ಶಿವಮೊಗ್ಗ ಈದ್​ ಗಲಾಟೆ: ಠಾಣಾಧಿಕಾರಿ ಸೇರಿ ಮೂವರು ಪೋಲಿಸ್ ಕಾನ್ಸ್​ಟೇಬಲ್​ ಅಮಾನತು

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 08, 2023 | 7:30 PM

ಈದ್​ ಮಿಲಾದ್(Eid-Milad) ಮೆರವಣಿಗೆ ವೇಳೆ ನಗರದಲ್ಲಿ ನಡೆದ​ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಕಾನ್ಸ್​ಟೇಬಲ್​​ಗಳನ್ನು ಅಮಾನತುಗೊಳಿಸಲಾಗಿದೆ. ಶಿವಮೊಗ್ಗ (Shivamogga) ಎಸ್​ಪಿ ಜಿ.ಕೆ ಮಿಥುನ್ ಕುಮಾರ್ ಸಲ್ಲಿಸಿದ​​ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.

ಶಿವಮೊಗ್ಗ ಈದ್​ ಗಲಾಟೆ: ಠಾಣಾಧಿಕಾರಿ ಸೇರಿ ಮೂವರು ಪೋಲಿಸ್ ಕಾನ್ಸ್​ಟೇಬಲ್​ ಅಮಾನತು
ಪ್ರಾತಿನಿಧಿಕ ಚಿತ್ರ
Follow us on

ಶಿವಮೊಗ್ಗ, ಅ.08: ಈದ್​ ಮಿಲಾದ್(Eid-Milad) ಮೆರವಣಿಗೆ ವೇಳೆ ನಗರದಲ್ಲಿ ನಡೆದ​ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಕಾನ್ಸ್​ಟೇಬಲ್​​ಗಳನ್ನು ಅಮಾನತುಗೊಳಿಸಲಾಗಿದೆ. ಶಿವಮೊಗ್ಗ (Shivamogga) ಎಸ್​ಪಿ ಜಿ.ಕೆ ಮಿಥುನ್ ಕುಮಾರ್ ಸಲ್ಲಿಸಿದ​​ ವರದಿ ಆಧರಿಸಿ, ರಾಗಿಗುಡ್ಡ ಗಲಾಟೆ ನಿಭಾಯಿಸಲು ವಿಫಲವಾದ ಹಿನ್ನಲೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್​ ಅವರು ಪೋಲಿಸ್ ಠಾಣಾಧಿಕಾರಿ ಅಭಯ ಪ್ರಕಾಶ್ ಸೇರಿ ಕಾನ್ಸ್​ಟೇಬಲ್​ಗಳಾದ ಕಾಶಿನಾಥ್, ರಂಗನಾಥ್​ ಹಾಗೂ ಶಿವರಾಜ್ ಅವರನ್ನು ಅಮಾನತುಗೊಳಿಸಿ ​ ಆದೇಶ ಹೊರಡಿಸಿದ್ದಾರೆ.

ಘಟನೆ ವಿವರ

ಇದೇ ಅಕ್ಟೋಬರ್​ 1 ರಂದು ಶಿವಮೊಗ್ಗದಲ್ಲಿ ಅದ್ಧೂರಿ ಈದ್ ಮಿಲಾದ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಅಷ್ಟೇ ಅಲ್ಲದೆ ಕೆಲ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳು ಕೂಡಲೇ ಶಿವಮೊಗ್ಗದ ರಾಗಿಗುಡ್ಡದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದರು. ಇನ್ನು ಉದ್ವಿಗ್ನ ಪರಿಸ್ಥಿತಿ ನಿಭಾಯಿಸಲು ತೆಗೆದುಕೊಂಡ 144 ಸೆಕ್ಷನ್​ ಜಾರಿಯಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಹೌದು, ವ್ಯಾಪಾರ ವಹಿವಾಟಿಗೆ ಅವಕಾಶ ಇಲ್ಲದೆ ಬೇಕರಿ ಐಟಂಗಳು ಹಾಳಾಗಿ, ಸಾಲ ಮಾಡಿ ತಂದಿದ್ದ ಸ್ವೀಟ್ಸ್ , ಬ್ರೆಡ್​​ಗಳಿಗೆಲ್ಲಾ ಬೂಸ್ಟ್ ಬಂದು ಹಾಳಾಗಿತ್ತು.

ಇದನ್ನೂ ಓದಿ:ಶಿವಮೊಗ್ಗ ಗಲಾಟೆ: ಹರಿಹರ ಬ್ರಹ್ಮ ಬಂದರೂ ಹಿಂದುತ್ವ ಹತ್ತಿಕ್ಕಲು ಆಗುವುದಿಲ್ಲ; ಶಾಸಕ ಚನ್ನಬಸಪ್ಪ

ಇನ್ನುಗಲಾಟೆ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಊಹಾಪೋಹ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಪಿ ಹೇಳಿದ್ದರು. ಈ ಘಟನೆಗೆ ಸಂಬಂಧಿಸದಂತೆ ರಾಗಿಗುಡ್ಡದಲ್ಲಿ ಯಾರೋ ಒಬ್ಬರನ್ನು ಎನ್ ಕೌಂಟರ್ ಮಾಡಲಾಗಿದೆ ಎನ್ನುವ ಊಹಾಪೋಹ ಹರಿದಾಡಿತ್ತು. ಈ ಹಿನ್ನಲೆ ಆ ರೀತಿ ಊಹಾಪೋಹಗಳ ಕುರಿತು ಈಗಾಗಲೇ ನಾವು ಸ್ಪಷ್ಟನೆಯನ್ನ ಪಡೆದುಕೊಂಡಿದ್ದೇವೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Sun, 8 October 23