ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಅನಾಮಧೇಯ ಬೆದರಿಕೆ ಪತ್ರ: ಮಗನೆ.. ನಿನ್ನ ನಾಲಗೆ ಕಟ್ ಮಾಡುತ್ತೇವೆ ಹುಷಾರ್ ಎಂದು ಬರೆಯಲಾಗಿದೆ
ಮುಸ್ಲಿಂ ಗೂಂಡಾಗಳು ಎಂದು ಹೇಳುವ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನಲ್ಲಿ ಕಾಲೇಜು ಕಟ್ಟಲು ಬಳಸ್ತಿರುವುದು ಮುಸ್ಲಿಂ ಸಿಮೆಂಟ್ ಬ್ರಿಕ್ಸ್ಗಳನ್ನು. ಆದರೂ ನಿನಗೆ ಮುಸ್ಲಿಮರು ಬೇಡ, ನಿನಗೆ ನಾಚಿಕೆಯಾಗಬೇಕು. ಮಗನೆ.. ನಿನ್ನ ನಾಲಗೆ ಕಟ್ ಮಾಡುತ್ತೇವೆ ಹುಷಾರ್ ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ.
ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ(KS Eshwarappa) ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಶಿವಮೊಗ್ಗ ಶಾಸಕ ಈಶ್ವರಪ್ಪ ನಾಲಗೆ ಕತ್ತರಿಸುವುದಾಗಿ ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ. ಶಿವಮೊಗ್ಗದ ಮಲ್ಲೇಶ್ವರನಗರದಲ್ಲಿರುವ ಈಶ್ವರಪ್ಪ ಮನೆಗೆ ಅನಾಮಧೇಯ ಪತ್ರ ಬಂದಿದೆ.
ಮುಸ್ಲಿಂ ಗೂಂಡಾಗಳು ಎಂದು ಹೇಳುವ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನಲ್ಲಿ ಕಾಲೇಜು ಕಟ್ಟಲು ಬಳಸ್ತಿರುವುದು ಮುಸ್ಲಿಂ ಸಿಮೆಂಟ್ ಬ್ರಿಕ್ಸ್ಗಳನ್ನು. ಆದರೂ ನಿನಗೆ ಮುಸ್ಲಿಮರು ಬೇಡ, ನಿನಗೆ ನಾಚಿಕೆಯಾಗಬೇಕು. ಮಗನೆ.. ನಿನ್ನ ನಾಲಗೆ ಕಟ್ ಮಾಡುತ್ತೇವೆ ಹುಷಾರ್ ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಕೆ.ಎಸ್.ಈಶ್ವರಪ್ಪ, ಯಾರೋ ಹೇಡಿಗಳು ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ಈ ರೀತಿಯ ಗೊಡ್ಡು ಬೆದರಿಕೆಗಳಿಗೆ ನಾನು ಹೆದರಲ್ಲ, ಬೆದರಲ್ಲ. ತನಿಖೆ ನಡೆಸಿ ಹೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೇನೆ, ಕ್ರಮಕೈಗೊಳ್ಳುವ ವಿಶ್ವಾಸವಿದೆ ಎಂದರು.
ಕೊಲೆ, ದರೋಡೆ ಮಾಡುವ ಮುಸಲ್ಮಾನರಿಗೆ ಗೂಂಡಾ ಎಂದು ಕರೆಯುತ್ತೇನೆ. ಎಲ್ಲಾ ಮುಸಲ್ಮಾರಿಗೆ ನಾನು ಹಾಗೆ ಕರೆದಿಲ್ಲ. ಹಿಂದೂ ಹರ್ಷಾ, ಪ್ರವೀಣ್ ನೆಟ್ಟಾರ್ ಕೊಲೆ ಮಾಡಿದವರು ಹೇಡಿಗಳಂತೆ ಕೃತ್ಯ ಎಸಗಿದ್ದಾರೆ. ಮೊನ್ನೆ ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕು ಇರಿದು ಹೋಗಿದ್ದೂ ಹೇಡಿತನದಿಂದ. ಎದುರು ಬಂದರೆ ಬೇರೆ ತರಹ, ಈ ಪತ್ರವೂ ಹೇಡಿತನದ್ದು, ನಾನು ಹದರೋದಿಲ್ಲ. ಯಾವ ಮುಸ್ಲಿಂ ಗೂಂಡಾ ಪ್ರವೃತ್ತಿ ಮಾಡ್ತಾರೋ ಅಂಥವರಿಗೆ ಗೂಂಡಾ ಅಂತ ಕರೆಯದೇ, ಒಳ್ಳೇಯವರು ಎನ್ನಬೇಕಾ? ಯಾರೋ ಹೇಡಿ ಗುಂಡಾ ಪ್ರವೃತ್ತಿಯವನೇ ಈ ಪತ್ರ ಬರೆದಿರಬೇಕು. ಪತ್ರ ಬಂದಿದೆ, ಎಲ್ಲಿಂದ ಎಂಬುದು ಗೊತ್ತಿಲ್ಲ. ಈ ಹಿಂದೆ ವಿದೇಶದಿಂದಲೂ ಕರೆ ಬಂದಿತ್ತು. ಈ ಪತ್ರ ನಮ್ಮ ರಾಜ್ಯದ್ದೇ ಆಗಿದ್ದು ಹೇಡಿ ಕಂಡು ಹಿಡಿಯುತ್ತಾರೆನ್ನುವ ಭರವಸೆ ಇದೆ ಎಂದರು.
Published On - 9:36 pm, Wed, 24 August 22