ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ; ಇಬ್ಬರು ಆರೋಪಿಗಳ ವಿರುದ್ಧ ಎನ್​ಐ ಚಾರ್ಜ್​ಶೀಟ್

|

Updated on: Mar 17, 2023 | 7:39 PM

ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ (Islamic State) ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿಯು (NIA) ಚಾರ್ಜ್​ಶೀಟ್ ಸಲ್ಲಿಸಿದೆ.

ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ; ಇಬ್ಬರು ಆರೋಪಿಗಳ ವಿರುದ್ಧ ಎನ್​ಐ ಚಾರ್ಜ್​ಶೀಟ್
ಎನ್​ಐಎ
Image Credit source: PTI
Follow us on

ಬೆಂಗಳೂರು: ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ (Islamic State) ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಏಜೆನ್ಸಿಯು (NIA) ಚಾರ್ಜ್​ಶೀಟ್ ಸಲ್ಲಿಸಿದೆ. ಸ್ಫೋಟ, ವಿಧ್ವಂಸಕ ಕೃತ್ಯಗಳನ್ನು ನಡೆಸುವ ಮೂಲಕ ಇಸ್ಲಾಮಿಕ್ ಸ್ಟೇಟ್‌ನ ಕೃತ್ಯಗಳನ್ನು ಕರ್ನಾಟಕದಲ್ಲಿ ಮುಂದುವರಿಸಲು ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಶಿವಮೊಗ್ಗದ ಮಾಜ್ ಮುನೀರ್ ಅಹ್ಮದ್ ಹಾಗೂ ಸೈಯದ್ ಯಾಸಿನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ, 121 ಎ, 122ರ ಅಡಿ ಚಾರ್ಜ್​ಶೀಟ್ ಸಲ್ಲಿಸಲಾಗಿದೆ. ಆರೋಪಿಗಳ ವಿರುದ್ಧ ಯುಎ(ಪಿ) ಕಾಯ್ದೆಯ ಸೆಕ್ಷನ್ 18, 18ಬಿ, 20, 38ರ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಬ್ಬರೂ ಬಿಟೆಕ್ ಪದವೀಧರರಾಗಿದ್ದು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳನ್ನು ಗುರಿಯಾಗಿಸಿ ವಿಧ್ವಸಂಕ ಕೃತ್ಯಗಳನ್ನೆಸಗಲು ವಿದೇಶಿ ಮೂಲದ ವ್ಯಕ್ತಿಯಿಂದ ಆನ್‌ಲೈನ್ ಮೂಲಕ ಪ್ರಚೋದನೆಗೊಳಪಟ್ಟಿದ್ದರು ಎಂಬುದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ.

ಅವರು ಸ್ಫೋಟಕಗಳನ್ನು ಸಂಗ್ರಹಿಸಿ ಐಇಡಿ ತಯಾರಿಸಿದ್ದರು. ಸೈಯದ್ ಯಾಸಿನ್ ಶಿವಮೊಗ್ಗದ ವಾರಾಹಿ ನದಿ ದಡದಲ್ಲಿ ಐಇಡಿ ಸಾಧನಗಳ ಸ್ಫೋಟ ಪ್ರಯೋಗವನ್ನೂ ನಡೆಸಿದ್ದ. ಆತ ತ್ರಿವರ್ಣ ಧ್ವಜವನ್ನು ಸುಟ್ಟುಹಾಕಿದ್ದ ಮತ್ತು ಅದರ ವೀಡಿಯೋ ಸಹ ರೆಕಾರ್ಡ್ ಮಾಡಿದ್ದ ಎಂದು ಎನ್ಐಎ ಚಾರ್ಜ್​ಶೀಟ್​​ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳು ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ವಾರಾಹಿ ನದಿ ಹಿನ್ನೀರಿನ ಅರಣ್ಯ ಪ್ರದೇಶಗಳಲ್ಲಿ ಅಡಗುದಾಣ ಹುಡುಕಿದ್ದರು. ಅವರ ಕೃತ್ಯಗಳಿಗೆ ವಿದೇಶಿ ವ್ಯಕ್ತಿಯು ಕ್ರಿಪ್ಟೋಕರೆನ್ಸಿಗಳ ಮೂಲಕ ಹಣವನ್ನು ಪಾವತಿಸಿದ್ದ. ಇಬ್ಬರೂ ತಮ್ಮ ಸ್ನೇಹಿತರ ಖಾತೆಯಿಂದ 2.12 ಲಕ್ಷ ರೂ. ಪಡೆದಿದ್ದರು ಎಂದು ಎನ್​ಐಎ ತಿಳಿಸಿದೆ.

ಇದನ್ನೂ ಓದಿ: Mangaluru Blast: ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 3 ರಾಜ್ಯಗಳಲ್ಲಿ NIA ದಾಳಿ: 40 ಸ್ಥಳಗಳಲ್ಲಿ ಶೋಧ

ಭಾರೀ ಸಂಚಿನ ಭಾಗವಾಗಿ, ಆರೋಪಿ ಮೊಹಮ್ಮದ್ ಶಾರಿಕ್ 2022ರ ನವೆಂಬರ್ 19ರಂದು ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ಸ್ಫೋಟಕ್ಕೆ ಸಂಚು ಹೂಡಿದ್ದ. ಆದರೆ, ಟೈಮರ್ ವೈಫಲ್ಯದಿಂದಾಗಿ ಅದು ಅಕಾಲಿಕವಾಗಿ ಸ್ಫೋಟಗೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಇತರ ಆರು ಆರೋಪಿಗಳ ವಿರುದ್ಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್​ಐ ತಿಳಿಸಿದೆ.

ಆರೋಪಿ ಜಬೀವುಲ್ಲಾ ಮತ್ತು ಇತರರು ಶಿವಮೊಗ್ಗದಲ್ಲಿ 2022ರ ಆಗಸ್ಟ್ 15 ರಂದು ಪ್ರೇಮ್ ಸಿಂಗ್ ಎಂಬಾತನಿಗೆ ಇರಿದ ನಂತರ ಕರ್ನಾಟಕ ಪೊಲೀಸರು ತನಿಖೆಯನ್ನು ಎನ್ಐಎಗೆ ವಹಿಸಿದ್ದರು. ನಂತರ ಐಎಸ್ ಜಾಲ ಬಯಲಿಗೆ ಬಂದಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