ಶಿವಮೊಗ್ಗ: ಪ್ರೇಮ ಸಿಂಗ್​ಗೆ ಚಾಕು ಇರಿದ ಗಲಾಟೆ ವೇಳೆ ಮುಸ್ಲಿಂ ಯುವಕನೋರ್ವನ ಮೇಲೂ ಹಲ್ಲೆ

ಗಾಂಧಿ ಬಜಾರ್ ನಲ್ಲಿ ಪ್ರೇಮ್​ ಸಿಂಗ್ ಯುವಕನಿಗೆ ಚಾಕು ಇರಿದ ಗಲಾಟೆ ವೇಳೆ ಮುಸ್ಲಿಂ ಯುವಕನೋರ್ವನ ಮೇಲೂ ಹಲ್ಲೆ ನಡೆದಿದೆ.

ಶಿವಮೊಗ್ಗ: ಪ್ರೇಮ ಸಿಂಗ್​ಗೆ ಚಾಕು ಇರಿದ ಗಲಾಟೆ ವೇಳೆ ಮುಸ್ಲಿಂ ಯುವಕನೋರ್ವನ ಮೇಲೂ ಹಲ್ಲೆ
ಶಿವಮೊಗ್ಗ
Updated By: ವಿವೇಕ ಬಿರಾದಾರ

Updated on: Aug 17, 2022 | 10:42 AM

ಶಿವಮೊಗ್ಗ: ಗಾಂಧಿ ಬಜಾರ್ (Gandhi Bazaar) ನಲ್ಲಿ ಪ್ರೇಮ್​ ಸಿಂಗ್ ಯುವಕನಿಗೆ ಚಾಕು ಇರಿದ ಗಲಾಟೆ ವೇಳೆ ಮುಸ್ಲಿಂ ಯುವಕನೋರ್ವನ ಮೇಲೂ ಹಲ್ಲೆ ನಡೆದಿದೆ. ಶಿವಮೊಗ್ಗದ (Shivamogga) ಜೆಪಿ ನಗರದ ಸದ್ದಾಂ ಹುಸೇನ್.ಎಂ ಜಮಖಂಡಿ ಎಂಬ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಯುವಕ ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾನೆ. ಸದ್ದಾಂ ಹುಸೇನ್ ಗಾಂಧಿ ಬಜಾರ್​ನ ಅಂಬಾಭವಾನಿ ಮೆಟಲ್ ಸ್ಟೋರ್ನಲ್ಲಿ ಕೆಲಸ ಮಾಡುತ್ತಿದ್ದಾನೆ.

ಗಲಾಟೆ ಹಿನ್ನೆಲೆ ಯುವಕ ಅಂಗಡಿ ಕ್ಲೋಸ್ ಮಾಡಿಕೊಂಡು ಹೋಗುತ್ತಿದ್ದನು. ಈ ವೇಳೆ ಗಾಂಧಿ ಬಜಾರ್​​ನ ಉಪ್ಪಾರಕೇರಿ ಕ್ರಾಸ್​ನಲ್ಲಿ ಏಕಾಏಕಿ ಬೈಕ್ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. 10 ರಿಂದ 12 ಜನರ ಯುವಕರ ಗುಂಪಿನಿಂದ ಸದ್ದಾಂ ಹುಸೇನ್ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ.

ಹಲ್ಲೆಗೊಳಗಾದ ಸದ್ದಾಂ ಆಸ್ಪತ್ರೆಗೆ ದಾಖಲಾಗಿ, ಬಳಿಕ ಪೊಲೀಸರಿಗೆ ದೂರು ನೀಡಿದ್ದಾನೆ. ಸದ್ದಾಂ ಹುಸೇನ್ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಿದ್ದಾನೆ. ಆರೋಪಿಗಳ ಪತ್ತೇಗೆ ದೊಡ್ಡಪೇಟೆ ಪೊಲೀಸರು‌ ಬಲೆ ಬೀಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:39 am, Wed, 17 August 22