಇಲ್ಲಿದೆ. ಬಣ್ಣದ ಲೋಕ ಸಿನಿಮಾ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟನೆ ಮಾಡುವುದೇ ಒಂದು ಕ್ರೇಜ್. ಕಲಾವಿದರು ನಟನೆಗೆ ಅವಕಾಶ ಸಿಕ್ಕರೆ ಸಾಕು. ಅವರು ಹೊಸ ಲೋಕಕ್ಕೆ ಎಂಟ್ರಿ ಕೊಟ್ಟು ಬಿಡುತ್ತಾರೆ. ನಟನೆಗೆ ಅವಕಾಶ ಸಿಕ್ಕ ಬಳಿಕ ಕಲಾವಿದರ ಸ್ಟ್ರೈಲ್ ಚೇಂಜ್ ಆಗಿ ಬಿಡುತ್ತದೆ. ಹೀಗೆ ಸಿನಿಮಾ ಮತ್ತು ಧಾರಾವಾಹಿಯಲ್ಲಿ ನಟಿಸಿದ ನಟಿ ಉಷಾ ರವಿಶಂಕರ್​​ ಎಂಬಾಕೆಯನ್ನು ಶಿವಮೊಗ್ಗ (ShivamoggaS) ಪೊಲೀಸರು ವಂಚನೆ (Fraud) ಪ್ರಕರಣದಲ್ಲಿ ಬಂಧಿಸಿದ್ದಾರೆ.

ಶುಕ್ರವಾರ ರಾತ್ರಿಯ ಬೆಳವಣಿಗೆ ಪ್ರಕಾರ ಶುಕ್ರವಾರ ರಾತ್ರಿ ನಟಿ ಉಷಾ ರವಿಶಂಕರ್ ವಂಚನೆ ಪ್ರಕರಣದಲ್ಲಿ ನಟಿಗೆ ಶಿವಮೊಗ್ಗದ ಜೆಎಂಎಫ್ ಸಿ ಮೂರನೇ ನ್ಯಾಯಾಲಯದ ನ್ಯಾಯಾಧೀಶೆ ಶೃತಿ ಅವರಿಂದ ಮದ್ಯಂತರ ಜಾಮೀನು ಮಂಜೂರು ಆಗಿದೆ. ಮಹಿಳೆ ಎನ್ನುವ ಕಾರಣದಿಂದ ನ್ಯಾಯಾಧೀಶೆ ಶೃತಿ ಅವರು ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು ಇಂದು ಶನಿವಾರ ರೆಗ್ಯುಲರ್ ಜಾಮೀನು ಪಡೆದುಕೊಳ್ಳಲು ನಟಿ ಪರ ನ್ಯಾಯವಾದಿಗೆ ಸೂಚನೆ ನೀಡಿದ್ದಾರೆ. ನಟಿ ಉಷಾ ಇನ್ನು ವಂಚನೆ ಪ್ರಕರಣವನ್ನು ಕೋರ್ಟ್ ನಲ್ಲಿ ಎದುರಿಸಬೇಕಿದೆ.

ಫೇಸ್ ಬುಕ್ ನ ನೀನಾಸಂ ಫ್ರೆಂಡ್ ಸರ್ಕಲ್ ನಲ್ಲಿ ಪರಿಚಯವಾಗಿದ್ದ ಶಿವಮೊಗ್ಗದ ವಿನೋಬನಗರದ ಶರವಣನ್ ಎಂಬುವರು ಬೆಂಗಳೂರಿನ ಸಹಕಲಾವಿದೆ ಉಷಾ ರವಿಶಂಕರ್ ಎಂಬುವರಿಗೆ ಪರಿಚಯವಾಗಿದ್ದಾರೆ. ಪರಿಚಯ ಸ್ನೇಹಕ್ಕೆ ಬದಲಾಗುತ್ತದೆ. ವಾಟ್ಸಪ್ ನಂಬರ್ ಗಳು ಇಬ್ಬರ ನಡುವೆ ಎಕ್ಸಚೇಂಜ್ ಆಗ್ತಾವೆ. ನಂತರ ಶರವಣನ್ ಮುಂದೆ ಮದುವೆಯಾಗುವ ಪ್ರಸ್ತಾವನೆಯನ್ನ ನಟಿ ಇಟ್ಟಿದ್ದಾಳೆ.

