ಇದನ್ನೂ ಓದಿ: Karnataka Rain: ಕರ್ನಾಟಕದಾದ್ಯಂತ ಇಂದಿನಿಂದ 3 ದಿನ ಮಳೆಯಿಂದ ಹಳದಿ ಅಲರ್ಟ್ ಘೋಷಣೆ
ಮಳೆ ಅವಾಂತರ: ರಸ್ತೆ ಮುಳುಗಡೆ
ಕೊಡಗು: ಜಿಲ್ಲೆಯಲ್ಲಿ ಮಳೆ ಅವಾಂತರದಿಂದಾಗಿ ಗ್ರಾಮೀಣ ರಸ್ತೆಗಳು ಮುಳುಗಡೆಯಾಗಿವೆ. ನಾಪೋಕ್ಲು-ಮೂರ್ನಾಡು ಸಂಪರ್ಕ ಕಡಿತವಾಗಿದೆ. ಮಡಿಕೇರಿ ತಾಲೂಕಿನ ಹೊದವಾಡ ಗ್ರಾಮದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ತಗ್ಗು ಪ್ರದೇಶದ ಮನೆ, ಕಾಫಿತೋಟ ಕೃಷಿ ಭೂಮಿ ಮುಳುಗಡೆಯಾಗಿವೆ. ಮುನ್ನಚ್ಚರಿಕಾ ಫಲಕ, ಬ್ಯಾರಿಕೇಡ್ ಅಳವಡಿಸದೆ ಸ್ಥಳೀಯಾಡಳಿತ ನಿರ್ಲಕ್ಷ್ಯ ತೋರಿದೆ.
ಮುಂದವರೆದ ಮಳೆ ಆರ್ಭಟ: ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಭಾರೀ ಮಳೆಗೆ ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿ ಕೊಚ್ಚಿ ಹೋಗಿದೆ. ನಿರಂತರ ಮಳೆಯಿಂದ ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪದ ರಸ್ತೆ ತಡೆಗೋಡೆ ಕುಸಿತವಾಗಿದೆ. ನಿರಂತರ ಮಳೆಗೆ ಸುಮಾರು 25. ಮೀಟರ್ ಉದ್ದಕ್ಕೆ ಬೃಹತ್ ತಡೆಗೋಡೆ ಕೊಚ್ಚಿಹೋಗಿದೆ. ಚತುಷ್ಪತ ರಸ್ತೆ ನಿರ್ಮಾಣಕ್ಕಾಗಿ ಕೋಟ್ಯಾಂತರ ರೂ ವೆಚ್ಚದಲ್ಲಿ ನಿರ್ಮಿಸಿದ್ದ ತಡೆಗೋಡೆ ನಾಶವಾಗಿದೆ. ಸತತ ಆರು ದಿನಗಳಿಂದ ಮಲೆನಾಡಲ್ಲಿ ಮಳೆ ಆರ್ಭಟ ನಿಂತಿಲ್ಲ. ಈ ಹಿಂದೆ ದೋಣಿಗಲ್ ಸಮೀಪ ಭೂ ಕುಸಿತವಾಗಿದ್ದ ಸ್ಥಳದಿಂದ ಒಂದು ಕಿಲೋಮೀಟರ್ ಹಿಂದೆ ತಡೆಗೋಡೆ ಕೊಚ್ಚಿ ಹೋಗಿದೆ. ಮತ್ತಷ್ಟು ಮಳೆ ಹೆಚ್ಚಾದರೆ ಮುಖ್ಯ ರಸ್ತೆಗೆ ಹಾನಿಯಾಗೋ ಆತಂಕ ಎದುರಾಗಿದೆ.
ಕುಸಿದು ಬಿದ್ದ ಸೇತುವೆ
ರಾಮನಗರ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆ ನೀರಿನ ರಭಸಕ್ಕೆ ಕೊಂಡಾಪುರ-ಬಾಣಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದಿದೆ. ಕಣ್ವ ಜಲಾಶಯದಿಂದ ಹೆಚ್ಚಿನ ನೀರು ಹೊರ ಬಿಟ್ಟ ಹಿನ್ನೆಲೆ ಸೇತುವೆ ಕುಸಿದು ಬಿದ್ದಿದೆ.
ಗ್ರಾಮಗಳಲ್ಲಿನ ಜನರು ಇದೀಗ ಹತ್ತಾರು ಕಿಮೀ ಗಟ್ಟಲೆ ಬಳಸಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.