ಚೆನ್ನಾಗಿರೋ ಮೋರಿ, ರಸ್ತೆ ಅಗೆದು ಕಾಮಗಾರಿ, ಸ್ಮಾರ್ಟ್ ಸಿಟಿ ಹೆಸರಲ್ಲಿ ಹಣ ದುರ್ಬಳಕೆ
ಶಿವಮೊಗ್ಗ: ಶಿವಮೊಗ್ಗ ನಗರದ ತುಂಬೆಲ್ಲಾ ಬರೀ ಸ್ಮಾರ್ಟ್ ಸಿಟಿ ಕಾಮಗಾರಿಗಳೇ. ಆದ್ರೆ, ನೂರಾರು ಕೋಟಿ ರೂ ವೆಚ್ಚದಲ್ಲಿ ನಡೀತಿರೋ ಈ ಕಾಮಗಾರಿಗಳನ್ನ ನೋಡಿದ್ರೆ ಸಾರ್ವಜನಿಕರೇ ಬೆಚ್ಚಿ ಬೀಳ್ತಿದ್ದಾರೆ. ಸರ್ಕಾರದ ದುಡ್ಡಲ್ಲಿ ಕಾಮಗಾರಿ ಮಾಡ್ಕೊಂಡು, ಜನರಿಗೆ ಟಾರ್ಚರ್ ಕೊಡ್ತಿದ್ದಾರೆ. ಇರುವ ಮೋರಿಯನ್ನೇ ಒಡೆದು, ಹೊಸ ಮೋರಿ ಕಟ್ತಿದ್ದಾರೆ. ಇರೋ ರಸ್ತೆ ಕಿತ್ತು ಹೊಸ ರಸ್ತೆ ಮಾಡ್ತಿದ್ದಾರೆ. ಚೆನ್ನಾಗಿರೋ ಪಾರ್ಕ್ ಹಾಳು ಮಾಡಿ ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಪಾರ್ಕ್ ಕಾಮಗಾರಿಗಳು ನಡೀತಿವೆ. ಅಂದಹಾಗೆ, ಎಲ್ಲಾ ಚೆನ್ನಾಗಿದ್ದೂ ಈ ರೀತಿ […]
ಶಿವಮೊಗ್ಗ: ಶಿವಮೊಗ್ಗ ನಗರದ ತುಂಬೆಲ್ಲಾ ಬರೀ ಸ್ಮಾರ್ಟ್ ಸಿಟಿ ಕಾಮಗಾರಿಗಳೇ. ಆದ್ರೆ, ನೂರಾರು ಕೋಟಿ ರೂ ವೆಚ್ಚದಲ್ಲಿ ನಡೀತಿರೋ ಈ ಕಾಮಗಾರಿಗಳನ್ನ ನೋಡಿದ್ರೆ ಸಾರ್ವಜನಿಕರೇ ಬೆಚ್ಚಿ ಬೀಳ್ತಿದ್ದಾರೆ. ಸರ್ಕಾರದ ದುಡ್ಡಲ್ಲಿ ಕಾಮಗಾರಿ ಮಾಡ್ಕೊಂಡು, ಜನರಿಗೆ ಟಾರ್ಚರ್ ಕೊಡ್ತಿದ್ದಾರೆ.
ಇರುವ ಮೋರಿಯನ್ನೇ ಒಡೆದು, ಹೊಸ ಮೋರಿ ಕಟ್ತಿದ್ದಾರೆ. ಇರೋ ರಸ್ತೆ ಕಿತ್ತು ಹೊಸ ರಸ್ತೆ ಮಾಡ್ತಿದ್ದಾರೆ. ಚೆನ್ನಾಗಿರೋ ಪಾರ್ಕ್ ಹಾಳು ಮಾಡಿ ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಪಾರ್ಕ್ ಕಾಮಗಾರಿಗಳು ನಡೀತಿವೆ. ಅಂದಹಾಗೆ, ಎಲ್ಲಾ ಚೆನ್ನಾಗಿದ್ದೂ ಈ ರೀತಿ ಕಾಮಗಾರಿ ಹೆಸ್ರಲ್ಲಿ ನಗರವನ್ನ ಹಾಳು ಗೆಡವಿ, ಹಣ ಪೋಲು ಮಾಡ್ತಿರೋದು ಶಿವಮೊಗ್ಗ ನಗರದಲ್ಲಿ.
