ಶಿವಮೊಗ್ಗ: ಸಚಿವ ಈಶ್ವರಪ್ಪ(KS Eshwarappa) ಅವರ ವಿರುದ್ಧ ಶೇ. 40 ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ(Santosh Patil Suicide) ಪ್ರಕರಣಕ್ಕೆ ಸಂಬಂಧಿಸಿ ಮೃತನ ಪತ್ನಿ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಮತ್ತೊಂದು ಕಡೆ ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈಗಾಗಲೇ ತನಿಖೆಯಲ್ಲಿ ನನಗೆ ಕ್ಲೀಟ್ ಚಿಟ್ ಸಿಕ್ಕಿದೆ. ಈಗ ಮೃತನ ಪತ್ನಿ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಅವರಿಗೆ ಕೋರ್ಟ್ ಹೋಗುವ ಅಧಿಕಾರ ಇದೆ ಹೋಗಿದ್ದಾರೆ. ನೂರಕ್ಕೆ ನೂರು ವಿಶ್ವಾಸ ಇದೆ. ಈ ತನಿಖೆಯಲ್ಲೂ ನನಗೆ ಕ್ಲೀನ್ ಚಿಟ್ ಸಿಗಲಿದೆ. ಎಷ್ಟೇ ವರ್ಷ ಕೇಸ್ ನಡೆದರೂ ನನಗೆ ಕ್ಲೀನ್ ಚಿಟ್ ಸಿಗಲಿದೆ. ನನ್ನ ಮೇಲೆ ಆರೋಪ ಬಂದ ತಕ್ಷಣ ನಾನು ರಾಜೀನಾಮೆ ನೀಡಿದ್ದೆ. ಈಗ ಮತ್ತೆ ಹೊಸ ಹೊಸ ಚರ್ಚೆಗಳು ಶುರುವಾಗಿದೆ. ಅವರು ಏನೇ ಆರೋಪ ಮಾಡಿದರೂ ನ್ಯಾಯಾಲಯ ಪರಿಶೀಲನೆ ಮಾಡಿ ತೀರ್ಪು ನೀಡುತ್ತದೆ. ನನ್ನ ಆಸೆ, ಆದಷ್ಟೂ ಬೇಗ ಈ ಕೇಸ್ ತನಿಖೆ ಆಗಿ ನ್ಯಾಯಾಲಯ ತೀರ್ಪು ನೀಡಲಿ. ಈಗಾಗಲೇ ಕ್ಲೀನ್ ಚಿಟ್ ಸಿಕ್ಕಿದೆ. ಪಕ್ಷದಲ್ಲಿ ಸ್ಥಾನಮಾನ ಮತ್ತು ಮಂತ್ರಿ ಸಿಗುವುದು ಬೇರೆ ವಿಚಾರ ಎಂದರು.
ಇನ್ನು ಇದೇ ವೇಳೆ ಮತ್ತೊಂದು ಕಡೆ ದೇವಸ್ಥಾನಕ್ಕೆ ಸಿದ್ದರಾಮಯ್ಯ ನಾನ್ ವೇಜ್ ತಿಂದು ಹೋಗಿರುವ ವಿವಾದಕ್ಕೆ ಸಂಬಂಧಿಸಿ ಮಾತನಾಡಿದ ಈಶ್ವರಪ್ಪ, ಸಿದ್ದು ಧರ್ಮಸ್ಥಳಕ್ಕೆ ಮಾಂಸ ತಿಂದು ಹೋಗಿರುವ ಸಣ್ಣ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಿದ್ದರಾಮಯ್ಯ ನಾನ್ ವೇಜ್ ತಿಂದ ಬಳಿಕ ನೂರೆಂಟು ಕಾರಣ ಕೊಡುತ್ತಾರೆ. ಸಿದ್ದು ದೇವಸ್ಥಾನಕ್ಕೆ ಹೋಗುತ್ತಾರೆ, ಬರುತ್ತಾರೆ. ಏನೇನು ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯ ಈಗಾಗಲೇ ಕನಕ ಗುರು ಪೀರಕ್ಕೆ, ಬಾಳೆಹೊನ್ನುರು ಮಠಕ್ಕೆ ಭೇಟಿಯಿಂದ ಸಂತೋಷ ಆಗಿದೆ. ನನ್ನ ಒಂದು ಆಸೆ ಇದೆ. ಸಿದ್ದರಾಮಯ್ಯ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿಲ್ಲ. ವಿಶ್ವಪ್ರಸಿದ್ದ ಉಡುಪಿ ಕೃಷ್ಣನ ದರ್ಶನ ಸಿದ್ದು ಪಡೆಯಬೇಕು. ಕನಕದಾಸರ ಭಕ್ತರಿಗೆ ಮೆಚ್ಚಿ ಕೃಷ್ಣನು ದರ್ಶನ ನೀಡಿದ್ದಾರೆ. ಇಂತಹ ಧಾರ್ಮಿಕ ಕ್ಷೇತ್ರಕ್ಕೆ ಸಿದ್ದರಾಮಯ್ಯ ಯಾಕೇ ಹೋಗಿಲ್ಲ ಎನ್ನುವ ಅನುಮಾನ ಎಲ್ಲರಂತೆ ನನಗೂ ಇದೆ. ಈ ಎಲ್ಲ ಅನುಮಾನ ದೂರ ಮಾಡಲು ಸಿದ್ದು ಉಡುಪಿ ಕೃಷ್ಣನ ದರ್ಶನ ಪಡೆಯಲು ಈಶ್ವರಪ್ಪ ಮನವಿ ಮಾಡಿದ್ದಾರೆ. ಸಿದ್ದುಗೆ ಶ್ರೀಕೃಷ್ಣನ ಆಶೀರ್ವಾದ ಸಿಗುತ್ತದೆ. ಅವರಿಗೆ ಒಳ್ಳೆಯದು ಆಗುತ್ತದೆ ಎಂದು ಕೆಎಸ್ ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಕಾಲೆಳೆದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:36 pm, Wed, 24 August 22