AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಸ್ಲಿಮರದ್ದು ಒಂದಿಂಚೂ ಜಾಗ ಇಲ್ಲ ಇಲ್ಲಿ; ಎಲ್ಲಾ ಹಿಂದೂಸ್ಥಾನದ್ದು: ಕೆ ಎಸ್ ಈಶ್ವರಪ್ಪ ಘಂಟಾಘೋಷ

ಮುಸ್ಲಿಂ ಗೂಂಡಾಗೆ ಶೂಟ್ ಮಾಡಿ, ಬಂಧನ ಮಾಡಿರೋದು ರಾಜ್ಯದಲ್ಲಿ ಇದು ಮೊದಲನೇ ಬಾರಿ. ಇದು ಆರಂಭ. ಮುಂದೆ ಇನ್ನೂ ಇದೆ. ನರೇಂದ್ರ ಮೋದಿ ಭಾಷಣ ನೋಡಿ ನಿನ್ನೆ ತಡೆಯಲು ಆಗದೆ ಹೀಗೆ ಮಾಡ್ತಾ ಇದ್ದಾರೆ. ಆಸೀಫ್ ನ ಹೆಂಡತಿ ಶಿವಮೊಗ್ಗ ಪಾಲಿಕೆಯ ಕಾಂಗ್ರೆಸ್ ಕಾರ್ಪೋರೇಟರ್. ಈ ಗಲಾಟೆಗಳ ಹಿಂದೆ ಕಾಂಗ್ರೆಸ್ ಇದೆ. ಮುಬಾರಕ್ ಕೃತ್ಯದ ಹಿಂದೆಯೂ ಕಾಂಗ್ರೆಸ್ ಕೈವಾಡ ಇದೆ.

ಮುಸ್ಲಿಮರದ್ದು ಒಂದಿಂಚೂ ಜಾಗ ಇಲ್ಲ ಇಲ್ಲಿ; ಎಲ್ಲಾ ಹಿಂದೂಸ್ಥಾನದ್ದು:  ಕೆ ಎಸ್ ಈಶ್ವರಪ್ಪ ಘಂಟಾಘೋಷ
ಮುಸ್ಲಿಮರದ್ದು ಒಂದಿಂಚೂ ಜಾಗ ಇಲ್ಲ; ಎಲ್ಲಾ ಹಿಂದೂಸ್ಥಾನದ್ದು: ಕೆ ಎಸ್ ಈಶ್ವರಪ್ಪ ಘಂಟಾಘೋಷ
TV9 Web
| Updated By: ಸಾಧು ಶ್ರೀನಾಥ್​|

Updated on:Aug 16, 2022 | 7:13 PM

Share

ಶಿವಮೊಗ್ಗ: ತಾವು ಪ್ರತಿನಿಧಿಸುವ ಶಿವಮೊಗ್ಗ ಕ್ಷೇತ್ರ ಮತ್ತು ಭದ್ರಾವತಿಯಲ್ಲಿ ಸ್ವಾತಂತ್ರ್ಯೋತ್ಸವದ ವೇಳೆ ಹಿಂಸಾಚಾರ ಕಾಣಿಸಿಕೊಂಡಿದ್ದರ ಬಗ್ಗೆ ಮಾಹಿ ಸಚಿವ ಕೆ ಎಸ್ ಈಶ್ವರಪ್ಪ ಭದ್ರಾವತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸುನೀಲನ ಮೂಗು ಮೂಳೆ ಕಟ್ ಆಗಿದೆ. ಅದಕ್ಕೆ ಏನ್ ಟ್ರೀಟ್ ಮೆಂಟ್ ಬೇಕು ಅದನ್ನ ಮಾಡುವಂತೆ ಹೇಳಿದ್ದೇನೆ. ಚಿಕಿತ್ಸೆ ಇಲ್ಲೆ ಕೊಡಿ ಇಲ್ಲ ಅಂದ್ರೆ ಶಿವಮೊಗ್ಗಕ್ಕೆ ಕರ್ಕೊಂಡು ಹೋಗಿ ಅಂದಿದೀನೇ. ಮುಬಾರಕ್ ಅನ್ನೋನು ಒಬ್ಬ ಮುಸ್ಲಿಂ ಗೂಂಡಾ. ಭದ್ರಾವತಿಯಲ್ಲಿ ಇರೋ ಪ್ರಮುಖರು ರಕ್ಷಣೆ ಕೊಡ್ತಾ ಇದ್ದಾರಾ..? ಯಾವುದಾದರೂ ಸಂಘಟನೆ ಜೊತೆ ಇದ್ದಾನಾ ನೋಡಬೇಕು. ಚಾಕುವಿನಿಂದ ಅಟ್ಯಾಕ್ ಮಾಡಲು ನೋಡಿದ್ದಾರೆ ಆಗಿಲ್ಲ. ಅನೇಕ ಬಾರಿ ಗೂಂಡಾಗಿರಿ ಮಾಡಿ ಜೈಲಿಗೆ ಹೋಗಿ ಬಂದಿದ್ದಾನೆ. ಬೆಳಗ್ಗೆ ಸಿಎಂ ಜೊತೆ ಸಹ ಚರ್ಚೆ ಮಾಡಿದ್ದೇನೆ.

