AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ಉಗ್ರನ ಪರ ಮಾತನಾಡಿದ್ದಾರೆ, ಕೂಡಲೇ ಅವರನ್ನು ಕಾಂಗ್ರೆಸ್​ನಿಂದ ವಜಾ ಮಾಡಬೇಕು: ಕೆ.ಎಸ್.ಈಶ್ವರಪ್ಪ ಆಗ್ರಹ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಶಂಕಿತ ಉಗ್ರನ ಪರ ಮಾತನಾಡಿದ್ದಾರೆ. ಕೂಡಲೇ ಅವರನ್ನು ಕಾಂಗ್ರೆಸ್​ನಿಂದ ವಜಾ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದರು.

ಡಿಕೆ ಶಿವಕುಮಾರ್ ಉಗ್ರನ ಪರ ಮಾತನಾಡಿದ್ದಾರೆ, ಕೂಡಲೇ ಅವರನ್ನು ಕಾಂಗ್ರೆಸ್​ನಿಂದ ವಜಾ ಮಾಡಬೇಕು: ಕೆ.ಎಸ್.ಈಶ್ವರಪ್ಪ ಆಗ್ರಹ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
TV9 Web
| Edited By: |

Updated on: Dec 17, 2022 | 3:06 PM

Share

ಶಿವಮೊಗ್ಗ: ಉಗ್ರರ ವಿರುದ್ಧ ಕ್ರಮ ಕೈಗೊಂಡರೆ ಕಾಂಗ್ರೆಸ್​​ಗೆ ಸಮಾಧಾನ ಆಗುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ​ ಶಂಕಿತ ಉಗ್ರನ ಪರ ಮಾತನಾಡಿದ್ದಾರೆ. ಕೂಡಲೇ ಅವರನ್ನು ಕಾಂಗ್ರೆಸ್​ನಿಂದ ವಜಾ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ವಾಗ್ದಾಳಿ ಮಾಡಿದರು. ಪ್ರಧಾನಿ ಮೋದಿ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಹೇಳಿಕೆ ವಿಚಾರ ಮತ್ತು ಶಂಕಿತ ಉಗ್ರರ ಪರ ಡಿ.ಕೆ ಶಿವಕುಮಾರ್ ಬ್ಯಾಟಿಂಗ್ ಹಿನ್ನೆಲೆ ನಗರದಲ್ಲಿ ಬಿಜೆಪಿ ಪ್ರತಿಭಟನೆ ಮಾಡಿತು. ಬಳಿಕ ಮಾತನಾಡಿ, ಕುಕ್ಕರ್ ಬ್ಲಾಸ್ಟ್​ ಮಾಡಿದವನು ಭಯೋತ್ಪಾದಕ ಅಲ್ಲ ಅಂತಾರೆ. ಅಧಿಕಾರ ನಡೆಸಿದ ಡಿ.ಕೆ. ಶಿವಕುಮಾರ್​ಗೆ ಪ್ರಜಾಪ್ರಭುತ್ವ ಮೇಲೆ ನಂಬಿಕೆ ಇಲ್ಲ. ಡಿಕೆಶಿ, ಸಿದ್ದರಾಮಯ್ಯ ಮೈಯಲ್ಲಿ ಭುಟ್ಟೋ, ಜಿನ್ನಾ ರಕ್ತ ಹರಿಯುತ್ತಿದೆ. ಡಿಕೆಶಿ ಅವರ ಹೇಳಿಕೆಯನ್ನು ಕಾಂಗ್ರೆಸ್​​ನವರು ಖಂಡಿಸುವ ಕೆಲಸ ಮಾಡಿಲ್ಲ. ಖರ್ಗೆ ಅವರೇ ಮೊದಲು ಡಿಕೆಶಿ, ನಲಪಾಡ್​ನನ್ನ ಪಕ್ಷದಿಂದ ಹೊರಹಾಕಿ ಎಂದು ಕಿಡಿಕಾರಿದರು.

ಪಿಎಫ್​ಐ ಬ್ಯಾನ್​ ಮಾಡಿದಾಗಲೂ ಡಿ.ಕೆ.ಶಿವಕುಮಾರ್​ ಹೀಗೆ ಹೇಳಿದ್ದರು. ದೇಶ ದ್ರೋಹದ ಕಾರಣಕ್ಕೆ ಪಿಎಫ್​ಐ ಸಂಘಟನೆ ಬ್ಯಾನ್​ ಮಾಡಲಾಗಿದೆ. PFI ರೀತಿಯಲ್ಲೇ ಕಾಂಗ್ರೆಸ್ ಬ್ಯಾನ್​ ಮಾಡುವ ಸ್ಥಿತಿ ಬೇಗ ಬರುತ್ತೆ. ಡಿ.ಕೆ.ಶಿವಕುಮಾರ್​, ನಲಪಾಡ್​​​ನನ್ನು ರಾಜ್ಯದಿಂದ ಗಡಿಪಾರು ಮಾಡಲಿ ಎಂದು ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಇದನ್ನೂ ಓದಿ: ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರ ಆಯ್ಕೆ ಮಾಡಬಹುದೆಂಬ ಅಭಿಪ್ರಾಯ ಬರುತ್ತಿದೆ: ಕೆ. ಎಸ್​​ ಈಶ್ವರಪ್ಪ

ಕಾಂಗ್ರೆಸ್​ ಅಂದಿನಿಂದ ಭಯೋತ್ಪಾದನೆಗೆ ಬೆಂಬಲ ನೀಡುತ್ತಾ ಬರುತ್ತಿದೆ  

ಹಿಂದೆ ಇದ್ದ ಭಾರತ ಈಗ ಇಲ್ಲ‌. ಎಲ್ಲವೂ ಬದಲಾಗಿದೆ. ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದರು. ಆದರೆ ಈಗ ಹೆಮ್ಮೆಯಿಂದ ಹೇಳುತ್ತಾರೆ. ಪಾಕಿಸ್ತಾನದ ಭಯೋತ್ಪಾದನೆಯನ್ನು ಅಂದೇ ಕಾಂಗ್ರೆಸ್ ಸರ್ಕಾರ ಟೀಕಿಸುವ ಕೆಲಸ ಮಾಡಬೇಕಿತ್ತು. ಆದರೆ ಭಯೋತ್ಪಾದನೆಗೆ ಅಂದಿನಿಂದ ಬೆಂಬಲ ಕೊಡುತ್ತಾ ಬಂತು. ಇವತ್ತು ಕೂಡ ಅದನ್ನೇ ಮಾಡುತ್ತಿದೆ. ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಂಡರೇ ಕಾಂಗ್ರೆಸ್​ನವರಿಗೆ ಸಮಾಧಾನ ಆಗುತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕಲಬುರಗಿ: ಕನ್ನಡಿಗರಿಗೆ ಮಂಗಳೂರು ಕುಕ್ಕರ್ ಗೊತ್ತು ಆದರೆ ಬೆಳಗಾವಿ ಕುಕ್ಕರ್ ಅಂದರೇನು ಅಂತ ಬಸನಗೌಡ ಯತ್ನಾಳರೇ ವಿವರಿಸಬೇಕು!

ಪಾಕ್​ ಸಚಿವ ಬಿಲಾವಲ್ ಭುಟ್ಟೋ ಮೋದಿಗೆ ಕ್ಷಮೆ ಕೇಳಬೇಕು

ಇನ್ನು ಪ್ರಧಾನಿ ಮೋದಿ ವಿರುದ್ಧ ಬಿಲಾವಲ್ ಭುಟ್ಟೋ ಹೇಳಿಕೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಪಾಕ್​ನ ನಾಯಿ ಬೊಗಳಿದರೆ ಏನೂ ಮಾಡಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ನಾಯಕ ಅಂತಾ ಇಡೀ ವಿಶ್ವವೇ ಒಪ್ಪಿದೆ. ಪಾಕ್​ ಸಚಿವ ಬಿಲಾವಲ್ ಭುಟ್ಟೋ ಮೋದಿಗೆ ಕ್ಷಮೆ ಕೇಳಬೇಕು. ಪ್ರಪಂಚದ ಭೂಪಟದಲ್ಲಿ ಪಾಕಿಸ್ತಾನವನ್ನು ಅಳಸಿ ಹಾಕುತ್ತೇವೆ. ಈ ಮೂಲಕ ಅಖಂಡ ಭಾರತ ನಿರ್ಮಾಣ ಆಗುತ್ತದೆ. ಭಯೋತ್ಪಾದನಾ ಚಟುವಟಿಕೆಗೆ ಪಾಕ್​ ನಿರಂತರ ಕುಮ್ಮಕ್ಕು ನೀಡುತ್ತಿದೆ. ಭಾರತದ ಸೈನಿಕರು ತಯಾರಿದ್ದಾರೆ. ಪಾಕ್ ವಿರುದ್ಧ ಕಠಿಣ ಕ್ರಮಕ್ಕೆ ಮೋದಿ ಸೂಚನೆ ಕೊಟ್ಟಿದ್ದಾರೆ. ಚೈನಾ ಸೈನಿಕರನ್ನು ಓಡಿಸುವ ಶಕ್ತಿ ದೇಶಕ್ಕೆ ಇದೆ ಎಂದು ತೀವ್ರ ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