ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಸಿದ್ಧ ಮತ್ತು ಪವಾಡ ಕ್ಷೇತ್ರ ಎನ್ನುವ ಹೆಗ್ಗಳಿಕೆ ಗಳಿಸಿರುವ ಪ್ರತ್ಯಂಗೀರಾದೇವಿ ಅಮ್ಮನವರ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ನಿನ್ನೆ (ಡಿಸೆಂಬರ್ 12) ಶಬರಿಮಲೈನಲ್ಲಿ ಅಯ್ಯಪ್ಪನಿಗೆ ಪೂಜೆ ಸಲ್ಲಿಸುವ ಪ್ರಧಾನ ಅರ್ಚಕರು ಆಗಮಿಸಿದ್ದರು. ಅಷ್ಟೇ ಅಲ್ಲ ಈ ದೇವಿ ದರ್ಶನ ಪಡೆದ ಅಯ್ಯಪ್ಪಸ್ವಾಮಿ (Aiyappa swamy) ದೇಗುಲದ ಅರ್ಚಕರು, ಸನ್ನಿಧಾನದಲ್ಲಿಯೇ ಅಯ್ಯಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಲೆನಾಡಿನ ಪವಾಡ ಕ್ಷೇತ್ರದಲ್ಲಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ನಡೆದಿದೆ, ಹಾಗಿದ್ದರೆ ಈ ಪೂಜೆಯ ವಿಶೇಷತೆ ಏನು ಎನ್ನುವವರಿಗೆ ಇಲ್ಲಿದೆ ಉತ್ತರ.
ಕುಟುಂಬದಲ್ಲಿ ಮತ್ತು ವೈಯಕ್ತಿವಾಗಿ ಯಾವುದೇ ಸಮಸ್ಯೆಗಳಿದ್ದರು ಮಲೆನಾಡಿನ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಈ ದೇವಸ್ಥಾನಕ್ಕೆ ಭಕ್ತರು ಬರುತ್ತಾರೆ. ಶಿವಮೊಗ್ಗದ ತಾಲೂಕಿನ ಮಂಡೇನಕೊಪ್ಪದ ಎನ್. ಆರ್. ಪುರ ರಸ್ತೆಯ ಹೆದ್ದಾರಿ ಪಕ್ಕದಲ್ಲಿ ಶ್ರೀ ಪ್ರತ್ಯಂಗೀರಾದೇವಿ ಸನ್ನಿದಾನವಿದೆ. ಈ ದೇವಸ್ಥಾನದ ವಿಶೇಷತೆ ಎಂದರೆ ಪ್ರತಿ ಹುಣ್ಣಿಮೆ ಮತ್ತು ಅಮವ್ಯಾಸೆ ದಿನ ಇಲ್ಲಿ ಒಣ ಮೆಣಸಿನಕಾಯಿ ಮಹಾಯಾಗವು ನಡೆಯುತ್ತಿದೆ. ಯಾವುದೇ ಕಷ್ಟಗಳು ಇದ್ದರೂ ಈ ಮಹಾಯಾಗದಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸಿದರೆ ಅವರ ಎಲ್ಲ ಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆ ಇದೆ.
ಅದರಲ್ಲೂ ಶತ್ರು ಮತ್ತು ಮಾಟ ಮಂತ್ರ ಇತ್ಯಾದಿ ಸಮಸ್ಯೆಗಳು ಈ ದೇವಿ ಸನ್ನಿದಾನದಲ್ಲಿ ಪರಿಹಾರವಾಗುತ್ತದೆ. ಒಣ ಮೆಣಸಿನಕಾಯಿ ಯಾಗ ಮಾಡಿದರೂ ಇಲ್ಲಿ ಸ್ವಲ್ಪವೂ ಘಾಟು ಇರುವುದಿಲ್ಲ. ಇದೇ ಈ ದೇವಿಯ ಕ್ಷೇತ್ರದ ಪವಾಡ. ಒಣ ಮೆಣಸಿಕಾಯಿ ಸುಟ್ಟರೇ ಅದರ ಘಾಟಿಗೆ ಯಾರು ಇಲ್ಲಿ ನಿಲ್ಲಲು ಸಾಧ್ಯವಿಲ್ಲ. ಆದರೆ ಇಲ್ಲಿ ಅದ್ಯಾವುದು ಇರುವುದಿಲ್ಲ. ಇಂತಹ ಪವಾಡ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಅಯ್ಯಪ್ಪನ ಸನ್ನಿಧಾನದಿಂದ ಪ್ರಧಾನ ಅರ್ಚಕರಾಗಿರುವ ಜಯರಾಜ್ ಪೊಟ್ಟಿ ಅವರು ಬಂದಿದ್ದರು.
ಲೋಕಕಲ್ಯಾಣಕ್ಕಾಗಿ ಕೊರೊನಾ ಮಹಾಮಾರಿಯಿಂದ ಜನರು ಸುರಕ್ಷಿತವಾಗಿರಬೇಕೆನ್ನುವ ಉದ್ದೇಶದಿಂದ ಇಲ್ಲಿ ಶಕ್ತಿಪೂಜೆ ಮತ್ತು ಅಯ್ಯಪ್ಪನ ಪಡಿಪೂಜೆ ನೆರವೇರಿಸಲಾಯಿತು. ಅಯ್ಯಪ್ಪನ ಸನ್ನಿಧಾನದಿಂದ ಬಂದಿರುವ ಪ್ರಧಾನ ಅರ್ಚಕ ಜಯರಾಜ್ ಪೊಟ್ಟಿ ಅವರರನ್ನು ಚಂಡೆ, ಮದ್ದಲು, ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಲಾಯಿತು. ಬಳಿಕ ದೇವಿಯ ದರ್ಶನ ಪಡೆದು, ದೇವಿಯ ಸನ್ನಿಧಾನದಲ್ಲೇ ಶಕ್ತಿಫೂಜೆಯನ್ನು ನೆರವೇರಿಸಿದರು.