ಸ್ಮಾರ್ಟ್ ಸಿಟಿ ಹೆಸರಿನ ಕಾಮಗಾರಿಗಳಲ್ಲಿ ಮನೆಮುಂದಿನ ಮೋರಿ, ಚರಂಡಿಗಳು, ಕುಡಿಯುವ ನೀರಿನ ಹೊಸ ಸಂಪರ್ಕ ವಿವಿಧ ಕಾಮಗಾರಿಗಳು ಅವೈಜ್ಞನಿಕವಾಗಿ ನಿರ್ಮಿಸ್ತಿದ್ದಾರೆ. ಉತ್ತಮ ಗುಣಮಟ್ಟ ಮತ್ತು ಕಟ್ಟುವ ವಿಧಾನವು ಸರಿಯಾಗಿಲ್ಲ. ಇದ್ರಿಂದ ಶಿವಮೊಗ್ಗ ಜನ ಕಂಗೆಟ್ಟು ಹೋಗಿದ್ದಾರೆ. ಈ ರೀತಿ ಎಡವಟ್ಟುಗಳನ್ನ ಮಾಡಿದ್ರೆ ನಗರ ಸ್ಮಾರ್ಟ್ ಆಗಲು ಹೇಗೆ ಸಾಧ್ಯ ಅಂತಾ ಆಕ್ರೋಶ ಹೊರಹಾಕ್ತಿದ್ದಾರೆ.
ಸ್ಮಾರ್ಟ್ ನಗರವನ್ನಾಗಿಸುವ ಸಲುವಾಗಿ ಮನಸ್ಸಿಗೆ ಬಂದಂತೆ ನಗರದ ತುಂಬೆಲ್ಲಾ ಮೋರಿ, ಚರಂಡಿಗಳನ್ನ ಹೊಡೆದು, ಮತ್ತೆ ಹೊಸ ಕಾಮಗಾರಿಗಳನ್ನ ಮಾಡ್ತಿದ್ದಾರೆ. ಶಿವಮೊಗ್ಗ ಪಾಲಿಕೆ ಆಯುಕ್ತರಾದ ಚಿದಾನಂದ ವಟಾರೆ ಅವರೇ, ಸ್ಮಾರ್ಟ್ ಸಿಟಿ ಎಂಡಿ ಆಗಿದ್ದಾರೆ. ಪಾಲಿಕೆ ಆಯುಕ್ತ ಮತ್ತು ಎಂಡಿ ಎರಡರ ಜವಾಬ್ದಾರಿಯನ್ನೇ ಒಬ್ಬರೇ ನಿರ್ವಹಿಸ್ತಿರೋದು ಸದ್ಯ ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆ ಮತ್ತು ಗೋಲ್ ಮಾಲ್ ನಿಂದ ಕೂಡಿವೆ. ಆದ್ರೆ, ಈ ಬಗ್ಗೆ ಖುದ್ದಾಗಿ ದೂರು ನೀಡಿದ್ರೆ ಪರಿಶೀಲಿಸೋದಾಗಿ ಆಯುಕ್ತರು ಹೇಳ್ತಿದ್ದಾರೆ.
ಒಟ್ಟಾರೆ ಶಿವಮೊಗ್ಗ ನಗರವು ಸ್ಮಾರ್ಟ್ ಆಗುತ್ತದೇ ಬಿಡುತ್ತದೆಯೋ ಗೊತ್ತಿಲ್ಲ. ಈ ಕಾಮಗಾರಿ ಮಾಡ್ತಿರೋ ಗುತ್ತಿಗೆದಾರರು ಮತ್ತು ಅಧಿಕಾರಗಳು ಮಾತ್ರ ಫುಲ್ ಸ್ಮಾರ್ಟ್ ಆಗ್ತಿದ್ದಾರೆ. ದಿನನಿತ್ಯ ಜನರು ಕಾಮಗಾರಿ ಧೂಳಿನಲ್ಲೇ ವನವಾಸ ಅನುಭವಿಸ್ತಿರೋದು ವಿಪರ್ಯಾಸ.
Published On - 12:41 pm, Fri, 21 February 20