ಶಿವಮೊಗ್ಗ: ನಾನು ಬೆಳೆಯಲು ಸಂಘ ಪರಿವಾರ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಕಾರಣ ಅಂತ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ (KS Eshwarappa) ಹೇಳಿಕೆ ನೀಡಿದ್ದಾರೆ. ಬಿಎಸ್ವೈ ವಿರುದ್ಧ ಗುಂಪು ಕಟ್ಟಿದ್ರೆ ದ್ರೋಹ ಮಾಡಿದಂತೆ. ನನ್ನ ತಂದೆ, ತಾಯಿಗೆ ನಾನು ದ್ರೋಹ ಮಾಡಿದಂತೆ. ಬಿಎಸ್ವೈ, ಈಶ್ವರಪ್ಪ ಎನ್ನುವ ಯಾವುದೇ ಗುಂಪು ಇಲ್ಲ ಅಂತ ಯಡಿಯೂರಪ್ಪ ಬಗ್ಗೆ ಈಶ್ವರಪ್ಪ ಭಾವುಕರಾಗಿ ಮಾತನಾಡಿದರು. ಇನ್ನು ನೂತನ ಸೂಡಾ ಅಧ್ಯಕ್ಷ ನಾಗರಾಜ್ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಸದ ಬಿ ವೈ ರಾಘವೇಂದ್ರ ಮಾತನಾಡಿ, ಶಿವಮೊಗ್ಗದಲ್ಲಿ ಬಿಎಸ್ವೈ ಮತ್ತು ಈಶ್ವರಪ್ಪ ಯಾವುದೇ ಬಣವಿಲ್ಲ. ಬಿಜೆಪಿ ಪಕ್ಷದಲ್ಲಿ ಸಂಘಟನೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಕಾರ್ಯಕರ್ತರನ್ನು ಗುರುತಿಸಿ ಉನ್ನತ ಸ್ಥಾನ ಬಿಜೆಪಿ ಪಕ್ಷದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ನಿರ್ಧಾರ ಕೈಗೊಂಡಿದ್ದು ಅಪರಾಧ
ಜಿಲ್ಲೆಯಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚಾಗುತ್ತಿಲ್ಲ. ನಗರದ ಯಾವ ಶಾಲೆಗೆ ರಜೆ ನೀಡಬೇಕೆಂದು ಸಂಜೆ ನಿರ್ಧಾರ ಮಾಡಲಾಗುವುದು. ಶಾಲೆಗಳನ್ನ ತೆರೆಯುವಂತೆ ಬಹುತೇಕರು ಮನವಿ ಮಾಡಿದ್ದಾರೆ. ಜ.26ರಂದು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಕೆಲವು ಶಾಲೆಗಳು ಅವರೇ ನಿರ್ಧಾರಕೈಗೊಂಡು ರಜೆ ನೀಡಿವೆ. ಜಿಲ್ಲಾಧಿಕಾರಿ ಸೇರಿದಂತೆ ಯಾರ ಗಮನಕ್ಕೂ ತರದೇ ನಿರ್ಧಾರ ಕೈಗೊಂಡಿದ್ದಾರೆ. ಅವರೇ ನಿರ್ಧಾರ ಕೈಗೊಂಡಿದ್ದು ಅಪರಾಧ ಅಂತ ಈಶ್ವರಪ್ಪ ಅಭಿಪ್ರಾಯಪಟ್ಟರು.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರಿಗೆ ಕೊರೊನಾ ಬಂತು. ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಕ್ಕೆ ಕೊರೊನಾ ಪಾಸಿಟಿವ್ ಬಂದಿದೆ. ಆರೋಗ್ಯ ದೃಷ್ಟಿಯಿಂದ ಪಾದಯಾತ್ರೆ ಬೇಡವೆಂದು ಹೇಳಿದ್ದೆವು. ರಾಜಕಾರಣ ಮಾಡಲು ಹೋಗಿ ಸೋಂಕು ಹರಡುವಂತಾಯಿತು. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಸೋಂಕು ಹೆಚ್ಚಳವಾಗಿಲ್ಲ. ಎಲ್ಲದಕ್ಕೂ ರಾಜಕಾರಣ ಬೆರೆಸುವುದು ಒಳ್ಳೆ ಬೆಳವಣಿಗೆಯಲ್ಲ ಅಂತ ತಿಳಿಸಿದರು.
ಇದನ್ನೂ ಓದಿ
ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ 10 ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷ! ವಿಡಿಯೋ ನೋಡಿ
Republic Day 2022: ಗಣರಾಜ್ಯೋತ್ಸವದ ಹಿನ್ನೆಲೆ, ಸಂವಿಧಾನದ ಬಗ್ಗೆ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು