ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣಪ ಮೂರ್ತಿ ತಯಾರಿ: ತಂದೆಯ ವೃತ್ತಿಯನ್ನೇ ಜೀವಾಧಾರವಾಗಿ ಮಾಡಿಕೊಂಡ ಮೂಗಪ್ಪನ ಕಥೆ

ಕಂಬಾಳು ಗ್ರಾಮದ ರೇಣುಕಪ್ಪನವರು ಜೇಡಿಮಣ್ಣನ್ನು ಬಳಸಿ ತಯಾರಿಸುವ ಗಣಪನನ್ನೇ ಪ್ರತಿ ವರ್ಷ ತಯಾರಿ ಮಾಡಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ಜೀವನಕ್ಕೆ ಗಣಪನ ಮೂರ್ತಿ ಮಾರಾಟವನ್ನೇ ಅವಲಂಭಿಸಿದ್ದು ಈ ಬಾರಿ ಮಳೆಯಿಂದಾಗಿ ಕೆರೆ ತುಂಬಿರುವುದರಿಂದ ಜೇಡಿ ಮಣ್ಣಿನ ಕೊರತೆ ಎದುರಾಗಿದೆ.

ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣಪ ಮೂರ್ತಿ ತಯಾರಿ: ತಂದೆಯ ವೃತ್ತಿಯನ್ನೇ ಜೀವಾಧಾರವಾಗಿ ಮಾಡಿಕೊಂಡ ಮೂಗಪ್ಪನ ಕಥೆ
ರೇಣುಕಪ್ಪ
Follow us
TV9 Web
| Updated By: ಆಯೇಷಾ ಬಾನು

Updated on:Aug 30, 2022 | 8:33 PM

ನೆಲಮಂಗಲ: ಇದೇ ತಿಂಗಳ 31ರಂದು ವಿನಾಯಕ ಚತುರ್ಥಿ ಇದೆ. ಹೀಗಾಗಿ ಹಬ್ಬದ ಬಹಳ ಮೊದಲೇ ಗಣೇಶನ ವಿಗ್ರಹಗಳ ತಯಾರಿ ಬಹಳ ಜೋರಾಗಿ ನಡೆಯುತ್ತಿದೆ. ಹಲವು ವಿಶಿಷ್ಟ ಗಣಪನ ಮೂರ್ತಿಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡುತ್ತಿದ್ದು ಅಯೋದ್ಯಾ ಗಣಪ, ಪುನೀತ್ ರಾಜ್ ಕುಮಾರ್ ಜೊತೆಗಿರುವ ಅಪ್ಪು ಗಣಪಗಳು ನೆಟ್ಟಿಗರನ್ನು ಆಕರ್ಷಿಸುತ್ತಿವೆ.

ಅದರಂತೆ ಸೋಂಪುರ ಹೋಬಳಿಯ ಕಂಬಾಳು ಗ್ರಾಮದಲ್ಲಿ ತನ್ನ ತಂದೆಯ ಜೊತೆ ಸೇರಿಕೊಂಡು ಸುಮಾರು 50 ವರ್ಷಗಳಿಂದ ಗಣಪನ ವಿಗ್ರಹ ತಯಾರಿಗೆ ಹೆಸರುವಾಸಿಯಾಗಿರುವ ರೇಣುಕಪ್ಪನವರು ಆಕರ್ಷಕ ಗಣಪತಿ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.

ಪರಿಸರ ಸ್ನೇಹಿ ಗಣಪ ತಯಾರಿ

ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಸರ್ಕಾರ ಹಲವು ವರ್ಷಗಳ ಹಿಂದೆಯೇ ನಿಷೇಧ ಹೇರಿರುವ ಹಿನ್ನೆಲೆ ಎಲ್ಲೆಡೆ ಮಣ್ಣಿನ ಗಣಪನ ಮೂರ್ತಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಅದರಂತೆ ಕಂಬಾಳು ಗ್ರಾಮದ ರೇಣುಕಪ್ಪನವರು ಜೇಡಿಮಣ್ಣನ್ನು ಬಳಸಿ ತಯಾರಿಸುವ ಗಣಪನನ್ನೇ ಪ್ರತಿ ವರ್ಷ ತಯಾರಿ ಮಾಡಿಕೊಂಡು ಬರುತ್ತಿದ್ದಾರೆ. ಇವರು ತಮ್ಮ ಜೀವನಕ್ಕೆ ಗಣಪನ ಮೂರ್ತಿ ಮಾರಾಟವನ್ನೇ ಅವಲಂಭಿಸಿದ್ದು ಈ ಬಾರಿ ಮಳೆಯಿಂದಾಗಿ ಕೆರೆ ತುಂಬಿರುವುದರಿಂದ ಜೇಡಿ ಮಣ್ಣಿನ ಕೊರತೆ ಎದುರಾಗಿದೆ. ಇದರಿಂದ ಹೆಚ್ಚಿನ ವಿಗ್ರಹ ತಯಾರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಮಾತುಬಾರದ ವ್ಯಕ್ತಿಯಿಂದ ಗಣೇಶ ಮೂರ್ತಿ ತಯಾರಿ

