ಶಿವಮೊಗ್ಗ, ಸೆ.18: ಪ್ರತಿಭಾ ಕಾರಂಜಿ ಕಾರ್ಯಕ್ರಮದ ಆರಂಭದಲ್ಲಿ ಯೇಸುವಿನ ಪ್ರಾರ್ಥನೆ ಮಾಡಿಸಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ ತಾಲೂಕಿನ ಮಾಸೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ಕಳೆದ 13 ರಂದು ಮಾಸೂರು ಪ್ರೌಢಶಾಲೆಯಲ್ಲಿ ನಡೆದಿದ್ದ ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನಾ ಗೀತೆಯಾಗಿ ಯೇಸುವಿನ ಗೀತೆ ಹಾಡಿಸಿದ ಆರೋಪ ಶಾಲೆಯ ವಿಜ್ಞಾನ ಶಿಕ್ಷಕ ಫ್ರಾಂಕಿ ಫ್ರಾನ್ಸಿಸ್ ವಿರುದ್ದ ಕೇಳಿ ಬಂದಿದೆ.
ಇದೀಗ ಯೇಸುವಿನ ಗೀತೆ ಹಾಡಿಸಿದ್ದಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಲೆಯಲ್ಲಿ ಒಬ್ಬನೇ ಒಬ್ಬ ಕ್ರಿಶ್ಚಿಯನ್ ವಿದ್ಯಾರ್ಥಿ ಇಲ್ಲ, ಹೀಗಿರುವಾಗ ಯೇಸುವಿನ ಗೀತೆ ಏಕೆ ಹಾಡಿಸಿದರು ಎಂದು ಪ್ರಶ್ನಿಸಲಾಗಿದೆ. ಇನ್ನು ಈ ಘಟನೆ ಮೂಲಕ ಹಿಂದುಗಳ ಭಾವನೆಗೆ ಶಿಕ್ಷಕ ಧಕ್ಕೆ ಉಂಟು ಮಾಡಿದ್ದಾರೆ. ಈ ಕೂಡಲೇ ಶಿಕ್ಷಕನನ್ನು ಅಮಾನತು ಮಾಡುವಂತೆ ಆಗ್ರಹಿಸಿ
ಸಾಗರದ ಬಿಇಒ ಕಚೇರಿ ಎದುರು ವಿ ಹೆಚ್ ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಇದನ್ನೂ ಓದಿ:ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ವಿಭೂತಿ ಧರಿಸಿದ ವಿದ್ಯಾರ್ಥಿನಿಗೆ ಕಿರುಕುಳ; ಬಲವಂತವಾಗಿ ಮತಾಂತರಕ್ಕೆ ಯತ್ನ
ಬೆಂಗಳೂರು ಗ್ರಾಮಾಂತರ: ಟ್ರಾನ್ಸ್‌ಫರಂ ಬಳಿ ಜಂಪ್ ಹಾಕುವ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ನರಸೀಪುರದ ನಾಗರಾಜ್(38) ಮೃತ ರ್ದುದೈವಿ. ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಮಸ್ಯೆ ಸರಿಪಡಿಸದ ಹಿನ್ನಲೆ ಟ್ರಾನ್ಸ್‌ಫರಂ ಬಳಿ ಜಂಪ್ ಹಾಕುವ ವೇಳೆ ಅವಘಡ ಸಂಭವಿಸಿದೆ. ಇತ್ತ ಬೆಸ್ಕಾಂ ಅಧಿಕಾರಿಗಳು, ಮೃತನ ಕುಟುಂಬಕ್ಕೆ ಯಾವುದೇ ರೀತಿಯ ಪರಿಹಾರವಿಲ್ಲ ಎನ್ನುತ್ತಿದ್ದಾರೆ. ಈ ಕುರಿತು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Wed, 18 September 24