Shivmogga Violence: ಕೊಲೆ ಉದ್ದೇಶದಿಂದಲೇ ಪ್ರೇಮ್​ ಸಿಂಗ್ ಮೇಲೆ ದಾಳಿ ನಡೆದ ಶಂಕೆ, ತೀವ್ರಗೊಂಡ ತನಿಖೆ

ಶರವಣ ತಪ್ಪಿಸಿಕೊಳ್ಳುತ್ತಿದ್ದಂತೆಯೇ ಪ್ರೇಮ್​ ಸಿಂಗ್ ಮೇಲೆ ದಾಳಿ ನಡೆಯಿತು. ಚಾಕು ಇರಿದ ಪ್ರೇಮ್ ಸಿಂಗ್ ಜನರು ಇರುವ ಕಡೆಗೆ ಓಡಿದರು. ಇದನ್ನು ಗಮನಿಸಿದ ಆರೋಪಿಗಳು ಪರಾರಿಯಾದರು.

Shivmogga Violence: ಕೊಲೆ ಉದ್ದೇಶದಿಂದಲೇ ಪ್ರೇಮ್​ ಸಿಂಗ್ ಮೇಲೆ ದಾಳಿ ನಡೆದ ಶಂಕೆ, ತೀವ್ರಗೊಂಡ ತನಿಖೆ
ಆರೋಪಿಗಳಾದ ಜಬೀವುಲ್ಲಾ ಮತ್ತು ನದೀಂ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 16, 2022 | 2:04 PM

ಶಿವಮೊಗ್ಗ: ನಗರದಲ್ಲಿ ಸ್ವತಂತ್ರ ದಿನದಂದು ನಡೆದ ಚಾಕು ಇರಿತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೊಲೆ ಮಾಡುವ ಉದ್ದೇಶದಿಂದಲೇ ಆರೋಪಿಗಳು ಪ್ರೇಮ್​ ಸಿಂಗ್​ ಮೇಲೆ ದಾಳಿ ನಡೆಸಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಅಂಗಡಿಯನ್ನು ಮುಚ್ಚಿದ ನಂತರ ಪ್ರೇಮ್ ಸಿಂಗ್ ಮತ್ತು ಶರವಣ ಒಟ್ಟಿಗೆ ನಡೆದು ಹೋಗುತ್ತಿದ್ದ ವೇಳೆ ದಾಳಿ ನಡೆಯಿತು. ಮೊದಲು ಶರವಣ ಮೇಲೆ ದಾಳಿಗೆ ಯತ್ನಿಸಿದರು. ಆತ ತಪ್ಪಿಸಿಕೊಳ್ಳುತ್ತಿದ್ದಂತೆಯೇ ಪ್ರೇಮ್​ ಸಿಂಗ್ ಮೇಲೆ ದಾಳಿ ನಡೆಯಿತು. ಚಾಕು ಇರಿದ ಪ್ರೇಮ್ ಸಿಂಗ್ ಜನರು ಇರುವ ಕಡೆಗೆ ಓಡಿದರು. ಇದನ್ನು ಗಮನಿಸಿದ ಆರೋಪಿಗಳು ಪರಾರಿಯಾದರು.

ಆರೋಪಿಗಳನ್ನು ಜಬೀವುಲ್ಲಾ (A1), ತನ್ವೀರ್ (A2), ನದೀಮ್​ ​(A3) ಮತ್ತು ಅಬ್ದುಲ್​ ರೆಹಮಾನ್ (A4) ಎಂದು ಗುರುತಿಸಲಾಗಿದೆ. ಜಬೀವುಲ್ಲಾ ಚಾಕುವಿನಿಂದ ಇರಿದರೆ ತನ್ವೀರ್ ಹೆಲ್ಮಟ್​ನಿಂದ ಹೊಡೆದಿದ್ದಾನೆ. ನದೀಮ್​ ಮತ್ತು ಅಬ್ದಲ್​ ರೆಹಮಾನ್ ಕೃತ್ಯದಲ್ಲಿ ಜೊತೆಗಾರರೆಂಬ ಆರೋಪ ಹೊತ್ತಿದ್ದಾರೆ.