  1. ಮೂರು ಆರೋಪಿಗಳು ಪೊಲೀಸರ ವಶಕ್ಕೆ, ಒಬ್ಬನಿಗೆ ಚಿಕಿತ್ಸೆ ಮುಂದುವರಿಕೆ: ಶಿವಮೊಗ್ಗದಲ್ಲಿ ಪ್ರೇಮ್​ ಸಿಂಗ್​ ಹೊಟ್ಟೆಗೆ ಚಾಕು ಇರಿತ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಮೂವರು ಆರೋಪಿಗಳನ್ನು 2 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಲಾಗಿದೆ. ನದೀಮ್, ಅಬ್ದುಲ್ ರೆಹಮಾನ್, ತನ್ವೀರ್​ ನನ್ನು ಪೊಲೀಸರ ವಶಕ್ಕೆ ನೀಡಿ ಶಿವಮೊಗ್ಗದ 2ನೇ ಜೆಎಂಎಫ್​ಸಿ ನ್ಯಾಯಾಲಯ ಆದೇಶ ನೀಡಿದೆ. ಜಬೀವುಲ್ಲಾ ಕಾಲಿಗೆ ಗುಂಡೇಟಿನ ಗಾಯವಾಗಿದ್ದರಿಂದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾರೂ ಈ ತರಹ ಗೂಂಡಾಗಿರಿ ಮಾಡ್ತಾರೋ ಅವರ ಮೇಲೆ ಕ್ರಮಕ್ಕೆ ಹೇಳಿದ್ದೀನಿ. ನಿನ್ನೆ ಸರ್ಕಾರಿ ಕಾರ್ಯಕ್ರಮಗಳು ಯಶಸ್ವಿಯಾಗಿ ಆಗಿವೆ. ಇಂತಹ ಟೈಂನಲ್ಲಿ ಕೆಲವು ಮುಸ್ಲಿಮರು ಸಾವರ್ಕರ್ ಪೋಟೋ ತೆಗೆದು ಹಾಕ್ತಾ ಇದ್ದಾರೆ ಅಂತ ಸುದ್ದಿ ಬಂತು. ಪೊಲೀಸರು ಬಹಳ ಬುದ್ದಿವಂತಿಕೆಯಿಂದ ಕೆಲಸ ಮಾಡಿದ್ದರು. 144 ಸೆಕ್ಷನ್ ಹಾಕಿದ ಟೈಂನಲ್ಲಿ ಪ್ರೇಮ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಒಂದು ರೀತಿ ಅಕ್ಷ್ಯಮ್ಯ ಅಪರಾಧ. ಹರ್ಷ ಕೊಲೆ, ಪ್ರವೀಣ್ ಕೊಲೆ ಆಯ್ತು, ನಿನ್ನೆ ಮತ್ತೆ ಘಟನೆ ಆಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ 32 ಕೊಲೆಗಳು ಆಗಿವೆ. ಈಗ ನಮ್ಮದೇ ಸರ್ಕಾರ ಇದ್ರೂ ಹೀಗೆ ಆಗ್ತಿದೆ ಅಂತಿದ್ದಾರೆ. ನಮ್ಮ ಶಕ್ತಿ ಮೀರಿ ನಾವು ಕೆಲಸ ಮಾಡ್ತಾ ಇದ್ದೀವಿ. ಮುಸ್ಲಿಂ ಗೂಂಡಾಗೆ ಶೂಟ್ ಮಾಡಿ, ಬಂಧನ ಮಾಡಿರೋದು ರಾಜ್ಯದಲ್ಲಿ ಇದು ಮೊದಲನೇ ಬಾರಿ. ಇದು ಆರಂಭ. ಮುಂದೆ ಇನ್ನೂ ಇದೆ. ನರೇಂದ್ರ ಮೋದಿ ಭಾಷಣ ನೋಡಿ ನಿನ್ನೆ ತಡೆಯಲು ಆಗದೆ ಹೀಗೆ ಮಾಡ್ತಾ ಇದ್ದಾರೆ. ಆಸೀಫ್ ನ ಹೆಂಡತಿ ಶಿವಮೊಗ್ಗ ಪಾಲಿಕೆಯ ಕಾಂಗ್ರೆಸ್ ಕಾರ್ಪೋರೇಟರ್. ಈ ಗಲಾಟೆಗಳ ಹಿಂದೆ ಕಾಂಗ್ರೆಸ್ ಇದೆ. ಮುಬಾರಕ್ ಕೃತ್ಯದ ಹಿಂದೆಯೂ ಕಾಂಗ್ರೆಸ್ ಕೈವಾಡ ಇದೆ. ಆಸೀಫ್ ಬಗ್ಗೆ ಕ್ರಮ ಕೈಗೊಳ್ಳಿ ಅಂತ ಯಾಕೆ ಕಾಂಗ್ರೆಸ್ ಹೇಳಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಇನ್ನು, ಮುಸ್ಲಿಂರ ಜಾಗದಲ್ಲಿ ಏಕೆ ಸಾವರ್ಕರ್ ಪೋಟೋ ಹಾಕಬೇಕಿತ್ತು? ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೆ ಎಸ್ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ಏನು‌ ಅವರ ಅಪ್ಪಂದ ಆ ಜಾಗ ? ಮುಸ್ಲಿಂದ್ದು ಒಂದಿಂಚೂ ಜಾಗ ಇಲ್ಲ; ಎಲ್ಲಾ ಹಿಂದೂಸ್ಥಾನದ್ದು. ಮುಸ್ಲಿಂಮರಿಗೆ ಯಾವ ಜಾಗವನ್ನೂ ನಾವು ಕೊಟ್ಟಿಲ್ಲ. ಯಾವುದು ಮುಸಲ್ಮಾಮರ ಜಾಗ ? ಇದು ಸಿದ್ದರಾಮಯ್ಯ ಅವರ ರಾಷ್ಟ್ರದ್ರೋಹದ ಹೇಳಿಕೆ. ಸಾವರ್ಕರ್ ಬಗ್ಗೆ ಮಾತನಾಡೋಕೆ ಅರ್ಹತೆ ಇದೆಯಾ ಇವರಿಗೆ ? ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಬ್ಬರೂ ಸಿದ್ದರಾಮಯ್ಯ ಹೇಳಿಕೆ ಖಂಡಿಸಬೇಕು. ಸಿದ್ದರಾಮಯ್ಯರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಬೇಕು ಎಂದು ಭದ್ರಾವತಿಯಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಒತ್ತಾಯ ಮಾಡಿದ್ದಾರೆ.

