AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತ್ಯಾವರೆಕೊಪ್ಪ ಮೃಗಾಲಯದಲ್ಲಿ ಸೂತಕದ ಛಾಯೆ: ಸಿಂಹಿಣಿ ಜನ್ಮ ನೀಡಿದ್ದ 4 ಮರಿಗಳ ಸಾವು

ಮಲೆನಾಡ ಭಾಗದ ಜನರಿಗೆ ಮೃಗಲಾಯದ ಸೊಬಗನ್ನೇ ತೋರಿಸಿದ್ದೆ ಈ ತ್ಯಾವರೇಕೊಪ್ಪ ಹುಲಿ ಮತ್ತು ಸಿಂಹ ಧಾಮ. ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹಧಾಮ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿ ಇತ್ತೀಚಿನ ದಿನಗಳಲ್ಲಿ ಮಾರ್ಪಟ್ಟಿದೆ. ಮೈಸೂರು, ಬನ್ನೇರುಘಟ್ಟದ ನಂತರ ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮ ರಾಜ್ಯದಲ್ಲಿ ಹೆಸರುವಾಸಿಯಾಗಿದೆ. ಇದರ ಮಧ್ಯೆ ‘ಸಾರಾ’ ಹೆಸರಿನ ಸಿಂಹಿಣಿ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಹೀಗಾಗಿ ಸಂತಸ ಮನೆ ಮಾಡಿತ್ತು. ಆದ್ರೆ, ಸಂತೋಷ ಬಹಳದಿನ ಉಳಿಯಲಿಲ್ಲ

ತ್ಯಾವರೆಕೊಪ್ಪ ಮೃಗಾಲಯದಲ್ಲಿ ಸೂತಕದ ಛಾಯೆ: ಸಿಂಹಿಣಿ ಜನ್ಮ ನೀಡಿದ್ದ 4 ಮರಿಗಳ ಸಾವು
Sara Lion
Basavaraj Yaraganavi
| Edited By: |

Updated on:Sep 27, 2026 | 4:39 PM

Share

ಶಿವಮೊಗ್ಗ, (ಸೆಪ್ಟೆಂಬರ್ 27):  ಮೃಗಾಲಯದಲ್ಲಿ ಓಡಾಡಿಕೊಂಡು ಪ್ರವಾಸಿಗರಿಗೆ ಮುದಾ ನೀಡಬೇಕಿದ್ದ ಮುದ್ದಾದ ನಾಲ್ಕು ಸಿಂಹದ ಮರಿಗಳು ದುರಂತ ಸಾವು ಕಂಡಿದ್ದು, ತ್ಯಾವರೆಕೊಪ್ಪ ಮೃಗಾಲಯದಲ್ಲಿ ಸೂತಕದ ಛಾಯೆ ಆವರಿಸಿದೆ. ಹೌದು..ಅಳವಿನಂಚಿನ ಪ್ರಭೇದದ ಸಂತಾನೋತ್ಪತ್ತಿ ಉದ್ದೇಶದಿಂದ ಪ್ರಾಣಿ ವಿನಿಮಯ ಯೋಜನೆ ಭಾಗವಾಗಿ ಇಂದೋರ್ ನಿಂದ ‘ಶಿವ’ ಹಾಗೂ ‘ಸಾರಾ’ ಏಷ್ಯಾಟಿಕ್ ಸಿಂಹಗಳನ್ನ ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದಲ್ಲಿರುವ ಮೃಗಾಲಯಕ್ಕೆ ಕರೆತರಲಾಗಿದ್ದು, ಈ ಪೈಕಿ ಸಾರಾ ಹೆಸರಿನ ಸಿಂಹ ಇತ್ತೀಚಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇದರಿಂದ ಸಂಭ್ರಮ ಮನೆ ಮಾಡಿತ್ತು. ಆದ್ರೆ, ಸಂಭ್ರಮ ಬಹಳ ದಿನಗಳು ಉಳಿಯಲಿಲ್ಲ. 5 ವರ್ಷದ ಏಷ್ಯಾಟಿಕ್ ಸಿಂಹ ‘ಸಾರಾ’ ಜನ್ಮ ನೀಡಿದ್ದ 4 ಮರಿಗಳು ಸಾವನ್ನಪ್ಪಿವೆ.

ಇದೇ ಸೆಪ್ಟೆಂಬರ್ 16 ರಂದು 4 ಮರಿಗಳಿಗೆ ಸಿಂಹಿಣಿ ‘ಸಾರಾ’ ಜನ್ಮ ನೀಡಿತ್ತು. ಜನಿಸಿದ ಎರಡು ದಿನದಲ್ಲೇ ನಾಲ್ಕೂ ಮರಿಗಳು ಮೃತಪಟ್ಟಿವೆ. ಸಿಂಹಿಣಿ ಸಾರಾ ತಾಯ್ತನದ ಕೊರತೆಯಿಂದ ಅಂದರೆ ಮರಿಗಳಿಗೆ ಸರಿಯಾಗಿ ಹಾಲು ನೀಡದೇ ನಿರ್ಲಕ್ಷ್ಯದಿಂದ ಮರಿಗಳು ಮೃತಪಟ್ಟಿವೆ ಎನ್ನುವುದು  ಮೃಗಾಲಯದ ಅಧಿಕಾರಿಗಳು ಹೇಳುತ್ತಿದ್ದಾರೆ.  ಮೃಗಾಲಯದಲ್ಲಿ ಓಡಾಡಿಕೊಂಡು ಪ್ರವಾಸಿಗರಿಗೆ ಮುದಾ ನೀಡಬೇಕಿದ್ದ ಮುದ್ದಾದ ನಾಲ್ಕು ಸಿಂಹದ ಮರಿಗಳು ದುರಂತ ಸಾವು ಕಂಡಿದ್ದು, ಮೃಗಾಲಯದಲ್ಲಿ ಸೂತಕದ ಛಾಯೆ ಆವರಿಸಿದೆ.

