ಬಾಳೆಹಣ್ಣು ಸುಲಿದಷ್ಟು ಸುಲಭವಲ್ಲ ಅದನ್ನು ತಿನ್ನುವುದು! ಜಸ್ಟ್​ ಎರಡು ನಿಮಿಷದಲ್ಲಿ ನೀವು ಎಷ್ಟು ಬಾಳೆಹಣ್ಣು ತಿನ್ನಬಲ್ಲಿರಿ?

ತುಂಬಾ ಹರಸಾಹಸ ಪಟ್ಟು ಸ್ಪರ್ಧಾಳುಗಳು ಅತೀ ಹೆಚ್ಚು ಬಾಳೆಹಣ್ಣು ತಿನ್ನುವ ಮೂಲಕ ಗಮನ ಸೆಳೆದರು. ಸ್ಪರ್ಧೆಯಲ್ಲಿ ಗೆದ್ದವರಿಗೆ ಸ್ಥಳದಲ್ಲೆ ಪ್ರಶಸ್ತಿ ನೀಡಿ ಗೌರವಿಸಿದರು. ನಗರ ಶಾಸಕ ಚನ್ನಬಸಪ್ಪ ಅವರು ಆಹಾರ ದಸರಾ ಪ್ರಯಕ್ತ ನಡೆದ ತಿನ್ನುವ ಸ್ಪರ್ಧೆಗೆ ಚಾಲನೆ ನೀಡಿದ್ದರು. ಏಳೂವರೆ ಬಾಳೆಹಣ್ಣು ತಿಂದ ಸುಜಾತ ಎಂಬ ಸ್ಪರ್ಧಾಳು ಮೊದಲ ಸ್ಥಾನ ಪಡೆದುಕೊಂಡರು. ಉಳಿದ ಸ್ಪರ್ಧಾಳುಗಳು ತಮ್ಮ ಶಕ್ತ್ಯಾನುಸಾರ ತಿನ್ನುವ ಮೂಲಕ ಮುಂದಿನ ಸ್ಥಾನಗಳನ್ನು ಪಡೆದರು.

ಬಾಳೆಹಣ್ಣು ಸುಲಿದಷ್ಟು ಸುಲಭವಲ್ಲ ಅದನ್ನು ತಿನ್ನುವುದು! ಜಸ್ಟ್​ ಎರಡು ನಿಮಿಷದಲ್ಲಿ ನೀವು ಎಷ್ಟು ಬಾಳೆಹಣ್ಣು ತಿನ್ನಬಲ್ಲಿರಿ?
ಆಹಾರ ದಸರಾ ಹಬ್ಬದ ಪ್ರಯುಕ್ತ ತಿನ್ನುವ ಸ್ಪರ್ಧೆ! ಜಸ್ಟ್​ ಎರಡು ನಿಮಿಷದಲ್ಲಿ ನೀವು ಎಷ್ಟು ಬಾಳೆಹಣ್ಣು, ಕೊಟ್ಟೆ ಕಡುಬು ತಿನ್ನಬಲ್ಲಿರಿ!?
Follow us
Basavaraj Yaraganavi
| Updated By: ಸಾಧು ಶ್ರೀನಾಥ್​

Updated on: Oct 17, 2023 | 1:14 PM

ಶಿವಮೊಗ್ಗ ನಗರದಲ್ಲಿ ದಸರಾ ಹಬ್ಬದ ಕಲರವ ಜೋರಾಗಿದೆ. ಮೈಸೂರು ಬಿಟ್ಟರೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ದಸರಾ ಹಬ್ಬ ಅದ್ಧೂರಿಯಾಗಿ ಆಚರಣೆ ನಡೆಯುತ್ತದೆ. ಇಂದು ಆಹಾರ ದಸರಾ ಹಬ್ಬದ ಪ್ರಯುಕ್ತ ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ಬಾಳೆಹಣ್ಣು.. ಕೊಟ್ಟೆ ಕಡಬು ತಿನ್ನುವ ಸ್ಪರ್ಧೆ ಹೇಗಿತ್ತು ಅಂತೀರಾ ಈ ಸ್ಟೋರಿ ನೋಡಿ. ಕೇವಲ ಎರಡು ನಿಮಿಷ. ಅಂದರೆ 120 ಸೆಕೆಂಡ್ ನಲ್ಲಿ ಬಾಳೇಹಣ್ಣು ಅತೀ ಹೆಚ್ಚು ತಿನ್ನುವ ಸ್ಪರ್ಧೆ. ಆಹಾರ ಇಲಾಖೆ ಸಿಬ್ಬಂದಿಗೆ ನಿನ್ನೆ ಸೋಮವಾರ ಹೀಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. ನಗರದ ಶಿವಪ್ಪ ನಾಯಕ ವೃತ್ತದ ಬಳಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೀಗೆ ನಗರದ ಮಾರುಕಟ್ಟೆಯಲ್ಲಿ ಸ್ಪರ್ಧೆ ಇದ್ದ ಹಿನ್ನೆಲೆಯಲ್ಲಿ ಸ್ಪರ್ಧೆ ನೋಡುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು.