ಶರವಣನ್ ಸಹ 35 ವರ್ಷದ ಯುವಕನಾಗಿದ್ದು ಸಣ್ಣಪುಟ್ಟ ನಟನೆಯ ಜೊತೆ ಫ್ಯಾಕ್ಟರಿ ಕೆಲಸಕ್ಕೆ ಹೋಗ್ತಾ ಇದ್ದರು. ಸಹ ಕಲಾವಿದೆಯ ಮದುವೆ ಪ್ರಸ್ತಾವನೆಯನ್ನ ಒಪ್ಪಿಕೊಂಡವನಿಗೆ ಎದುರಾಗಿದ್ದೇ ಹಣದ ಬೇಡಿಕೆಗಳು. ಆದರೆ ಅಷ್ಟು ಸ್ಥಿತಿವಂತನಲ್ಲದ ಶರವಣನ್ ನಿನಗೆ ಸಾಲ ಕೊಡಿಸುವುದಾಗಿ ಭರವಸೆ ನೀಡಿ ಆನ್ ಲೈನ್ ನಲ್ಲಿ ತನ್ನ ಕ್ರೆಡಿಟ್ ಕಾರ್ಡ್ ಮೂಲಕ‌ ಹಣ ಕೊಡಿಸಿದ್ದಾರೆ. ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಮೇಲೆ 4 ಲಕ್ಷ ರೂ. ಸಾಲ ಕೊಡಿಸಿದ್ದಾರೆ. ಬೆಂಗಳೂರಿನಲ್ಲಿ ನೆಲೆಸಿದ್ದ ಉಷಾ ರವಿಶಂಕರ್ ಶರವಣನ್ ಭೇಟಿಯಾದಾಗಲೆಲ್ಲ ಹಣದ ಬೇಡಿಕೆ ಇಟ್ಟಿರುತ್ತಾಳೆ. ಹೀಗೆ 7-8 ಲಕ್ಷ ಹಣವನ್ನ ಪಡೆದ ಕಲಾವಿದೆ ಆತನ ಕ್ರೆಡಿಟ್ ಕಾರ್ಡು ಗಳ ಮೂಲಕವೂ ಹಣ ಪಡೆದು ಕೊಂಡಿರುವುದಾಗಿ ಶರವಣನ್ ದೂರಿದ್ದಾರೆ.

ಮದುವೆ ಆಗುವುದಾಗಿ ನಂಬಿಸಿ ಶರವಣನ್ ಗೆ ನಟಿಯು ದೋಖಾ ಮಾಡಿದ್ದಾಳೆ. 2022 ರಲ್ಲಿ ವಂಚನೆಯಾಗಿದೆ ಎಂದು ಆರೋಪಿಸಿ ಶರವಣನ್ ನಗರದ ವಿನೋಬ ನಗರ ಠಾಣೆಯಲ್ಲಿ ದೂರು ದಾಖಲಿಸಲು ಹೋದಾಗ ದೂರು ದಾಖಲಾಗಲಿಲ್ಲ. ನಂತರ ವಕೀಲ ವಿಶ್ವ ಟಿ ಎಂಬುವರ ಮೂಲಕ ಶಿವಮೊಗ್ಗ ಕೋರ್ಟ್ ನಲ್ಲಿ ಖಾಸಗಿ ದೂರು ಸಲ್ಲಿಸಿರುತ್ತಾರೆ. ಖಾಸಗಿ ದೂರಿನ ಮೂಲಕ ದೂರು ದಾಖಲಾದರೂ ಸಹ ಕಲಾವಿದೆಯ ಅಡ್ರೆಸ್ ಸಮಸ್ಯೆ ಎದುರಾಗಿತ್ತು.