ದೇವಿಯ ಸೂಚನೆಯಂತೆ ಇಲ್ಲಿಗೆ ಬಂದು ಅಯ್ಯಪ್ಪನ ಪೂಜೆ ಮಾಡುತ್ತಿರುವೆ. ಈ ದೇವಸ್ಥಾನದಲ್ಲಿ ನಡೆಯುವ ಪವಾಡ ಕೇಳಿ ನಿಜಕ್ಕೂ ನನಗೆ ಸಂತೋಷವಾಗಿದೆ. ಪ್ರತ್ಯಂಗೀರಾದೇವಿಯ ಸನ್ನಿಧಾನಕ್ಕೆ ಬಂದು ಅಯ್ಯಪ್ಪನ ಪೂಜೆ ಸಲ್ಲಿಸುತ್ತಿರುವುದಕ್ಕೆ ಸಂತವಾಗಿದೆ ಎಂದು ಶಬರಿಮಲೈ ಸನ್ನಿಧಾನದ ಪ್ರಧಾನ ಅರ್ಚಕರಾದ ಜಯರಾಜ್ ಹೇಳಿದ್ದಾರೆ.
ಇನ್ನು ದೇವಸ್ಥಾನಕ್ಕೆ ಬಂದಿರುವ ಕೇರಳದ ಅಯ್ಯಪ್ಪಸ್ವಾಮಿ ಪ್ರಧಾನ ಅರ್ಚಕರ ದರ್ಶನ ಪಡೆಯಲು ಅಯ್ಯಪ್ಪ ಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದರು. ದೇವಸ್ಥಾನದ ಅಕ್ಕಪಕ್ಕದ ನೂರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು. ದೇವಿಯ ಸನ್ನಿಧಾನದ ಮುಂದೆ ಅಯ್ಯಪ್ಪನ ಸ್ವಾಮಿಯ ಪಡಿಪೂಜೆ ಕೂಡ ಇತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಅಯ್ಯಪ್ಪಸ್ವಾಮಿ ಪ್ರಧಾನ ಅರ್ಚಕರ ದರ್ಶನ ಮತ್ತು ಅವರ ಸಲ್ಲಿಸುವ ಅಯ್ಯಪ್ಪನ ಪೂಜೆ ನೋಡಲು ನೆರೆದಿದ್ದರು.
ಅಯ್ಯಪ್ಪ ಸ್ವಾಮಿ ಸನ್ನಿಧಾನದಂತೆ ಇಲ್ಲಿಯುವ ಬಾಳೆದಿಂಡಿನಿಂದ ಅಯ್ಯಪ್ಪ ಗರ್ಭಗುಡಿಯನ್ನು ಸಿದ್ಧಪಡಿಸಲಾಗಿತ್ತು. ಶಾಸ್ತ್ರೋಕ್ತವಾಗಿ ಅಯ್ಯಪ್ಪನ ಪಡಿಪೂಜೆ ನಡೆಯಿತು. ಬಾಲಸ್ವರೂಪಿ ಅಯ್ಯಪ್ಪನ ವಿಗ್ರಹವನ್ನು ಮೆರವಣಿಗೆಯ ಮೂಲಕ ತರಲಾಯಿತು. ಪಂಚಲೋಹದ ಅಯ್ಯಪ್ಪನ ವಿಗ್ರಹಕ್ಕೆ ಕೇರಳದಿಂದ ಬಂದಿರುವ ಅರ್ಚಕರು ವಿವಿಧ ದ್ರವ್ಯ ಮತ್ತು ತುಪ್ಪದ ಅಭಿಷೇಕ ಮಾಡಿದರು. ಅಯ್ಯಪ್ಪನ ವಿಗ್ರಹಕ್ಕೆ ಪೂಜೆಯನ್ನು ನೋಡಿ ಅಯ್ಯಪ್ಪ ಮಾಲಾಧಿಕಾರಿಗಳು ಮತ್ತು ಭಕ್ತರು ಕಣ್ತುಂಬಿಕೊಂಡರು.
ವರದಿ: ಬಸವರಾಜ್ ಯರಗಣವಿ
ಇದನ್ನೂ ಓದಿ:
ಆರತಿ ಬೆಳಗುವಾಗ ಪ್ರಸಾದ ನೀಡಿ ಒಲುಮೆ ತೋರಿದ ದೇವಿ; ಗೃಹ ಸಚಿವ ಆರಗ ಜ್ಞಾನೇಂದ್ರ ಕಣ್ಣೆದುರೇ ಅಚ್ಚರಿ
ಹಾವೇರಿಯಲ್ಲಿ ಕಾಂತೇಶನಾಗಿ ನಿಂತ ಆಂಜನೇಯ ದೇವಾಲಯದ ವಿಶೇಷತೆಗಳನ್ನು ನೋಡಿ
Published On - 8:34 am, Mon, 13 December 21