ತಿನ್ನುವ ಸ್ಪರ್ಧೆ ಆರಂಭವಾಗುತ್ತಿದ್ದಂತೆ ಸಿಬ್ಬಂದಿಗಳು ಬಾಳೆಹಣ್ಣನ್ನು ವೇಗವಾಗಿ ತಿನ್ನತೊಡಗಿದರು. ಒಬ್ಬರಗಿಂತ ಒಬ್ಬರು ಬಾಳೆ ಹಣ್ಣು ಬಾಯಿ ಒಳಗೆ ಹೋಗುತ್ತಿತ್ತು. ಬಾಳೆಹಣ್ಣು ತಿನ್ನುವ ಸ್ಪರ್ಧೆ ನೋಡಿದ ಜನರು ಚೆಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಟೇಬಲ್ ಮೇಲೆ ಇದ್ದ ಬಾಳೆಹಣ್ಣು ಒಂದು ಎರಡು ಮೂರು ನಾಲ್ಕು ಹೀಗೆ ಗಂಟಲು ಒಳಗೆ ಹೋಗುತ್ತಿದ್ದವು. ಕೊನೆಯ ಕ್ಷಣದಲ್ಲಿ ತುಂಬಾ ಹರಸಾಹಸ ಪಟ್ಟು ಸ್ಪರ್ಧಾಳುಗಳು ಅತೀ ಹೆಚ್ಚು ಬಾಳೆಹಣ್ಣು ತಿನ್ನುವ ಮೂಲಕ ಗಮನ ಸೆಳೆದರು. ಸ್ಪರ್ಧೆಯಲ್ಲಿ ಗೆದ್ದವರಿಗೆ ಸ್ಥಳದಲ್ಲೆ ಪ್ರಶಸ್ತಿ ನೀಡಿ ಗೌರವಿಸಿದರು. ನಗರ ಶಾಸಕ ಚನ್ನಬಸಪ್ಪ ಅವರು ಆಹಾರ ದಸರಾ ಪ್ರಯಕ್ತ ನಡೆದ ತಿನ್ನುವ ಸ್ಪರ್ಧೆಗೆ ಚಾಲನೆ ನೀಡಿದ್ದರು. ಏಳೂವರೆ ಬಾಳೆಹಣ್ಣು ತಿಂದ ಸುಜಾತ ಎಂಬ ಸ್ಪರ್ಧಾಳು ಮೊದಲ ಸ್ಥಾನ ಪಡೆದುಕೊಂಡರು. ಉಳಿದ ಸ್ಪರ್ಧಾಳುಗಳು ಆರು.. ಐದು ಹೀಗೆ ತಮ್ಮ ಶಕ್ತ್ಯಾನುಸಾರ ಬಾಳೆ ಹಣ್ಣು ತಿನ್ನುವ ಮೂಲಕ ಎರಡು ಮತ್ತು ಮೂರು ಸ್ಥಾನ ವಿಜೇತರಾಗಿದ್ದರು. ಆದರೆ ಬಾಳೆಹಣ್ಣು ತಿನ್ನುವುದು ನೋಡಿದಷ್ಟು ಸುಲಭವಲ್ಲ ಎನ್ನುವುದು ಸ್ಪರ್ಧೆಯಲ್ಲಿ ಭಾಗವವಹಿಸಿದವರಿಗೆ ಅನುಭವಾಗಿತ್ತು.

