ಶಿವಮೊಗ್ಗ ಪಾಲಿಕೆಯಲ್ಲಿ ವೀರ್ ಸಾವರ್ಕರ್ ಫೋಟೋ ಇಟ್ಟು, ಪುಷ್ಪನಮನ ಸಲ್ಲಿಸಿದ ಜಿಲ್ಲಾ ಬಿಜೆಪಿ ಮುಖಂಡರು

| Updated By: ಆಯೇಷಾ ಬಾನು

Updated on: Aug 23, 2022 | 6:53 PM

ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಗಲಾಟೆಯಾಗಿತ್ತು. ಆ ದಿನ ಸಾವರ್ಕರ್ ಫ್ಲೆಕ್ಸ್ ಪರವಾಗಿ ಜಿಲ್ಲಾ ಬಿಜೆಪಿ ಮುಖಂಡ ಚನ್ನಬಸಪ್ಪ ಪ್ರತಿಭಟನೆ ನಡೆಸಿದ್ದರು. ಈಗ ಮುಂದುವರಿದ ಭಾಗವಾಗಿ ಕಚೇರಿಯಲ್ಲಿ ಫೋಟೋ ಹಾಕುವ ಮೂಲಕ ವಿರೋಧಿಸಿದವರಿಗೆ ತಿರುಗೇಟು ಕೊಟ್ಟಿದ್ದಾರೆ.

ಶಿವಮೊಗ್ಗ ಪಾಲಿಕೆಯಲ್ಲಿ ವೀರ್ ಸಾವರ್ಕರ್ ಫೋಟೋ ಇಟ್ಟು, ಪುಷ್ಪನಮನ ಸಲ್ಲಿಸಿದ ಜಿಲ್ಲಾ ಬಿಜೆಪಿ ಮುಖಂಡರು
ವೀರ್ ಸಾವರ್ಕರ್
Follow us on

ಶಿವಮೊಗ್ಗ: ಕೆಲ ದಿನಗಳ ಹಿಂದೆ ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಭಾರೀ ಗಲಾಟೆಯಾಗಿ ಅವಾಂತರಗಳಿಗೆ ಕಾರಣವಾಗಿತ್ತು. ಸದ್ಯ ಈಗ ಶಿವಮೊಗ್ಗ ಪಾಲಿಕೆಯಲ್ಲಿ ವಿ.ಡಿ.ಸಾವರ್ಕರ್ ಫೋಟೋ ಪ್ರತ್ಯಕ್ಷವಾಗಿದೆ. ಆಡಳಿತ ಪಕ್ಷದ ನಾಯಕರ ಕಚೇರಿಯಲ್ಲಿ ಸಾವರ್ಕರ್ ಫೋಟೋ ಅಳವಡಿಸಿ ಚನ್ನಬಸಪ್ಪರಿಂದ ಪುಷ್ಪನಮನ ಸಲ್ಲಿಸಲಾಗಿದೆ. ಇದಕ್ಕೆ ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಸಾಥ್ ನೀಡಿದ್ದಾರೆ.

ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಗಲಾಟೆಯಾಗಿತ್ತು. ಆ ದಿನ ಸಾವರ್ಕರ್ ಫ್ಲೆಕ್ಸ್ ಪರವಾಗಿ ಜಿಲ್ಲಾ ಬಿಜೆಪಿ ಮುಖಂಡ ಚನ್ನಬಸಪ್ಪ ಪ್ರತಿಭಟನೆ ನಡೆಸಿದ್ದರು. ಈಗ ಮುಂದುವರಿದ ಭಾಗವಾಗಿ ಕಚೇರಿಯಲ್ಲಿ ಫೋಟೋ ಹಾಕುವ ಮೂಲಕ ವಿರೋಧಿಸಿದವರಿಗೆ ತಿರುಗೇಟು ಕೊಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆ ಬಿಜೆಪಿಯ ‘ಕಮ್ಯುನಲ್ ಲ್ಯಾಬೊರೇಟರಿ’

ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕೆಪಿಸಿಸಿ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದೆ. ಶಿವಮೊಗ್ಗ ಜಿಲ್ಲೆ ಬಿಜೆಪಿಯ ‘ಕಮ್ಯುನಲ್ ಲ್ಯಾಬೊರೇಟರಿ’ಯಾಗಿ ಮಾಡಿಕೊಂಡಿದೆ. ಗೃಹಸಚಿವರ ತವರು ಜಿಲ್ಲೆಯಲ್ಲೇ 8 ತಿಂಗಳಲ್ಲಿ ಮೂರು ಕೋಮುಗಲಭೆ ಉಂಟಾಗಿದೆ ಎಂದರೆ ಅದು ಆರಗ ಜ್ಞಾನೇಂದ್ರ ಅವರ ಬೇಜವಾಬ್ದಾರಿತನವೋ, ಉದ್ದೇಶಪೂರ್ವಕ ಕುಮ್ಮಕ್ಕೋ? ಎಂದು ಟ್ವಿಟರ್ನಲ್ಲಿ ಗೃಹಸಚಿವರಿಗೆ ಕೆಪಿಸಿಸಿ ಟಾಂಗ್ ಕೊಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸಾವರ್ಕರ್ ಬಗ್ಗೆ ಜನಜಾಗೃತಿ ಮೂಡಿಸಲು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಇಂದಿನಿಂದ ರಥಯಾತ್ರೆ

ಮೈಸೂರು: ವೀರ್ ಸಾವರ್ಕರ್ (Veer Savarkar) ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಂಗಳವಾರದಿಂದ ಒಂದು ವಾರದವರೆಗೆ ರಥಯಾತ್ರೆಯೊಂದನ್ನು ಆಯೋಜಿಲಾಗಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು (BS Yediyurappa) ರಥಯಾತ್ರೆಗೆ ಚಾಲನೆ ನೀಡಿದ್ದಾರೆ. ರಥದ ಹಾಗೆ ಅಲಂಕೃತಗೊಳ್ಳುತ್ತಿರುವ ಈ ವಾಹನಕ್ಕೆ ಎಲ್ ಇ ಡಿ ಪರದೆ (LED screen) ಕಟ್ಟಲಾಗಿದ್ದು ಅದರಲ್ಲಿ ಸಾವರ್ಕರ್ ಬದುಕು, ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನಿರ್ವಹಿಸಿದ ಪಾತ್ರ ಮೊದಲಾದ ಸಂಗತಿಗಳು ಬಿತ್ತರಗೊಳ್ಳುತ್ತವೆ.

Published On - 6:49 pm, Tue, 23 August 22