ನಾನು 26 ವರ್ಷ ಸೇನೆಯಲ್ಲಿ ಕೆಲಸ ಮಾಡಿದ್ದೇನೆ, ನನ್ನ ಮಗ ಹೀಗಾಗ್ತಾನೆ ಅಂದ್ಕೊಂಡಿರಲಿಲ್ಲ: ಶಂಕಿತ ಉಗ್ರ ಮತೀನ್ ತಂದೆ ಬೇಸರ

| Updated By: ವಿವೇಕ ಬಿರಾದಾರ

Updated on: Sep 21, 2022 | 1:54 PM

ನಾನು 26 ವರ್ಷ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದೇನೆ ಎಂದು ಬಂಧಿತ ಶಂಕಿತ ಉಗ್ರ ಮತೀನ್ ತಂದೆ ಮನ್ಸೂರ್ ಅಹಮ್ಮದ್ ಹೇಳಿದ್ದಾರೆ.

ನಾನು 26 ವರ್ಷ ಸೇನೆಯಲ್ಲಿ ಕೆಲಸ ಮಾಡಿದ್ದೇನೆ, ನನ್ನ ಮಗ ಹೀಗಾಗ್ತಾನೆ ಅಂದ್ಕೊಂಡಿರಲಿಲ್ಲ: ಶಂಕಿತ ಉಗ್ರ ಮತೀನ್ ತಂದೆ ಬೇಸರ
ಶಿವಮೊಗ್ಗ
Follow us on

ಶಿವಮೊಗ್ಗ: ನಾನು 26 ವರ್ಷ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದೇನೆ ಎಂದು ಬಂಧಿತ ಶಂಕಿತ ಉಗ್ರ ಮತೀನ್ ತಂದೆ ಮನ್ಸೂರ್ ಅಹಮ್ಮದ್ ಹೇಳಿದ್ದಾರೆ. ನನ್ನ ಮಗ ಹೀಗೆ ಅಂತ ಯೋಚನೆ ಕೂಡ ಮಾಡೋಕೆ ಆಗುತ್ತಿಲ್ಲ. ನಮ್ಮ ಮನೆಗೆ ಅವನೇ ಹಿರಿಯ ಮಗ. ದಿಕ್ಕುತೋಚದಂತೆ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮತೀನ್ 2020 ರಿಂದ ಇಲ್ಲಿಯವರೆಗೂ ಎಲ್ಲಿದ್ದಾನೆಂದು ಗೊತ್ತಿರಲಿಲ್ಲ. ಎಂಜಿನಿಯರ್ ಓದೋಕೆ ಅಂತ ಬೆಂಗಳೂರಿಗೆ ಹೋಗಿದ್ದನು. ಎಂಜಿನಿಯರ್ ಅರ್ಧಕ್ಕೆ ಬಿಟ್ಟು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದನು. ಅವನಿಗೆ ಎಲ್ಲಿಂದ ಉಗ್ರ ನಂಟು ಬಂತೋ ಗೊತ್ತಿಲ್ಲ. ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ಶಾರೀಕ್ ಮನೆ ಬಿಟ್ಟು 20 ದಿನ ಆಗಿದೆ

ಶಾರೀಕ್ ಮನೆ ಬಿಟ್ಟು 20 ದಿನ ಆಗಿದೆ. ಕಳೆದ 8 ದಿನಗಳ ಹಿಂದೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮಿಸ್ಪಿಂಗ್ ಕೇಸ್​ದಾಖಲಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಶಾರೀಕ್ ತಂದೆ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟಿದ್ದು. ತಾಯಿ ತೀರಿ ಹೋಗಿ 15 ವರ್ಷ ಆಗಿದೆ. ತಂದೆ ಎರಡನೆ ಮದುವೆ ಮಾಡಿಕೊಂಡಿದ್ದಾರೆ. 20 ದಿನಗಳ ಹಿಂದೆ ದೆಹಲಿಗೆ ಬಟ್ಟೆ ತರಲು ಹೋಗಿದ್ದನು ವಾಪಸ್ ಬಂದಿಲ್ಲ. ತಂದೆ ತೀರಿ ಹೋದ ಮೇಲೆ ತಂದೆ ಬಟ್ಟೆ ಅಂಗಡಿ ಜವಾಬ್ದಾರಿ ವಹಿಸಿಕೊಂಡಿದ್ದನು. ಎಂದು ತೀರ್ಥಹಳ್ಳಿಯಲ್ಲಿ ಶಾರೀಕ್ ಚಿಕ್ಕಮ್ಮ ಶಬನಾ ಬಾನು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 1:54 pm, Wed, 21 September 22