ಬಾಳೆಹಣ್ಣು ತಿನ್ನುವ ಸ್ಪರ್ಧೆ ಮಗಿಯುತ್ತಿದ್ದಂತೆ ಕೊಟ್ಟೆ ಕಡುಬು, ಅವರೆಕಾಳು ಸಾರು ತಿನ್ನುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.‌ ಹೀಗೆ ಕಡುಬು ತಿನ್ನುವುದಕ್ಕೆ ಸ್ಪರ್ಧಾಳುಗಳು ಟೇಬಲ್ ಮೇಲೆ ಬ್ಯಾಟಿಂಗ್ ಆಡುವುದಕ್ಕೆ ರೆಡಿಯಾಗಿದ್ದರು. ಸ್ಪರ್ಧೆಗೆ ಚಾಲನೆ ನೀಡುತ್ತಿದ್ದಂತೆ ಕೈಯಿಂದ ಬಾಯಿಗೆ ವೇಗವಾಗಿ ಕೊಟ್ಟೆ ಕಡುಬು ಮತ್ತು ಅವರೆಕಾಯಿ ಸಾರು ನುಂಗುತ್ತಿದ್ದರು. ಬಕಾಸುರರಂತೆ ಒಬ್ಬರಗಿಂತ ಒಬ್ಬರು ಕಡುಬು ಗಬಗಬನೇ ತಿನ್ನುತ್ತಿದ್ದರು. ಕಡುಬು ತಿನ್ನಲು ಎರಡು‌ ನಿಮಿಷ ಸಮಯ ನಿಗದಿಯಾಗಿತ್ತು.

ಎರಡು ನಿಮಿಷದಲ್ಲಿ ಸ್ಪರ್ಧಿಯೊಬ್ಬರು 7 ಕಡುಬು ತಿನ್ನುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ವೇಗವಾಗಿ ತಿನ್ನುವುದು ಸುಲಭದ ಟಾಸ್ಕ್ ಅಲ್ಲ. ಅದರಲ್ಲೂ ಸಾರು ಮತ್ತು ಕೊಟ್ಟೆ ಕಡುಬು ತಿನ್ನುವುದಕ್ಕೆ ಸ್ಪರ್ಧಾಳುಗಳು ಹರಸಾಹಸ ಪಡುತ್ತಿದ್ದರು. ಕೆಲ ಸ್ಪರ್ಧೆಗಳು ಆರಂಭದಲ್ಲೆ ಸೋಲು ಖಚಿತವೆಂದು ತಿನ್ನುವುದು ನಿಲ್ಲಿಸಿದ್ರೆ ಮತ್ತೆ ಕೆಲ ಸ್ಪರ್ಧಾಳುಗಳು ಕಡುಬು ಹೆಚ್ಚೆಚ್ಚು ತಿಂದು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಅತೀ ಹೆಚ್ಚು ಕಡುಬು ತಿಂದ ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ಗೆದ್ದು ಬೀಗಿದರು. ಸುಮಾರು ಒಂದು ಘಂಟೆಗೂ ಅಧಿಕ ಸಮಯದಲ್ಲಿ ಬಾಳೆಹಣ್ಣು ಮತ್ತು ಕೊಟ್ಟೆ ಕಡುಬು ಸ್ಪರ್ಧೆ ನಡೆಯಿತು. ನೂರಾರು ಜನರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ದಸರಾ ಅಂದರೇನೇ ಹಾಗೆ.. ಜನಸಮೂಹದ ಮಧ್ಯೆ ಮನರಂಜನೆಗೆ ಹೆಚ್ಚು ಪ್ರಾಶಸ್ತ್ಯ. ಆಹಾರ ದಸರಾದಲ್ಲಿ ತಿನ್ನುವ ಸ್ಪರ್ಧೆಯು ನಗರದ ಜನರ ಗಮನ ಸೆಳೆದಿತ್ತು. ಸ್ಪರ್ಧಾಳುಗಳು ತಿನ್ನುವ ಸ್ಪರ್ಧೆಯಲ್ಲಿ ಕೆಲವರು ತಮ್ಮ ತಮ್ಮ ಸಾಮರ್ಥ್ಯದಂತೆ ತಿಂದು ಪ್ರಶಸ್ತಿ ಪಡೆಯಲು ಯಶಸ್ವಿಯಾದ್ರೆ, ಮತ್ತೊಂದಡೆ ಹೆಚ್ಚು ತಿನ್ನಲು ಆಗದೇ ಸ್ಪರ್ಧೆಯಲ್ಲಿ ಸೋತು ಹಿನ್ನಡೆ ಅನುಭವಿಸಿದರು. ತಿನ್ನುವ ಸ್ಪರ್ಧೆ ಅಂದ್ರೆ ಹೀಗಿರುತ್ತದೆಂದು ಪ್ರೇಕ್ಷಕರು ನೋಡಿ ಸಖತ್ ಎಂಜಾಯ್ ಮಾಡಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