  1. ಭದ್ರಾವತಿಯಲ್ಲಿ ಹಲ್ಲೆಗೀಡಾದ ಸುನಿಲ್ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ಸ್ಥಳಾಂತರ: ಬಜರಂಗದಳ ಕಾರ್ಯಕರ್ತ ಸುನಿಲ್ ಮೇಲೆ ಹಲ್ಲೆ ಪ್ರಕರಣದಲ್ಲಿ ಆತನನ್ನು ಭದ್ರಾವತಿ ಆಸ್ಪತ್ರೆಯಿಂದ ಶಿವಮೊಗ್ಗದಲ್ಲಿರುವ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಆಸ್ಪತ್ರೆ ಸಿಬ್ಬಂದಿ ಸುನಿಲ್​ನನ್ನು ಆಂಬುಲೆನ್ಸ್​ನಲ್ಲಿ ಕರೆದೊಯ್ದಿದ್ದಾರೆ.ಮುಬಾರಕ್​ & ಗ್ಯಾಂಗ್​ ಇಂದು ಬೆಳಗ್ಗೆ ಸುನಿಲ್ ಮೇಲೆ ಹಲ್ಲೆ ಮಾಡಿತ್ತು. ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುನಿಲ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್​ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Published On - 6:48 pm, Tue, 16 August 22