ಶಿವಮೊಗ್ಗ, ಆ.21: ಬೇಕರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಎಲ್ಪಿಜಿ ಸಿಲಿಂಡರ್ ಸ್ಫೋಟವಾದ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಆಯನೂರಿನ ಎಸ್ಎಲ್ವಿ ಅಯ್ಯಂಗಾರ್ ಬೇಕರಿಯಲ್ಲಿ ನಡೆದಿದೆ. ಕೆಲವೇ ನಿಮಿಷದಲ್ಲಿ 3 ಬಾರಿ ಸ್ಫೋಟವಾಗಿದ್ದು, ಬೇಕರಿಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಈ ಕುರಿತು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು, ಘಟನೆಯಲ್ಲಿ ಬೇಕರಿಯಲ್ಲಿದ್ದ ಎಲ್ಲ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಬೇಕರಿ ಮಾಲೀಕನಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇನ್ನು ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ದೊಡ್ಡ ದುರಂತ ತಪ್ಪಿದೆ. ಹೌದು, ಬೇಕರಿ ಪಕ್ಕದಲ್ಲೇ ಪೇಟ್ರೋಲ್ ಬಂಕ್ ಇತ್ತು. ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿ: ಹೋಟೆಲ್ನಲ್ಲಿ ಸಿಲಿಂಡರ್ ಸ್ಫೋಟ; ಗಾಯಗೊಂಡ 10 ಜನರ ಪೈಕಿ ಓರ್ವ ಸಾವು
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ತಾವರೆಕೊಪ್ಪ ಗ್ರಾಮದಲ್ಲಿ ಕಳೆದ ಎರಡು ದಿನದ ಹಿಂದೆ ಅನುಮಾನಸ್ಪದವಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮಂಜುನಾಥ್ (36) ಮೃತ ವ್ಯಕ್ತಿ. ಜಮೀನಿನಲ್ಲಿ ತಂದೆ-ಮಗ ಕೆಲಸ ಮಾಡುತ್ತಿದ್ದರು. ಬಳಿಕ ಜಮೀನಿನಿಂದ ಮಧ್ಯಾಹ್ನ ಊಟಕ್ಕೆಂದು ತಂದೆ ಮನೆಗೆ ತೆರಳಿದ್ದ. ಆದರೆ, ಮಂಜುನಾಥ್, ಜಮೀನಿನಲ್ಲಿ ಅಣಬೆ ಹುಡುಕುತ್ತಿದ್ದ.
ತಂದೆಯ ಊಟ ಮುಗಿದು ಎಷ್ಟು ಹೊತ್ತಾದರೂ ಮನೆಗೆ ಮಗ ಬರಲಿಲ್ಲ. ಹೀಗಾಗಿ ಹುಡುಕಿಕೊಂಡು ಹೋದಾಗ ಮಂಜುನಾಥ್ ಅನುಮಾನಸ್ಪದವಾಗಿ ಮೃತಪಟ್ಟಿದ್ದ. ಈ ಕುರಿತು ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Wed, 21 August 24