ಶಿವಗಂಗೆಯ ತಪ್ಪಲಿನಲ್ಲಿರುವ ಕಂಬಾಳು ಗ್ರಾಮದ ರೇಣುಕಪ್ಪ. ಕೆ.ಆರ್ ರವರಿಗೆ ಹುಟ್ಟಿನಿಂದಲೇ ಮಾತು ಬರುವುದಿಲ್ಲ ಹಾಗೂ ಕಿವಿ ಸಹ ಕೇಳುವುದಿಲ್ಲ ಆದರೂ ಅವರಲ್ಲಿರುವ ವಿಗ್ರಹ ತಯಾರಿಸುವ ಕಲೆಯಿಂದಾಗಿ ಕಂಬಾಳು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂಗಪ್ಪನೆಂದೇ ಪ್ರಸಿದ್ದಿಗಳಿಸಿದ್ದಾರೆ. ಇವರ ಪೂರ್ವಜರು ಸಹ ಇದೇ ಕಸುಬು ಮಾಡುತ್ತಿದ್ದದ್ದರಿಂದ ರೇಣುಕಪ್ಪನವರಿಗೆ ಈ ಕಲೆ ಒಲಿದಿದೆ ಎನ್ನುತ್ತಾರೆ ಸ್ಥಳೀಯರು.

ಪ್ರಸಿದ್ದ ಸಿದ್ದಗಂಗಾ ಮಠಕ್ಕೂ ಕಂಬಾಳು ಗ್ರಾಮದಿಂದಲೇ ಗಣಪನ ಕೊಡುಗೆ

ಪ್ರತಿಷ್ಟಿತ ಶ್ರೀ ಸಿದ್ದಗಂಗಾ ಮಠದಲ್ಲಿಯೂ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಗಣೇಶ ಚತುರ್ಥಿ ಆಚರಿಸುವುದು ವಾಡಿಕೆ ಅದರಂತೆ ರೇಣುಕಪ್ಪನವರು ಸುಮಾರು ವರ್ಷಗಳಿಂದ ಸಿದ್ದಗಂಗಾ ಮಠಕ್ಕೆಂದೇ ಒಂದು ಗಣಪನ ಮೂರ್ತಿಯನ್ನು ತಯಾರಿಸಿ ಉಚಿತವಾಗಿ ನೀಡುವ ಪ್ರತೀತಿ ರೂಢಿಸಿಕೊಂಡಿದ್ದು, ಅದರಂತೆ ಪ್ರತಿವರ್ಷ ಮಠದವರು ಬಂದು ಪೂಜೆ ಸಲ್ಲಿಸಿ ಗಣೇಶನ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ. ಶ್ರೀ ಮಠವು ಗಣೇಶ ಮೂರ್ತಿಯ ವಿಸರ್ಜನೆಯ ದಿನದಂದು ರೇಣುಕಪ್ಪನವರನ್ನು ಕರೆದು ಸನ್ಮಾನವನ್ನೂ ಮಾಡುತ್ತಾರೆ.

ವಿಭಿನ್ನ ಹಾಗೂ ಸರಳ ಗಣಪನ ಮೂರ್ತಿಗೆ ಒತ್ತು

ಮಣ್ಣಿನಿಂದ ಮಾಡುವ ಗಣಪನಿಗೆ ಜೀವ ತುಂಬುವ ಕಲೆ ರೇಣುಕಪ್ಪನವರಿಗೆ ಕರಗತವಾಗಿದೆ. ಒಂದು, ಎರಡು, ಮೂರು ಅಡಿ ಗಣಪನ ಮೂರ್ತಿಯ ಜೊತೆಗೆ ಗೌರಿಯ ಮೂರ್ತಿಗಳನ್ನೂ ನಿರ್ಮಾಣ ಮಾಡಿ ಮಾರಾಟ ಮಾಡುತ್ತಾರೆ. ಈ ಬಾರಿ ಸರಳವಾಗಿರುವ ಹಾಗೂ ಆಕರ್ಷಿತವಾಗಿರುವ ಮೂರ್ತಿಗಳನ್ನು ನಿರ್ಮಾಣ ಮಾಡಿದ್ದು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

