ಸರ್ಕಾರಿ ಕಚೇರಿಗೆ ನುಗ್ಗಿ ಮಹಿಳಾ ಅಧಿಕಾರಿ ಮೇಲೆ ಪತಿ ಹಲ್ಲೆ, ಮಹಿಳಾ ಠಾಣೆಯಲ್ಲಿ ದೂರು ದಾಖಲು

| Updated By: ಆಯೇಷಾ ಬಾನು

Updated on: Aug 05, 2023 | 11:58 AM

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ದೊಡ್ಡಮನಿ ಅವರ ಮೇಲೆ ಅವರ ಪತಿ ಶ್ರೀನಿವಾಸ್ ಮೂರ್ತಿ‌ ಬೋರ್ಗಿ‌ ಅವರು ಹಲ್ಲೆ ನಡೆಸಿದ್ದಾರೆ. ಸದ್ಯ ಘಟನೆ ಸಂಬಂಧ ಮಹಿಳಾ ಠಾಣೆಗೆ ಪತಿ ಶ್ರೀನಿವಾಸಮೂರ್ತಿ‌ ವಿರುದ್ಧ ಶಿಲ್ಪಾ ದೂರು ದಾಖಲಿಸಿದ್ದಾರೆ.

ಸರ್ಕಾರಿ ಕಚೇರಿಗೆ ನುಗ್ಗಿ ಮಹಿಳಾ ಅಧಿಕಾರಿ ಮೇಲೆ ಪತಿ ಹಲ್ಲೆ, ಮಹಿಳಾ ಠಾಣೆಯಲ್ಲಿ ದೂರು ದಾಖಲು
ಶಿವಮೊಗ್ಗ (ಸಾಂದರ್ಭಿಕ ಚಿತ್ರ)
Follow us on

ಶಿವಮೊಗ್ಗ, ಆ.05: ಕಚೇರಿಗೆ ತೆರಳಿ ಮಹಿಳಾ ಅಧಿಕಾರಿ ಮೇಲೆ ಪತಿ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ದೊಡ್ಡಮನಿ ಅವರ ಮೇಲೆ ಅವರ ಪತಿ ಶ್ರೀನಿವಾಸ್ ಮೂರ್ತಿ‌ ಬೋರ್ಗಿ‌ ಅವರು ಹಲ್ಲೆ ನಡೆಸಿದ್ದಾರೆ. ಸದ್ಯ ಘಟನೆ ಸಂಬಂಧ ಮಹಿಳಾ ಠಾಣೆಗೆ ಪತಿ ಶ್ರೀನಿವಾಸಮೂರ್ತಿ‌ ವಿರುದ್ಧ ಶಿಲ್ಪಾ ದೂರು ನೀಡಿದ್ದಾರೆ.

ಪತಿ ಶ್ರೀನಿವಾಸಮೂರ್ತಿ‌ ಹಾಗೂ ಶಿಲ್ಪಾ ಅವರ ವಿರುದ್ಧ ಜಗಳ ನಡೆದಿತ್ತು. ಕೌಟುಂಬಿಕ ಕಲಹ ಹಿನ್ನೆಲೆ ಕಚೇರಿಗೆ ಬಂದ ಪತಿ ಸರ್ಕಾರಿ ಕಚೇರಿ ಎಂದೂ ಲೆಕ್ಕಿಸದೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಬೈಲ್ ಹೊಡೆದು ಹಾಕಿ ರಂಪಾ ಮಾಡಿದ್ದಾರೆ. ಈ ವೇಳೆ ಕಚೇರಿಯ ಸಿಬ್ಬಂದಿ ನಡೆದಿದ್ದು ಘಟನೆಗೆ ಬಳಿಕ ದೂರು ದಾಖಲಾಗಿದೆ.

ಮಿಸ್​ ಫೈರಿಂಗ್ ಆಗಿ ವ್ಯಕ್ತಿಗೆ ಗಂಭೀರ ಗಾಯ

ಇನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಆರಗದ ಸಮೀಪದ ದಾಸನಗದ್ದೆಯಲ್ಲಿ ನಿನ್ನೆ ರಾತ್ರಿ ಮಿಸ್​ ಫೈರಿಂಗ್ ಆಗಿ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ರಾಕೇಶ್ ಎಂಬುವರ ತೊಡೆಗೆ ಗಾಯಗಳಾಗಿದ್ದು ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತೋಟದಲ್ಲಿ ಏನೂ ಶಬ್ಧ ಕೇಳಿ ಬರುತ್ತಿದೆ ಎಂದು ರಾಕೇಶ್ ಅವರು ನಾಡ ಬಂದೂಕು ತೆಗೆದುಕೊಂಡು ತೋಟಕ್ಕೆ ಹೋಗಿದ್ದರು. ಈ ವೇಳೆ ಮಿಸ್ ಫೈರಿಂಗ್ ಆಗಿದ್ದು ತೊಡೆಗೆ ಗುಂಡು ಬಿದ್ದಿದೆ ಎಂಬ ಮಾಹಿತಿ ಸಿಕ್ಕಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ನೆಲಮಂಗಲ: ಶಾದಿ ಡಾಟ್ ಕಾಮ್​ನಲ್ಲಿ ನಕಲಿ ಫೋಟೋ ಹಾಕಿ ವ್ಯಕ್ತಿಗೆ 6 ಲಕ್ಷ ರೂ. ವಂಚನೆ

ಬಾತ್ ರೂಂನಲ್ಲಿ ಮೊಬೈಲ್ ಇಟ್ಟು ಸಿಕ್ಕಿಬಿದ್ದ ಯುವಕ

ಪಕ್ಕದ ಮನೆಯ ಯುವತಿಯ ಸ್ನಾನದ ವಿಡಿಯೋಗಾಗಿ ಬಾತ್ ರೂಂನಲ್ಲಿ ಮೊಬೈಲ್ ಇಟ್ಟು ಯುವತಿಯ ಅಣ್ಣನ ಕೈಗೆ ಯುವಕ ಸಿಕ್ಕಿ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ನಗರ ಹೊರವಲಯದ ಮುಲ್ಕಿಯ ಪಕ್ಷಿಕರೆಯಲ್ಲಿ ಸುಮಂತ್ ಪೂಜಾರಿ(22) ಎಂಬ ಯುವಕ ತನ್ನ ಪಕ್ಕದ ಮನೆಯ ಯುವತಿಯ ವಿಡಿಯೋ ಮಾಡಲು ಬಚ್ಚಲು ಮನೆಯಲ್ಲಿ ಮೊಬೈಲ್ ಇಟ್ಟಿದ್ದ. ಈ ವೇಳೆ ಯುವತಿ ಬದಲಿಗೆ ಯುವತಿಯ ಅಣ್ಣ ಸ್ನಾನಕ್ಕೆ ತೆರಳಿದ್ದರು. ಆಗ ಬಾತ್ ರೂಂನಲ್ಲಿ ಮೊಬೈಲ್​ ಇದ್ದದ್ದು ಕಂಡು ವಿಚಾರಿಸಿದಾಗ ಯುವಕ ಸಿಕ್ಕಿಬಿದ್ದಿದ್ದಾನೆ. ಸದ್ಯ ಯುವಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಸುಮಂತ್ ವಿರುದ್ದ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದ್ದು ಸುಮಂತ್ ಪೂಜಾರಿಯನ್ನು ಬಂಧಿಸಲಾಗಿದೆ. ಆರೋಪಿ ಸುಮಂತ್ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