ಶಿವಮೊಗ್ಗ: ಮದುವೆಯಲ್ಲಿ ಊಟ ಮಾಡಿದ್ದ 30ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ; ಮೆಗ್ಗಾನ್ ಆಸ್ಪತ್ರೆಗೆ ದಾಖಲು

| Updated By: ganapathi bhat

Updated on: Nov 12, 2021 | 9:23 PM

Shivamogga News: ಆಲದಳ್ಳಿ ಸೋಮಿನಕೊಪ್ಪ ಗ್ರಾಮದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿ ಆಗಿದ್ದರು ಎಂದು ತಿಳಿದುಬಂದಿದೆ. ಮದುವೆ ಮನೆಯಲ್ಲಿ ಊಟದ ಬಳಿಕ ಜನರಲ್ಲಿ ವಾಂತಿ ಬೇಧಿ ಶುರುವಾಗಿದೆ ಎನ್ನಲಾಗಿದೆ.

ಶಿವಮೊಗ್ಗ: ಮದುವೆಯಲ್ಲಿ ಊಟ ಮಾಡಿದ್ದ 30ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ; ಮೆಗ್ಗಾನ್ ಆಸ್ಪತ್ರೆಗೆ ದಾಖಲು
ಮೆಗ್ಗಾನ್ ಆಸ್ಪತ್ರೆ (ಸಂಗ್ರಹ ಚಿತ್ರ)
Follow us on

ಶಿವಮೊಗ್ಗ: ಮದುವೆಯಲ್ಲಿ ಊಟ ಮಾಡಿದ್ದ 30ಕ್ಕೂ ಅಧಿಕ ಜನರಿಗೆ ವಾಂತಿ ಭೇದಿ ಉಂಟಾದ ಘಟನೆ ಇಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮಸ್ಥರಿಗೆ ವಾಂತಿ ಭೇದಿ ಉಂಟಾಗಿದೆ. ಮದುವೆಯಲ್ಲಿ ಊಟ ಮಾಡಿದ್ದವರಿಗೆ ವಾಂತಿ ಭೇದಿ ಕಂಡುಬಂದಿದೆ. ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು ಅಸ್ವಸ್ಥರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಲದಳ್ಳಿ ಸೋಮಿನಕೊಪ್ಪ ಗ್ರಾಮದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿ ಆಗಿದ್ದರು ಎಂದು ತಿಳಿದುಬಂದಿದೆ. ಮದುವೆ ಮನೆಯಲ್ಲಿ ಊಟದ ಬಳಿಕ ಜನರಲ್ಲಿ ವಾಂತಿ ಬೇಧಿ ಶುರುವಾಗಿದೆ ಎನ್ನಲಾಗಿದೆ. 30 ಕ್ಕೂ ಹೆಚ್ಚು ಜನರಿಗೆ ವಾಂತಿ ಬೇಧಿ ಕಾಣಿಸಿಕೊಂಡಿದೆ.

ಮದುವೆ ಊಟ ಮಾಡಿದ್ದವರಿಗೆ ವಾಂತಿ ಭೇದಿ ಪ್ರಕರಣಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ ಹೇಳಿಕೆ ನೀಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಭೇಟಿ ಬಳಿಕ ಸಿಇಒ ವೈಶಾಲಿ ಪ್ರತಿಕ್ರಿಯೆ ನೀಡಿದ್ದಾರೆ. ಹರಮಘಟ್ಟದಲ್ಲಿ ಇಂದು ಮಧ್ಯಾಹ್ನದಿಂದ ವಾಂತಿ ಭೇದಿ ಕಂಡುಬಂದಿದೆ. ನಿನ್ನೆ ಮದುವೆಯಲ್ಲಿ ಊಟ ಮಾಡಿದ್ದ ಜನರಿಗೆ ವಾಂತಿ ಆಗಿದೆ. ಮದುವೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಜನ ಭಾಗಿ ಆಗಿದ್ದರು. 30ಕ್ಕೂ ಹೆಚ್ಚು ಜನರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಈವರೆಗೆ ಯಾವುದೇ ಗಂಭೀರ ಪ್ರಕರಣ ಕಂಡುಬಂದಿಲ್ಲ. ಎಲ್ಲ ಮುಂಜಾಗ್ರತೆಯನ್ನ ವಹಿಸಲಾಗಿದೆ ಎಂದು ವೈಶಾಲಿ ಹೇಳಿದ್ದಾರೆ. ವರದಿ ಬಳಿಕ ನಿಖರ ಕಾರಣ ಏನೆಂದು ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಯಾದಗಿರಿ: ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ ಲೈಂಗಿಕ ಕಿರುಕುಳ ಪ್ರಕರಣ; ಪ್ರಾಂಶುಪಾಲ ಅಮಾನತು
ವಿದ್ಯಾರ್ಥಿನಿಯರ ಮೇಲೆ ಪ್ರಾಂಶುಪಾಲ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಹಿನ್ನಲೆ ಪ್ರಾಂಶುಪಾಲರನ್ನು ಸಸ್ಪೆಂಡ್ ಮಾಡಲಾಗಿದೆ. ಯಾದಗಿರಿ, ಮುಂಡರಗಿ ಬಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಭಾರಿ ಪ್ರಾಂಶುಪಾಲ ಹಯ್ಯಾಳಪ್ಪ ಜಾಗೀರದಾರ್ ಎಂಬವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ದೇಸಾಯಿ ಅಮಾನತು ಮಾಡಿ ಆದೇಶ ನೀಡಿದ್ದಾರೆ.

ಯಾದಗಿರಿ ತಾಲೂಕಿನ ಮುಂಡರಗಿ ಬಳಿಯ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ಇಲ್ಲಿನ ಪ್ರಾಂಶುಪಾಲ ಹಯ್ಯಾಳಪ್ಪ ವಿರುದ್ಧ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಈ ಸಂಬಂಧ, ನಿನ್ನೆ ಹಯ್ಯಾಳಪ್ಪ ವಿರುದ್ಧ ಯಾದಗಿರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಸ್ಕೊ ಕಾಯ್ದೆಯಡಿ ಕೇಸ್ ದಾಖಲಾಗಿತ್ತು. ವಿದ್ಯಾರ್ಥಿನಿಯರಿಗೆ ಹೆಚ್ಚು ಅಂಕ ಕೊಡುವುದಾಗಿ ಆಮಿಷಯೊಡ್ಡಿ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಆರೋಪಿಯನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಕೆರೆಯಲ್ಲಿರುವ ಪಕ್ಷಿ ರಕ್ಷಿಸಲು ಹೋಗಿ ಯುವಕ ಸಾವು

ಇದನ್ನೂ ಓದಿ: ಶಿವಮೊಗ್ಗ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಅಗ್ನಿ ಆಕಸ್ಮಿಕ; ತಪ್ಪಿದ ದುರಂತ

Published On - 7:23 pm, Fri, 12 November 21