ಶಿವಮೊಗ್ಗದಲ್ಲಿ ಭರದಿಂದ ಸಾಗುತ್ತಿದೆ ಕರ್ನಾಟಕದ ಮೊದಲ ಕೇಬಲ್‌ ಆಧಾರಿತ ಬಿಡ್ಜ್‌

| Updated By: ವಿವೇಕ ಬಿರಾದಾರ

Updated on: Dec 10, 2022 | 8:35 PM

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕರ್ನಾಟಕದ ಅತಿ ಉದ್ದದ ಕೇಬಲ್ ಸೇತುವೆ ನಿರ್ಮಾಣವಾಗುತ್ತಿದೆ.

ಶಿವಮೊಗ್ಗದಲ್ಲಿ ಭರದಿಂದ ಸಾಗುತ್ತಿದೆ ಕರ್ನಾಟಕದ ಮೊದಲ ಕೇಬಲ್‌ ಆಧಾರಿತ ಬಿಡ್ಜ್‌
ಕರ್ನಾಟಕದ ಮೊದಲ ಕೇಬಲ್‌ ಆಧಾರಿತ ಬಿಡ್ಜ್‌
Follow us on

ಶಿವಮೊಗ್ಗ: ಶಿವಮೊಗ್ಗ (Shivamogga) ಜಿಲ್ಲೆಯ ಜನತೆಯ ಬಹುದಿನಗಳ ಬೇಡಿಕೆ ಶೀಘ್ರದಲ್ಲೇ ನನಸಾಗಲಿದೆ. ಸಾಗರ ತಾಲೂಕಿನಲ್ಲಿ ಕರ್ನಾಟಕದ ಅತಿ ಉದ್ದದ ಕೇಬಲ್ ಸೇತುವೆ (cable stayed bridge) ನಿರ್ಮಾಣವಾಗುತ್ತಿದೆ. 2.5 ಕಿಮೀ ಉದ್ದದ ಈ ಸೇತುವೆ ಸಿಂಗಂದೂರು ಮತ್ತು ಸಾಗರ ತಾಲೂಕಿಗೆ ಸಂಪರ್ಕ ಕಲ್ಪಿಸುತ್ತದೆ. 423 ಕೋಟಿ ರೂ ವೆಚ್ಚದ ಈ ಸೇತುವೆ ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಾಣವಾಗುತ್ತಿದ್ದು, 2024ರಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ.

ಸೇತುವೆ ನಿರ್ಮಣಾಕ್ಕೆ 2018 ಫೆಬ್ರವರಿ 19 ರಂದು ಕೇಂದ್ರ ಸಚಿವ ನಿತಿನ್​ ಗಡ್ಕರಿ (Nitin Gadkari) ಶಂಕುಸ್ಥಾಪನೆ ಮಾಡಿದ್ದರು. ಈಗಾಗಲೇ ಕಾಮಾಗಾರಿ ಕೆಲಸ ಶೇ 60ರಷ್ಟು ಪೂರ್ಣಗೊಂಡಿದೆ. ಸಾಮಾನ್ಯ ಸೇತುವೆಗೆ ಸುಮಾರು 100 ಕಂಬಗಳು ಬೇಕಾಗುತ್ತವೆ. ಆದರೆ ಈ ಸೇತುವೆ ನಿರ್ಮಾಣಕ್ಕೆ ಕೇವಲ 17 ಕಂಬಗಳನ್ನು ಬಳಸಿ ಸೇತುವೆ ನಿರ್ಮಾಣವಾಗಲಿದೆ. ಉಳಿದ ಸೇತುವೆಗೆ ಹೋಲಿಸಿದರೇ ಕೇಬಲ್​ ಸೇತುವೆ ಹೆಚ್ಚು ಗಟ್ಟಿಯಾಗಿರುತ್ತದೆ ಎಂದು ಸೇತುವೆ ಉಸ್ತುವಾರಿ ಅಧಿಕಾರಿ ಪೀರ್ ಪಾಷಾ ಡೆಕ್ಕನ್​ ಹೆರಾಲ್ಡ್​​ಗೆ ತಿಳಿಸಿದ್ದಾರೆ.

ಪ್ರತಿದಿವಸ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ದೇವಸ್ಥಾನಕ್ಕೆ ಹೋಗಲು ಶರಾವತಿ ನದಿಯ ಹಿನ್ನೀರಿನಲ್ಲಿ ಲಾಂಚ್​ನಲ್ಲಿ ಸಾಗಬೇಕು. ಇಲ್ಲವಾದರೇ ಸಾಗರದಿಂದ ರಸ್ತೆ ಮೂಲಕ ಹೋದರೆ 80 ಕೀ ಮಿ ಸಾಗಿ ಸಿಂಗಂದೂರುಗೆ ತಲುಪಬೇಕು. ಈ ಸೇತುವೆ ನಿರ್ಮಾಣದಿಂದ ಬಹು ಬೇಗೆ ಸಾಗರದಿಂದ ಸಿಂಗಂದೂರುಗೆ ತಲುಪಬಹುದಾಗಿದೆ.

ಇನ್ನೂ ದೇವಸ್ಥಾನಕ್ಕೆ ಪ್ರತಿದಿನ ಸುಮಾರು 5,000 ಭಕ್ತರು ಭೇಟಿ ನೀಡುತ್ತಾರೆ. ಮತ್ತು ಹಬ್ಬಗಳ ಸಮಯದಲ್ಲಿ 10,000 ಭಕ್ತರು ಭೇಟಿ ನೀಡುತ್ತಾರೆ. ಅಲ್ಲದೇ ಸುಮಾರು ದಶಕಗಳಿಂದ ಸುಮಾರು 5,000 ಕುಟುಂಬಗಳು ಲಾಂಚ್‌ಗಳನ್ನು ಅವಲಂಬಿಸಿವೆ.

ಆದರೆ ಈ ಲಾಂಚ್​ ಸಹ ಸಂಜೆ 6:30 ರ ನಂತರ ಕಾರ್ಯ ನಿರ್ವಹಿಸುವುದಿಲ್ಲ. ಇದರಿಂದ ತುರ್ತು ಸಮಯದಲ್ಲಿ ಸಾಕಷ್ಟು ತೊಂದರೆಯಾಗುತ್ತದೆ. ಸೇತುವೆಯಿಂದ ಶರಾವತಿ ಹಿನ್ನೀರು ಪ್ರದೇಶದ ಕರೂರು ಹೋಬಳಿಯ 40 ಕ್ಕೂ ಹೆಚ್ಚು ಹಳ್ಳಿಗಳ ನಿವಾಸಿಗಳಿಗೆ ಪ್ರಯೋಜನವಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