ಇದನ್ನೂ ಓದಿ: ತ್ಯಾವರೆಕೊಪ್ಪನಲ್ಲಿರುವ ಹುಲಿ ಮತ್ತು ಸಿಂಹ ಧಾಮದಲ್ಲಿ ಗಂಡು ಸಿಂಹದೊಂದಿಗೆ ಹೋರಾಡಿದ್ದ ಸಿಂಹಣಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆಯಿತು!

2025 ರಲ್ಲಿ ಪ್ರಾಣಿ ವಿನಿಮಯ ಯೋಜನೆ ಭಾಗವಾಗಿ ಅಳವಿನಂಚಿನ ಪ್ರಭೇದದ ಸಂತಾನೋತ್ಪತ್ತಿ ಉದ್ದೇಶದಿಂದ ಮಧ್ಯಪ್ರದೇಶದ ಇಂದೋರ್ ನಿಂದ ‘ಶಿವ’ ಹಾಗೂ ‘ಸಾರಾ’ ಏಷ್ಯಾಟಿಕ್ ಸಿಂಹಗಳನ್ನ ಶಿವಮೊಗ್ಗ ತಾಲೂಕಿನ ತ್ಯಾವರೆಕೊಪ್ಪದಲ್ಲಿರುವ ಮೃಗಾಲಯಕ್ಕೆ ಕರೆತರಲಾಗಿತ್ತು. ಬಳಿಕ ಒಂದೇ ವರ್ಷದಲ್ಲಿ ಸಾರಾ ಸಿಂಹ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದ್ರೆ, ಇದೀಗ ಅವರು ಸಾವನ್ನಪ್ಪಿವೆ. ಮೃಗಲಾಯಗಳು ಅಂದ್ರೆ ನಮ್ಮ ರಾಜ್ಯದ ಜನರಿಗೆ ಪಟ್ ಅಂತ ನೆನಪು ಬರೋದೇ ಮೈಸೂರು ಝೂ. ಬಿಟ್ರೆ ಬನ್ನೇರುಘಟ್ಟ, ಅಲ್ಲಿರುವ ಸೊಬಗಿನಂತೆ ಮಲೆನಾಡ ಹೆಬ್ಬಾಗಿನಲ್ಲಿರುವ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮ. ಪ್ರವಾಸಿಗರಿಗೆ ಈ ಮೃಗಾಲಯ ಇಷ್ಟ ಆಗುತ್ತಿದೆ. ಶಿವಮೊಗ್ಗ ಬಂದ ಪ್ರವಾಸಿಗರು ಮೊದಲು ಜೋಗ ನೋಡಿಕೊಂಡು ಬರೋಣ ಬಾ ಅಂತಿದ್ದರು. ಆದ್ರೆ ಈಗ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮಕ್ಕೆ ಭೇಟಿ ನೀಡಿ ಒಂದು ಸಫಾರಿ ಮಾಡಿಕೊಂಡು ಅಲ್ಲಿರುವ ಪ್ರಾಣಿಗಳನ್ನು ನೋಡಿಕೊಂಡು ಬರೋಣ ಅಂತಿದ್ದಾರೆ. ಅಷ್ಟರ ಮಟ್ಟಿಗೆ ಈ ಮೃಗಾಲಯ ಪ್ರಸಿದ್ಧಿ ಪಡೆದುಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Sun, 27 September 26

Follow Us
Basavaraj Yaraganavi
Basavaraj Yaraganavi
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಮಳೆ ಅಬ್ಬರ, ಭೂಕುಸಿತ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಕರ್ನಾಟಕದ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ ಕೇಂದ್ರ ತಂಡ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಚಾಮರಾಜನಗರ ಆದಿವಾಸಿಗಳಿಗೆ ಆಹಾರ ಕಿಟ್ ಸ್ಥಗಿತ
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಗದಗದ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ಹೀಗಂದ್ರು
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಬಿಗ್ ಬಾಸ್ ಕನ್ನಡ: ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಿಗೆ ಸುದೀಪ್ ಸ್ವಾಗತ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಖರ್ಗೆ ಜತೆ ಏನೇನು ಮಾತುಕತೆಯಾಯ್ತು? ಸಿಎಂ ಡಿಕೆ ಶಿವಕುಮಾರ್ ಮಾಹಿತಿ
ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ಶಿವಲಿಂಗವನ್ನು ನೇರವಾಗಿ ಸ್ಪರ್ಶಿಸಿದ ಸೂರ್ಯ ರಶ್ಮಿ!
ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕಾಗಿ ಒಂದಾಗುತ್ತಿದೆ ಇಡೀ ಕನ್ನಡ ಚಿತ್ರರಂಗ
ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕಾಗಿ ಒಂದಾಗುತ್ತಿದೆ ಇಡೀ ಕನ್ನಡ ಚಿತ್ರರಂಗ
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸುದೀಪ್ ಸಿನಿ ಜರ್ನಿಗೆ 30 ವರ್ಷ: ಶುಭಕೋರಿದ ಸಲ್ಮಾನ್, ಗಂಗೂಲಿ, ಮೋಹನ್​ಲಾಲ್
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