ನಾವು ಕಡಿಮೆ ಬೆಲೆಗೆ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದು, ನಮ್ಮ ಮನೆಯವರು ಅವರ ತಂದೆಯವರಿಂದ ಕಲಿತ ಕಸುಬಾಗಿದೆ. ಇದರಲ್ಲಿ ಅಷ್ಟೇನು ಲಾಭವಿಲ್ಲವಾದರೂ ಅವರಿಗೆ ಮಾತು ಬಾರದ ಹಾಗೂ ಕಿವಿ ಕೇಳದ ಹಿನ್ನೆಲೆ ಬೇರೆ ವೃತ್ತಿ ನಿರ್ವಹಿಸುವುದು ಕಷ್ಟ ಸುಮಾರು 5೦ ವರ್ಷಗಳಿಂದಲೂ ಇದೇ ವೃತ್ತಿ ಮಾಡುತ್ತಿದ್ದಾರೆ ಹಾಗಾಗಿ ಪ್ರತಿವರ್ಷ ಸುಮಾರು ತಿಂಗಳುಗಳ ಕಾಲ ಶ್ರಮವಹಿಸಿ ವಿಗ್ರಹ ನಿರ್ಮಾಣ ಮಾಡುತ್ತಾರೆ. ನಾವು ವಿಗ್ರಹಗಳ ಮಾರಾಟದಿಂದಲೇ ಜೀವನದ ನಿರ್ವಹಣೆ ಮಾಡಬೇಕಿದೆ ಎಂದು ರೇಣುಕಪ್ಪರವರ ಶ್ರೀಮತಿ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

ಕಲಾವಿಧ ಮೂಕಪ್ಪ ರೇಣುಕಪ್ಪನವರಿಗೆ ಎರಡು ಮಕ್ಕಳಿದ್ದು, ಉನ್ನತ ವಿದ್ಯಾಭ್ಯಾಸದ ಕನಸು ಕಂಡಿದ್ದಾರೆ. ಆದ್ರೆ ಅವರಿಗೆ ಬರುವ ಆದಾಯದಲ್ಲಿ ಅಷ್ಟು ಸುಧಾರಣೆ ಕಂಡಿಲ್ಲ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಇವರ ನೆರವಿಗೆ ನಿಲ್ಲಬೇಕೆಂದು ಸ್ಥಳೀಯರ ಆಶಯವಾಗಿದೆ.

ರೇಣುಕಪ್ಪನವರಿಗೆ ವಿಗ್ರಹ ನಿರ್ಮಿಸುವ ಕಲೆ ದೇವರು ನೀಡಿರುವ ವರವೆಂದರೆ ತಪ್ಪಾಗಲಾರದು. ವಿಗ್ರಹ ನಿರ್ಮಾಣದಿಂದಲೇ ಜೀವನ ನಿರ್ವಹಿಸುತ್ತಿರುವ ಇಂತಹ ಬಡ ಕುಟುಂಬಗಳಿಗೆ ಸರ್ಕಾರ ಸಹಾಯ ಮಾಡಿ ಪ್ರೋತ್ಸಾಹಿಸಿದಾಗ ಮಾತ್ರ ಕಲೆಗೆ ನಿಜವಾದ ಬೆಲೆಕೊಟ್ಟಂತಾಗುತ್ತದೆ. ಅದರಲ್ಲೂ ಪರಿಸರ ಸ್ನೇಹಿ ಗಣಪನ ನಿರ್ಮಾಣಕ್ಕೆ ಇವರು ಪ್ರಖ್ಯಾತಿ ಗಳಿಸಿದ್ದು ಜನರೂ ಸಹ ಚೌಕಾಸಿ ಮಾಡದೆ ಆತನ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ನಾನು ಕೂಡ ಈ ಬಾರಿ ಇವರಿಂದಲೇ 101ಗಣೇಶನ ಮೂರ್ತಿ ಖರೀದಿಸಲು ಉತ್ಸುಕನಾಗಿ ನೆರವಾಗುವೆ ಎಂದು ಜಗದೀಶ್ ಚೌಧರಿ ತಿಳಿಸಿದರು.

ವರದಿ: ಮೂರ್ತಿ.ಬಿ, ಟಿವಿ9 ನೆಲಮಂಗಲ

Published On - 9:12 pm, Wed, 24 August 22

ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!