ನಂತರ ವಾಟ್ಸಪ್ ಮೂಲಕವೇ ನಟಿಗೆ ನೋಟಿಸ್ ನೀಡಲಾಯಿತು. ಕೋರ್ಟ್ ನೋಟಿಸ್ ಜಾರಿ ಆದಾಗ ವಕೀಲರ ಮೂಲಕ ಹಾಜರಾಗಬೇಕಿದ್ದ ಸಹಕಲಾವಿದೆ ಆರಂಭದಲ್ಲಿ ವಕೀಲರ ಮೂಲಕ ನ್ಯಾಯಾಲದಲ್ಲಿ ಫೈಟ್ ಮಾಡಿದರೂ ಸಹ ಎರಡನೇ ಬಾರಿಯಾದರೂ ನ್ಯಾಯಾಲಕ್ಕೆ ಹಾಜರಾಗಿ ಜಾಮೀನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಇಲ್ಲೆಲ್ಲಾ ಎಡವಿದ ಸಹಕಲಾವಿದೆಗೆ ನಿರೀಕ್ಷಣ ಜಾಮೀನು ಸಹ ಮಂಜೂರಾಗಿತ್ತು. ನಿರೀಕ್ಷಣ ಜಾಮೀನು ದೊರೆತರೂ ಒಂದು ತಿಂಗಳಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಿತ್ತು. ಆದರೆ ಈ ನಟಿ ಹಾಜರಾಗಲಿಲ್ಲ. ಸಮನ್ಸ್ ಮೇಲೆ ಬರಲಿಲ್ಲ ಎಂದು ನಿನ್ನೆ ಶುಕ್ರವಾರ ವಿನೋಬ ನಗರ ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರಿ ಪಡಿಸಿದ್ದಾರೆ.

417, 418, 419, 420 ನಾಲ್ಕು ಸೆಕ್ಷನ್ ಹಾಕಲಾಗಿದೆ. ಎಫ್ ಐಆರ್ ಗೆ ಠಾಣೆಗೆ ರೆಫರ್ ಮಾಡಲು ನ್ಯಾಯಾಲಯ ಶರವಣನ್ ವಕೀಲರಿಗೆ ಕೇಳಿತ್ತು. ಆದರೆ ಕಕ್ಷಿದಾರರಿಗೆ ಮುಂದಿನ ಪ್ರೋಸೆಸ್ ನಲ್ಲಿ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಕೋರ್ಟ್ ಗೆ ವಿಚಾರಣೆ ನಡೆಸುವಂತೆ ವಕೀಲರು ಕೋರಿದ್ದರಿಂದ ನ್ಯಾಯಾಲಯ ವಿನೋಬ ನಗರ ಪೊಲೀಸ್ ಠಾಣೆಯ ಮೂಲಕ ಆಕೆಯನ್ನ ಬಂಧಿಸಲು ಸೂಚಿಸಿತ್ತು.

ನ್ಯಾಯಾಲಯದ ಆದೇಶದಂತೆ ನಟಿಯ ಬಂಧನವಾಗಿದೆ. ನಾಲ್ಕು ತಿಂಗಳ ಹಿಂದೆಯಷ್ಟೆ ಆಕೆಯ ವಿರುದ್ಧ ಕ್ರಿಮಿನಲ್ ಕೇಸ್ ಸಹ ಶರವಣನ್ ಹಾಕಿದ್ದರು. ನಟಿ ಉಷಾ ರವಿಶಂಕರ್. ಸಲಗ ಮತ್ತು ಒಂದಲ್ಲ ಎರಡು ಎಂಬ ಸಿನಿಮಗಳಲ್ಲಿ ಮತ್ತು ಧಾರವಾಹಿಗಳಲ್ಲಿ ನಟಿಸಿದ್ದರು. ಈಗ ತಾನೇ ದೊಡ್ಡ ಮತ್ತು ಕಿರು ಪರದೆಯಲ್ಲಿ ಕಾಲಿಟ್ಟು ಗುರುತಿಸಿಕೊಂಡಿದ್ದ ಉಷಾ ಈಗ ವಂಚನೆ ಪ್ರಕರಣದಲ್ಲಿ ಬಂಧನವಾಗಿತ್ತು.

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 am, Sat, 17 June 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