ಪ್ರೇಮ ಸಿಂಗ್ ಅವರಿಗೆ ಚಾಕುವಿನಿಂದ ಇರಿದ ನಂತರ ಉದ್ರಿಕ್ತ ಗುಂಪು ಚದುರಿಸಲು ಅಮೀರ್ ಅಹ್ಮದ್ ವೃತ್ತದಲ್ಲಿ ಲಾಠಿ ಜಾರ್ಜ್ ನಡೆಯಿತು. ಬಳಿಕ ಉದ್ರಿಕ್ತರ ಗುಂಪು ಕಸ್ತೂರ್ಬಾ ರಸ್ತೆಯ ಶ್ರೀ ನಂದಿ ಸಿಲ್ಕ್ ಅಂಗಡಿ ಮೇಲೆ ದಾಳಿ ನಡೆಸುವ ಜೊತೆಗೆ ಸರವಣ ಮತ್ತು ಪ್ರೇಮ ಸಿಂಗ್ ಅವರ ಮೇಲೆಯೂ ದಾಳಿಗೆ ಮುಂದಾಯಿತು. ಎಂಕೆಕೆ ರಸ್ತೆ ವೃತ್ತದ ಬಳಿ ಇಬ್ಬರನ್ನೂ ಅಟ್ಟಾಡಿಸಿದ ದುಷ್ಕರ್ಮಿಗಳು ಮೊದಲು ಸರವಣ ಮೇಲೆ ಹಲ್ಲೆ ನಡೆಸಿದರು. ಆತ ತಪ್ಪಿಸಿಕೊಂಡ ನಂತರ ಪ್ರೇಮ ಸಿಂಗ್​ನನ್ನು ಹಿಂಬಾಲಿಸಿದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ; ಪ್ರಮುಖ ಆರೋಪಿಯ ಮೇಲೆ ಪೊಲೀಸರ ಫೈರಿಂಗ್

ಉಪ್ಪಾರಕೇರಿ ಕ್ರಾಸ್​ನಲ್ಲಿ ಚಾಕುನಿಂದ ಜಬೀವುಲ್ಲಾ ದಾಳಿ ನಡೆಸಿದ. ಈತನಿಗೆ ತನ್ವೀರ್ ಸಾಥ್ ಕೊಟ್ಟ. ಇವರ ಜೊತೆ ನದೀಮ್ ಮತ್ತು ಅಬ್ದುಲ್ ರೆಹಮಾನ್ ದಾಳಿಗೆ ಸಾಥ್ ಕೊಟ್ಟ. ಚಾಕು ಇರಿತದ ಬಳಿಕ ಆತ ಜೀವ ಉಳಿಸಿಕೊಳ್ಳಲು ಓಡಿದ. ಬಳಿಕ ಬಟ್ಟೆ ಅಂಗಡಿ ಬಳಿಗೆ ಬಂದಾಗ ಜನರು ಗಾಯಾಳುವನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ದಾಳಿ ನಡೆದ ಕುರಿತು ಸರವಣ ಮಾಹಿತಿ ನೀಡಿದ್ದರಿಂದ ಪ್ರೇಮ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯವಾಯಿತು ಎಂದು ಪೊಲೀಸರು ತಿಳಿಸಿದರು.

Bhadravati Violence: ಹಿಂದೆಯೂ ಹಲವು ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದ ಆರೋಪಿ ಮುಬಾರಕ್

ಭದ್ರಾವತಿ: ಬಜರಂಗದಳ ಕಾರ್ಯಕರ್ತ ಸುನಿಲ್ ಚಾಕು ಇರಿತ ಪ್ರಕರಣದ ಮುಖ್ಯ ಅರೋಪಿ ಮುಬಾರಕ್ ಈ ಹಿಂದೆಯೂ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಮುಬಾರಕ್ ಜೊತೆಗೆ ಇತರ ನಾಲ್ವರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಈತನ ವಿರುದ್ಧ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ದಾಳಿಯಿಂದಾಗಿ ಸುನಿಲ್​ನ ಮೂಗಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಳೇ ನಗರ​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.